• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶಕ್ಕೆ ಸೇರಿಸ್ತಾರಂತೆ?

|

ಭಯೋತ್ಪಾದಕರು ಒಂದೆಲ್ಲಾ ಒಂದು ಕೃತ್ಯದ ಮೂಲಕ ಭಾರತದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಾಶ್ಮೀರದ ಬಗ್ಗೆ ನಿರಂತರ ಕ್ಯಾತೆ ನಡೆಯುತ್ತಿದ್ದರೆ ಇತ್ತ ಪಶ್ಚಿಮ ಬಂಗಾಳದ ಮೇಲೆ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಬಾಂಗ್ಲಾದೇಶದೊಂದಿಗೆ ಪಶ್ಚಿಮ ಬಂಗಾಳವನ್ನು ಸೇರಿಸಬೇಕು ಎಂಬ ಬಗ್ಗೆ ಉಗ್ರಗಾಮಿಗಳ ಕಾರ್ಯಾಚರಣೆ ಆರಂಭವಾಗಿದೆ.

ಬರ್ಧವಾನ್ ಬಾಂಬ್ ಸ್ಫೋಟ ಪ್ರಕರಣದ ನಂತರ ಈ ಬಗ್ಗೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಹೊರಬಂದಿವೆ. ಪಶ್ಚಿಮ ಬಂಗಾಳ ಸೇರಿದಂತೆ ಮೇಘಾಲಯ, ಅಸ್ಸಾಂ ಗಳನ್ನು ಮಿನಿ ಬಾಂಗ್ಲಾದೇಶವನ್ನಾಗಿ ಮಾಡುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ.[ಉಗ್ರರ ವಿಧ್ವಂಸಕ ಕೃತ್ಯದ ರಹಸ್ಯ ಸಂಚು ಬಯಲು]

ಉಗ್ರಗಾಮಿ ಸಂಘಟನೆ ಜಮಾತೆ-ಉಲ್-ಮುಜಾಹಿದ್ದೀನ್ ಬಾಂಗ್ಲಾಕ್ಕೆ ಸಂಬಂಧಿಸಿದ ಎರಡು ಶಾಖೆಗಳು ಚಿತ್ತಗಾಂಗ್ ಮತ್ತು ಬಾಂದರ್ ಬನ್ ನಲ್ಲಿ ಕೆಲಸ ಮಾಡುತ್ತಿವೆ. ಇವು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳವನ್ನು ಟಾರ್ಗೆಟ್ ಮಾಡುತ್ತಿವೆ. ಒಂದು ಕಡೆ ನೆಲೆ ನಿಂತು ತಂತ್ರ ಹಣೆದು ನಂತರ ಇಡಿ ರಾಜ್ಯದ ತುಂಬೆಲ್ಲಾ ಉಗ್ರ ಚಟುವಟಿಕೆ ಹರಡುವ ಇರಾದೆ ಸಂಘಟನೆಯದ್ದು.

ಗುಪ್ತಚರರ ಇಲಾಖೆ ಈ ಬಗ್ಗೆ ವರದಿಯೊಂದನ್ನು ನೀಡಿದ್ದು ಭಾರತದ ಯಾವ ಯಾವ ಯಾವ ರಾಜ್ಯಗಳಲ್ಲಿ ಉಗ್ರ ಚಟುವಟಿಕೆ ನಡೆಸಲು ಅನುಕೂಲಕರ ವಾತಾವರಣವಿದೆ ಎಂಬ ಬಗ್ಗೆ ಸಂಘಟನೆಗಳು ಮಾಹಿತಿ ಕಲೆ ಹಾಕಿವೆ. ಅಂತೆಯೇ ಕೆಲವೆಡೆ ರಹಸ್ಯವಾಗಿ ತಮ್ಮ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದೆ.[ಹೈದ್ರಾಬಾದ್ ಉಗ್ರಗಾಮಿಗಳ ರಾಜಧಾನಿಯಾಗುತ್ತಿದೆಯೇ?]

ಜಮಾತೆ-ಉಲ್-ಮುಜಾಹಿದ್ದೀನ್ ಜತೆ ಕೆಲಸ ಮಾಡುತ್ತಿರುವ ಸಂಘಟನೆಗಳು ಯಾವವು?

ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆ ಜಮಾತೆ-ಉಲ್-ಮುಜಾಹಿದ್ದೀನ್ ಜತೆ ಭಾರತದ ಅನೇಕ ಕಾನೂನು ಬಾಹಿರ ಸಂಘಟನೆಗಳು ಕೈ ಜೋಡಿಸಿವೆ. ಜಮಾತೇ ಇಸ್ಲಾಮೀ, ದಿ ಅಸ್ಸರುಲ್ಲಾ ಬಾಂಗ್ಲಾ, ಜಮಾಯಿತುಲ್ ಮುಸ್ಲೀಮನ್, ಹೇಪಜತ್ ಇಸ್ಲಾಂ ಮತ್ತು ತಂಜೀಂ ತಮರುದ್ದೀನ್ ಮುಂತಾದ ಘಟಕಗಳು ನಿರಂತರವಾಗಿ ಬಾಂಗ್ಲಾ ಮತ್ತು ಭಾರತ ಗಡಿಯಲ್ಲಿ ಕೆಲಸ ಮಾಡುತ್ತಿವೆ.

