ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ನಿಭಾಯಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ - ಅಮಿತ್ ಶಾ

|
Google Oneindia Kannada News

ನವದೆಹಲಿ, ಜೂನ್ 9: ''ಮಹಾಮಾರಿ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿರಬಹುದು, ತಪ್ಪು ಮಾಡಿರಬಹುದು. ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸದೇ ಇರಬಹುದು. ಆದ್ರೆ, ಸಮಸ್ಯೆಗಳ ಕುರಿತು ನಮ್ಮ ಬದ್ಧತೆ ಮತ್ತು ನಿಷ್ಠೆ ಮಾತ್ರ ಸ್ಪಷ್ಟವಾಗಿತ್ತು'' ಎಂದು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Recommended Video

Amit Shah : Government may have made a mistake while dealing with Corona.! | Narendra Modi | BJP

''ನರೇಂದ್ರ ಮೋದಿ ಸರ್ಕಾರ 1,70,000 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆದ್ರೆ, ಪ್ರತಿಪಕ್ಷಗಳು ಏನು ಮಾಡಿವೆ.?'' ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಕೋವಿಡ್-19 ಆರ್ಭಟ: ಅನ್ ಲಾಕ್ ಗೆ ಇದು ಸಕಾಲವೇ?ಭಾರತದಲ್ಲಿ ಕೋವಿಡ್-19 ಆರ್ಭಟ: ಅನ್ ಲಾಕ್ ಗೆ ಇದು ಸಕಾಲವೇ?

''ವಲಸೆ ಕಾರ್ಮಿಕರು ಕಷ್ಟ ಪಟ್ಟಿರುವುದನ್ನು ನಾನು ನೋಡಿದ್ದೇನೆ. ಈ ಬಗ್ಗೆ ನನಗೆ ದುಃಖವಿದೆ. ಪ್ರಧಾನಿಗೂ ಮರುಕವಿದೆ'' ಎಂದು ಸಂದರ್ಶನವೊಂದರಲ್ಲಿ ಅಮಿತ್ ಶಾ ತಿಳಿಸಿದ್ದಾರೆ.

ಕೋವಿಡ್-19 ಕುರಿತು ಅಮಿತ್ ಶಾ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನಾವು ಸೋತಿದ್ದೇವೆ.!

ನಾವು ಸೋತಿದ್ದೇವೆ.!

''ಕೆಲವು ವಿಚಾರಗಳಲ್ಲಿ ನಾವು ಸೋತಿದ್ದೇವೆ. ನಮ್ಮಿಂದ ಕೆಲವು ತಪ್ಪುಗಳಾಗಿವೆ. ಆದ್ರೆ, ನಮ್ಮ ಬದ್ಧತೆ ಮಾತ್ರ ಸ್ಪಷ್ಟವಾಗಿತ್ತು. ಆದ್ರೆ ನೀವೇನ್ ಮಾಡಿದ್ದೀರಿ.? ಜನರಿಗೆ ನಿಮ್ಮ ಬದ್ಧತೆಯನ್ನು ತೋರಿಸಿದ್ದೀರಾ.? ಕೊರೊನಾ ವೈರಸ್ ಸಮಸ್ಯೆ ಶುರುವಾದಾಗ ನರೇಂದ್ರ ಮೋದಿ ಸರ್ಕಾರ 60 ಕೋಟಿ ಜನರಿಗೆ 1,70,000 ಕೋಟಿ ಪ್ಯಾಕೇಜ್ ಘೋಷಿಸಿತ್ತು. ಹೀಗಿದ್ದರೂ, ನಮ್ಮನ್ನೇ ಪ್ರಶ್ನೆ ಮಾಡ್ತೀರಾ.? ಸಂದರ್ಶನ ನೀಡುವುದನ್ನು ಬಿಟ್ಟರೆ ಕಾಂಗ್ರೆಸ್ ಬೇರೇನೂ ಮಾಡಿಲ್ಲ'' ಎಂದಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ.

ನನಗೆ ದುಃಖ ಆಗಿದೆ

ನನಗೆ ದುಃಖ ಆಗಿದೆ

''ಲಾಕ್ ಡೌನ್ ನಿಂದಾಗಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ ವಲಸೆ ಕಾರ್ಮಿಕರು ಖಂಡಿತವಾಗಿಯೂ ಕಷ್ಟಗಳನ್ನು ಎದುರಿಸಿದ್ದಾರೆ. ಒಡಿಶಾದಲ್ಲೂ 3 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ವಾಪಸ್ ತೆರಳಿದರು. ವಲಸೆ ಕಾರ್ಮಿಕರು ಕಷ್ಟ ಪಟ್ಟಿರುವುದನ್ನು ನಾನು ನೋಡಿದ್ದೇನೆ. ಈ ಬಗ್ಗೆ ನನಗೆ ದುಃಖವಿದೆ. ಪ್ರಧಾನಿಗೂ ಮರುಕವಿದೆ. ಮೇ 1 ರಿಂದ ಮೋದಿ ಶ್ರಮಿಕ್ ರೈಲುಗಳನ್ನು ಪ್ರಾರಂಭಿಸಿದರು. ಕರ್ಚು-ವೆಚ್ಚವನ್ನು ರಾಜ್ಯ ಸರ್ಕಾರಗಳು ವಹಿಸಿಕೊಂಡವು. ರೈಲ್ವೇ ಇಲಾಖೆ ಅವರುಗಳಿಗೆ ಅನ್ನ-ನೀರು ನೀಡಿತು. ಕ್ವಾರಂಟೈನ್ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರಗಳು ವಹಿಸಿಕೊಂಡವು. ಈ ಎಲ್ಲಾ ಕಾರಣಗಳಿಂದ 1.25 ಕೋಟಿ ಮಂದಿ ತಮ್ಮ ಮನೆಗಳನ್ನು ಸುರಕ್ಷಿತವಾಗಿ ತಲುಪಿದ್ದಾರೆ'' ಅಂತ ಅಮಿತ್ ಶಾ ತಿಳಿಸಿದ್ದಾರೆ.

