Maharashtra Election 2024 Results: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಆ ಒಂದು ಯೋಜನೆ!
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು (ಮಹಾ ವಿಕಾಸ್ ಅಘಾಡಿ) ತೀವ್ರ ಮುಖಭಂಗವನ್ನು ಎದುರಿಸಿವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಜನ ಇಲ್ಲಿ ಬೆಂಬಲ ಸೂಚಿಸಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಮಹಾಯುತಿ (ಬಿಜೆಪಿ ಮೈತ್ರಿಕೂಟ) ಅಮೋಘ ಸಾಧನೆ ಮಾಡುವುದಕ್ಕೆ ಕಾರಣವಾಗಿರುವುದು ಆ ಒಂದು ಯೋಜನೆ. ಅದೇ ಮುಖ್ಯಮಂತ್ರಿ ಲಡ್ಕಿ ಬಹಿನ್ (ಪ್ರೀತಿಯ ಸಹೋದರಿಯರೆ) ಎನ್ನುವುದು. ಈ ಒಂದು ಯೋಜನೆ ಮಹಾರಾಷ್ಟ್ರ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿ ಪಕ್ಷಗಳು ಅಮೋಘ ಮುನ್ನಡೆಯ ಮೂಲಕ ಸರ್ಕಾರ ರಚನೆ ಮಾಡುವಲ್ಲಿ ಬ್ಯೂಸಿಯಾಗಿವೆ. ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹಲವು ರಾಜಕೀಯ ಹೈಡ್ರಾಮಗಳು ನಡೆಸಿದ್ದವು. ಅಲ್ಲದೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಹಾಗೂ ಮಹಾಯುತಿಯ ನಡುವೆ ತೀವ್ರ ಜಿದ್ದಾಜಿದ್ದಿನ ಪೈಪೋಟಿ ಇದ್ದು, ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಆ ಲೆಕ್ಕಾಚಾರಗಳೆಲ್ಲೂ ತಲೆಕೆಳಗಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ (ಎನ್‌ಡಿಎ) ಹಾಗೂ ಮಿತ್ರ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.

ಮುಖ್ಯಮಂತ್ರಿ ಲಡ್ಕಿ ಬಹಿನ್ ಗೇಮ್ ಚೇಂಜರ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಗೇಮ್‌ಚೇಂಜರ್ ಆಗಿರುವುದು ಅಲ್ಲಿನ ಮಹಾಯುತಿ ಸರ್ಕಾರ ಕಳೆದ ಆರು ತಿಂಗಳ ಮುಂಚೆಯಷ್ಟೇ ಪ್ರಾರಂಭಿಸಿದ ಲಡ್ಕಿ ಬಹಿನ್ ಎನ್ನುವ ಯೋಜನೆ. ಈ ಯೋಜನೆ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿತು. ಮಹಾರಾಷ್ಟ್ರದಲ್ಲಿ ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಹಾಗೂ ಶಿವಸೇನಾ (ಏಕನಾಥ್ ಶಿಂಧೆ ಬಣ) ಅಧಿಕಾರದಲ್ಲಿ ಇದೆ. ಈ ಪಕ್ಷಗಳು ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಅದರ ಭಾಗವಾಗಿಯೇ ಲಡ್ಕಿ ಬಹಿನ್ ಯೋಜನೆಯನ್ನು ಪರಿಚಯಿಸಲಾಗಿತ್ತು.
ಇದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದೆ ಯೋಜನೆ ಎಂದು ಹೇಳಲಾಗುತ್ತಿದೆ. ಮಹಾಯುತಿ ಸರ್ಕಾರವು ಮಹಾರಾಷ್ಟ್ರದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಪರಿಚಯಿಸುತ್ತಿರುವುದಾಗಿ ಹೇಳಿತ್ತು. ಈ ಯೋಜನೆಯ ಮೂಲಕ 21 ವರ್ಷದಿಂದ 65 ವರ್ಷ ವಯಸ್ಸಿನ ಯುವತಿಯರು, ಮಹಿಳೆಯರು ಹಾಗೂ ಹಿರಿಯರಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು.
ಈ ಯೋಜನೆಯಿಂದ 21 ವರ್ಷದಿಂದ 65 ವರ್ಷದ ಒಳಗಿನ ಮಹಿಳೆಯರು ಪ್ರತಿ ತಿಂಗಳು 1,500 ರೂಪಾಯಿ ಪಡೆಯುತ್ತಿದ್ದರು. ಅಷ್ಟೇ ಅಲ್ಲ ಇನ್ಮುಂದೆ ಅಧಿಕಾರಕ್ಕೆ (ಈ ಬಾರಿ ಚುನಾವಣೆಯಲ್ಲಿ ಗೆದ್ದರೆ) ಇದನ್ನು ಈ ಯೋಜನೆಯ ಮೊತ್ತವನ್ನು 2,100 ರೂಪಾಯಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅಲ್ಲದೇ ಈ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿ ಮಾಡಿತ್ತು ಮಹಾಯುತಿ ಸರ್ಕಾರ.

ಯಾತ್ರೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ಪವಾರ್ ಅವರು ಈ ಯೋಜನೆಯ ಪರವಾಗಿ ಪ್ರಚಾರ ಮಾಡಿದ್ದರು. ರ‍್ಯಾಲಿಗಳನ್ನು ಮಾಡಿದ್ದರು. ಯೋಜನೆಯನ್ನು ಜನರಿಗೆ ಪರಿಚಯಿಸಿದ್ದರು. ಇದು ಜನರನ್ನು ತಲುಪಿತ್ತು. ಇದರಲ್ಲಿ ಯಾವುದೇ ಲೋಪಗಳು ಆಗದಂತೆ ನೋಡಿಕೊಳ್ಳಲಾಗಿತ್ತು. ಇದು ಮಹಾಯುತಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಗ್ಯಾರಂಟಿ ತಿರಸ್ಕರಿಸಿದ ಜನ !
ಕಾಂಗ್ರೆಸ್ & ಮಹಾ ವಿಕಾಸ್ ಅಘಾಡಿ ಪಕ್ಷಗಳು ಮಹಾರಾಷ್ಟ್ರದ ಮತದಾರರನ್ನು ಸೆಳೆಯುವುದಕ್ಕೆ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದ್ದರು. ಆದರೆ, ಮಹಾರಾಷ್ಟ್ರದ ಮತದಾರರು ಗ್ಯಾರಂಟಿ ಯೋಜನೆಗಳನ್ನು ಒಪ್ಪಿಕೊಂಡಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಅಂಶಗಳೂ ಇದ್ದವು. ಆದರೆ, ಜನ ಇದನ್ನು ತಿರಸ್ಕರಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಜೆಎಎಂ ಅಧಿಕಾರಕ್ಕೆ
ಜಾರ್ಖಂಡ್‌ನಲ್ಲಿ (ಜಾರ್ಖಂಡ್ ಮುಕ್ತಿ ಮೋರ್ಚಾ) ಮೋರ್ಚ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಜೆಎಎಂ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ 56 ಸ್ಥಾನಗಳು ಬಂದಿವೆ. ಇಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಈ ಬಾರಿ ಈ ರಾಜ್ಯದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಮುಖ್ಯಮಂತ್ರಿ ಬದಲಾವಣೆ ಹಾಗೂ ಐಟಿ ರೈಡ್ ಸೇರಿದಂತೆ ಹಲವು ವಿಚಾರಗಳು ಇದ್ದವು.












Click it and Unblock the Notifications