ಸುಕ್ರಿ ಬೊಮ್ಮಗೌಡ ಸೇರಿದಂತೆ 89 ಸಾಧಕರಿಗೆ ಪದ್ಮ ಪ್ರಶಸ್ತಿ

Posted By:
Subscribe to Oneindia Kannada

ನವದೆಹಲಿ ಜನವರಿ25: ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿ ಪುರಸ್ಕೃತರ ಪಟ್ಟ ಪ್ರಕಟವಾಗಿದೆ. ಕರ್ನಾಟಕದ ಹಾಲಕ್ಕಿ ಒಕ್ಕಲಿಗ ಜನಾಂಗದ 'ಜಾನಪದ ಕೋಗಿಲೆ ' ಸುಕ್ರಿ ಬೊಮ್ಮಗೌಡ ಅವರು ಸೇರಿದಂತೆ 89 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

'ಎಲೆಮರೆಯ ಸಾಧಕರು'(unsung heroes) ಎಂಬ ವಿಭಾಗದಿಂದ ಪದ್ಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಮೂಲಕ ಜನಪ್ರಿಯತೆಯಿಂದ ದೂರವುಳಿದಿರುವ ಸಾಧಕರನ್ನು ಗುರುತಿಸಲು ಆಯ್ಕೆ ಸಮಿತಿ ಮುಂದಾಗಿದೆ.[2017ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ]

75 ವರ್ಷದ ಸುಕ್ರಿ ಬೊಮ್ಮಗೌಡ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಹಾಲಕ್ಕಿ ಜನಾಂಗದವರಾಗಿದ್ದಾರೆ. ಪಶ್ಚಿಮ ಬಂಗಾಳದ ಜಾನಪದ ಗಾಯಕ ಇಮ್ರತ್ ಖಾನ್ ಈ ವಿಭಾಗದಿಂದ ಅಯ್ಕೆಯಾಗಿದ್ದಾರೆ.[ರಾಜ್ಯದ ಯು. ಆರ್ ರಾವ್ ಸೇರಿದಂತೆ ಏಳು ಸಾಧಕರಿಗೆ ಪದ್ಮ ಪ್ರಶಸ್ತಿ]

ದೇಶದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ 2017ನೇ ಸಾಲಿನ ಪದ್ಮ ಪ್ರಶಸ್ತಿಗಳು ಅಧಿಕೃತವಾಗಿ ಬುಧವಾರ ಸಂಜೆ ಪ್ರಕಟಗೊಂಡಿದೆ. ಖ್ಯಾತ ಕ್ರಿಕೆಟ್ ಪಟು ಮಹೇಂದ್ರ ಸಿಂಗ್ ಧೋನಿ, ಒಲಿಂಪಿಕ್ ಪದಕ ವಿಜೇತರಾದ ಪಿ.ವಿ.ಸಿಂಧು, ಸಾಕ್ಷಿ ಮಲ್ಲಿಕ್, ಕೋಚ್ ಪುಲ್ಲೇಲ ಗೋಪಿಚಂದ್, ಸಾಮಾಜಿಕ ಕಾರ್ಯಕರ್ತ ಅಲೋಕ್ ಸಾಗರ್ ಸೇರಿದಂತೆ 150 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳು ಲಭಿಸಲಿದೆ.

150 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ

150 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ

75 ವರ್ಷದ ಸುಕ್ರಿ ಬೊಮ್ಮಗೌಡ ಅವರು 12 ವರ್ಷಕ್ಕೆ ಮದುವೆಯಾಗಿ ಸಂಸಾರದ ಭಾರ ಹೊತ್ತವರು. ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಜನಾಂಗದ ಮಹಿಳೆಯರ ಪರ ದನಿ ಎತ್ತಿದವರು. ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು. ಅರಣ್ಯ ಅತಿಕ್ರಮಣ ಸಕ್ರಮ ಹೋರಾಟ, ಸಾರಾಯಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಜನ ಜಾಗೃತಿ ಮೂಡಿಸಿದ್ದಾರೆ.

ಚಿನ್ನದ ಪದಕ ಗೆದ್ದ ಹೈ ಜಂಪ್ ಪಟು

ಚಿನ್ನದ ಪದಕ ಗೆದ್ದ ಹೈ ಜಂಪ್ ಪಟು

ಎಂ ತಂಗವೇಲು-ರಿಯೋ ಪ್ಯಾರಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಹೈ ಜಂಪ್ ಪಟು.
ತಮಿಳುನಾಡು ಮೂಲದ ತಂಗವೇಲು ಅವರು ಬೆಂಗಳೂರಿನಲ್ಲಿ ತರಬೇತಿ ಹೊಂದಿದವರು.