ಕೊರೊನಾ ವೈರಸ್ ಅಟ್ಟಹಾಸ: ಹೊಸ ದಾಖಲೆ ಬರೆದ ಭಾರತಕೊರೊನಾ ವೈರಸ್ ಅಟ್ಟಹಾಸ: ಹೊಸ ದಾಖಲೆ ಬರೆದ ಭಾರತ

ಪಕ್ಷಪಾತ ಮಾಡಿಲ್ಲ.!

ಪಕ್ಷಪಾತ ಮಾಡಿಲ್ಲ.!

''ದೇಶದ ಪ್ರತಿಯೊಂದು ರಾಜ್ಯ ಸರ್ಕಾರವೂ ಉತ್ತಮವಾಗಿ ಕೆಲಸ ಮಾಡಿದೆ ಎಂದು ನಾನು ನಂಬಿದ್ದೇನೆ. ಎಲ್ಲಾ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸರ್ಕಾರ ಸಹಕಾರ ನೀಡಿದೆ. ಐದು ಬಾರಿ ವಿಡಿಯೋ ಕಾನ್ಫರೆನ್ಸ್ ನಡೆದಿದೆ. ಪ್ರತಿಯೊಬ್ಬರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಂಡಿದ್ದೇವೆ. ಪಕ್ಷಪಾತ ಮಾಡಿಲ್ಲ. ಜಂಟಿಯಾಗಿ ಹೋರಾಟ ನಡೆಸಿದ್ದೇವೆ. ಇದು ಬಿಜೆಪಿ ಮಾಡಿರುವ ಕೆಲಸ'' ಎಂದು ಅಮಿತ್ ಶಾ ಹೇಳಿದ್ದಾರೆ.

ಭಾರತ ಉತ್ತಮ ಸ್ಥಾನದಲ್ಲಿದೆ

ಭಾರತ ಉತ್ತಮ ಸ್ಥಾನದಲ್ಲಿದೆ

''ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಾನದಲ್ಲಿದೆ. ದೊಡ್ಡ ದೊಡ್ಡ ದೇಶಗಳು ಕೋವಿಡ್-19 ನಿಂದ ನಾಶವಾಗಿದೆ. ಸ್ವಾತಂತ್ರ್ಯ ನಂತರ ಅನೇಕ ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ಈ ಹಿಂದೆ ಸರ್ಕಾರಗಳು ಹೋರಾಟ ನಡೆಸುತ್ತಿದ್ದವು. ಆದ್ರೀಗ, ನರೇಂದ್ರ ಮೋದಿ ಸರ್ಕಾರ ಜನರ ಜೊತೆಯಾಗಿದೆ. ಇದರ ಪರಿಣಾಮವೇನೆಂದರೆ, ಸರ್ಕಾರ ಹೋರಾಟ ನಡೆಸುತ್ತಿದ್ದರೆ, ಜನ ಎಚ್ಚರದಿಂದಿರುತ್ತಾರೆ'' - ಅಮಿತ್ ಶಾ

ಚಿನ್ನದ ಪದಗಳಲ್ಲಿ ಬರೆಯಬೇಕು

ಚಿನ್ನದ ಪದಗಳಲ್ಲಿ ಬರೆಯಬೇಕು

''ಮೊದಲು ಮೋದಿ ಜನತಾ ಕರ್ಫ್ಯೂ ಘೋಷಿಸಿದರು. ಮೊದಲ ಬಾರಿಗೆ ಪ್ರಧಾನಮಂತ್ರಿಯೊಬ್ಬರ ಕರೆಯ ಮೇರೆಗೆ 130 ಕೋಟಿ ಜನರು ತಮ್ಮ ಮನೆಗಳೊಳಗೆ ಉಳಿದುಕೊಂಡಿರುವುದನ್ನು ನಾನು ನೋಡಿದೆ. ಕೋವಿಡ್-19 ವಿರುದ್ಧದ ಹೋರಾಟದ ಇತಿಹಾಸ ಬರೆಯುವಾಗ 'ಜನತಾ ಕರ್ಫ್ಯೂ'ವನ್ನು 'ಗೋಲ್ಡನ್ ವರ್ಡ್ಸ್'ನಲ್ಲಿ ಬರೆಯಬೇಕಾಗುತ್ತದೆ. ಕೊರೊನಾ ವಾರಿಯರ್ಸ್ ಮೇಲೆ ಹೂವುಗಳನ್ನು ಸುರಿಸಿದಾಗ ಅವರೆಲ್ಲ ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ'' - ಅಮಿತ್ ಶಾ

English summary
The Government may have made a mistake while dealing with Covid 19 Outbreak: Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X