ಬಾಂಗ್ಲಾದೇಶ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ತನಿಖೆ ಮಾಡಬೇಕು ಎಂದು ಭಾರತ ಸರ್ಕಾರ ವರದಿಯೊಂದನ್ನು ಸಿದ್ಧಪಡಿಸಿ ನೀಡಿದೆ. ಅಲ್ಲದೇ ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಲಾಭ ಪಡೆಯಲು ಉಗ್ರಗಾಮಿಗಳು ಮುಂದಾಗಿದ್ದು ಅರಾಜಕತೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆಲ್ ಖಯಿದಾ ಸಂಘಟನೆ ಸಹ ಇದಕ್ಕೆ ಕೈ ಜೋಡಿಸಿದ್ದು ಮುಸಲ್ಮಾನರನ್ನೇ ಒಡೆದು ಕುಕೃತ್ಯಗಳಿಗೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡಿವೆ.[ಭಾರತ ದುರ್ಬಲಗೊಳಿಸಲು ಪಾಕ್ ಬಳಿ ಹೊಸ ಅಸ್ತ್ರ]

ತರಬೇತಿ ನೀಡುವ ಕೇಂದ್ರಗಳು

ಚಿತ್ತಗಾಂಗ್ ಮತ್ತು ಬಾಂದರ್ ಬನ್ ನಲ್ಲಿರುವ ಕೇಂದ್ರಗಳಲ್ಲಿ ಉಗ್ರಗಾಮಿಗಳಿಗೆ ತರಬೇತಿ ನೀಡಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಿಗೆ ಕಳಿಸಲಾಗುತ್ತದೆ. ಅಲ್ಲದೇ ಮೇಘಾಲಯ, ಅಸ್ಸಾಂ ನಲ್ಲಿ ಉಗ್ರ ಬೀಜ ಬಿತ್ತುವ ಕೆಲಸ ಮಾಡಲಾಗುತ್ತದೆ. ಈ ಸಂಘಟನೆಗಳಿಗೆ ಗಡಿ ಭಾಗದಲ್ಲಿರುವ ಚಿಕ್ಕ ಚಿಕ್ಕ ಗುಂಪುಗಳು ದೇಶ ವಿರೋಧಿ ಚಟುವಟಿಕೆ ನಡೆಸಲು ಸಂಪೂರ್ಣ ಸಹಕಾರ ನೀಡುತ್ತಿವೆ ಎಂದು ವರದಿ ಹೇಳಿದೆ.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣ ಬಳಸಿ ಒಳನುಸುಳುವಿಕೆ

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣ ಬಳಸಿ ಉಗ್ರಗಾಮಿಳನ್ನು ಭಾರತದ ಒಳಕ್ಕೆ ನುಸುಳುವಂತೆ ಮಾಡಲಾಗುತ್ತಿದೆ. ಎರಡು ದೇಶಗಳ ಸಂಬಂಧದ ನಡುವೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಮ್ಮೆ ಭಾರತದ ಒಳಗೆ ಪ್ರವೇಶಿಸಿದ ತರಬೇತಿ ಪಡೆದ ಉಗ್ರ ವಿಧ್ವಂಸಕ ಕೃತ್ಯ ಎಸಗಲು ಹವಣಿಸುತ್ತ ಇರುತ್ತಾನೆ.

ಆಲ್ ಖಯಿದಾ, ಜಮಾತೆ-ಉಲ್-ಮುಜಾಹಿದ್ದೀನ್ ಬಾಂಗ್ಲಾ ಮತ್ತಿತರ ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನವನ್ನು ಕೇಂದ್ರವನ್ನಾಗಿರಿಸಿಕೊಂಡು ನಿರಂತರ ದಾಳಿ ಮಾಡಲು ಸಿದ್ಧವಾಗುತ್ತಿವೆ. ಈ ಬಗ್ಗೆ ಅವುಗಳೇ ಒಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿವೆ ಎಂದು ಗುಪ್ತಚರ ಇಲಾಖೆ ವರದಿ ತಿಳಿಸಿದೆ.|

ಒಟ್ಟಿನಲ್ಲಿ ಭಾರತಕ್ಕೆ ಸದಾ ಉಗ್ರರ ಭಯ ಕಾಡುತ್ತಲೇ ಇದೆ. ಇತ್ತ ಪಾಕಿಸ್ತಾನದ ಭಯೋತ್ಪಾದಕರು, ಅತ್ತ ಬಾಂಗ್ಲಾ ನುಸುಳುಕೋರರ ನಡುವೆ ಸಾಮಾನ್ಯ ಜನ ನಿರಾತಂಕವಾಗಿ ಜೀವಿಸದಂತಾಗಿದೆ. ಶಕ್ತಿಶಾಲಿ ವಿದೇಶಾಂಗ ನೀತಿ ಮತ್ತು ನಿಯಮಾವಳಿಗಳು ಇಂಥವಕ್ಕೆ ಬ್ರೇಕ್ ಹಾಕಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India in its dossier to Bangladesh on the Burdwan incident will make it clear that these terrorist groups, working under different names, had planned on establishing a Greater Bangladesh which merges Bangladesh with West Bengal. As a first step they intended setting up modules in West Bengal, Meghalaya and Assam in a bid to create several mini Bangladeshs' and then take the plan to next level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more