ಜಿಮ್ನಾಸ್ಟ್

ಜಿಮ್ನಾಸ್ಟ್

ದೀಪಾ ಕರ್ಮಾಕರ್- ಫೈನಲ್ ಹಂತ ತಲುಪಿ ನಾಲ್ಕನೇ ಸ್ಥಾನಕ್ಕೆ ತೃಪ್ತರಾದ ಜಿಮ್ನಾಸ್ಟ್

ಅಂಧರ ಕ್ರಿಕೆಟ್ ತಂಡ ನಾಯಕ

ಅಂಧರ ಕ್ರಿಕೆಟ್ ತಂಡ ನಾಯಕ

ಕರ್ನಾಟಕ ಮೂಲದ ಶೇಖರ್ ನಾಯ್ಕ್ ಅವರು ರಾಷ್ಟ್ರೀಯ ಕ್ರಿಕೆಟ್ (ಅಂಧರ) ತಂಡ ನಾಯಕರಾಗಿದ್ದಾರೆ

ಸಮಾಜಸೇವೆ

ಸಮಾಜಸೇವೆ

52 ವರ್ಷ ವಯಸ್ಸು, ಪಶ್ಚಿಮ ಬಂಗಾಲ, ಆಂಬ್ಯುಲೆನ್ಸ್ ದಾದಾ ಎಂದೇ ಕರೆಯಲ್ಪಡುವ ಕರೀಂಮುಲ್ಲಾ ಹಕ್ ಅವರು ಉಚಿತವಾಗಿ 24‍‍X7 ಬೈಕ್ ಆಂಬ್ಯುಲೆನ್ಸ್ ಸೇವೆ ನೀಡುತ್ತಿದ್ದಾರೆ.

ರಂಗಬಾತಿ ಕಿ ಅವಾಜ್

ರಂಗಬಾತಿ ಕಿ ಅವಾಜ್

64 ವರ್ಷ ವಯಸ್ಸು, ಒಡಿಶಾದ ಗಾಯಕ , 1000ಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಜಾನಪದ ಗಾಯಕ.

ಅನಾರ್ ದಾದಾ, ಗುಜರಾತ್

ಅನಾರ್ ದಾದಾ, ಗುಜರಾತ್

ಕೃಷಿಕರು, 52 ವರ್ಷ ವಯಸ್ಸು, ದಾಳಿಂಬೆ ಕೃಷಿ ಮೂಲಕ ಬರ ಪೀಡಿತ ಪ್ರದೇಶವನ್ನು ಹಸಿರಾಗಿಸಿದ ಸಾಧಕ.

ಲೇಖಕಿ, ಅಸ್ಸಾಂ

ಲೇಖಕಿ, ಅಸ್ಸಾಂ

81 ವರ್ಷ ವಯಸ್ಸು, ಲೇಖಕ ಹಾಗೂ ಶಿಕ್ಷಣ ವಿಭಾಗ. ಫಿಲಂ ಇನ್ಸ್ಟಿಟ್ಯೂಟ್ ಸ್ಥಾಪಕಿ.

ಎನ್ನಾರೈ, ಯುಎಸ್ ಎ

ಎನ್ನಾರೈ, ಯುಎಸ್ ಎ

51ವರ್ಷ ವಯಸ್ಸು, edX ಸ್ಥಾಪಕ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ 160ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರ

ಸ್ವಚ್ಛದೂತ, ಮಹಾರಾಷ್ಟ್ರ

ಸ್ವಚ್ಛದೂತ, ಮಹಾರಾಷ್ಟ್ರ

ಸಮಾಜಸೇವಕ ಡಾ. ಮಪೂಸ್ಕರ್ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಸಾಧಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The list of the Padma awards is out! Among the huge list of 1,730 nominations the centre has finalised 89 recipients for the prestigious award.The award ceremony will be held on the 68th Republic Day. the centre this year will also felicitate a large number of ‘unsung heroes’, including 75-year old Sukri Bommagowda and 70-year-old Imrat Khan from Nepal.
Please Wait while comments are loading...