ಅಸ್ಸಾಂ ಉಗ್ರದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದ ಉಲ್ಫಾ

ಗುವಾಹಟಿ, ನವೆಂಬರ್ 02: ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದ ಐವರ ಹತ್ಯೆ ಪ್ರಕರಣದಲ್ಲಿ ತನ್ನ ಕೈವಾಡವಿಲ್ಲ ಎಂದು ನಿಷೇಧಿತ ಉಲ್ಫಾ(United Liberation Front of Asom ) ಸಂಘಟನೆ ಸ್ಪಷ್ಟಪಡಿಸಿದೆ.

ಗುರುವಾರ ಸಂಜೆ ಇಲ್ಲಿನ ದೊಲಾಸಾದಿಯಾ ಸೇತುವೆಯ ಬಳಲಿಯ ಹಳ್ಳಿಯೊಂದಕ್ಕೆ ಬಂದ ಗುಂಪೊಂದು,ಮನೆಯೊಳಗಿದ್ದ ಜನರನ್ನು ಹೊರಗೆ ಕರೆದು ಏಕಾಏಕಿ ಗುಂದಿನ ದಾಳಿ ಆರಂಭಿಸಿತ್ತು. ದಾಳಿಯ ನಂತರ ಈ ಗುಂಪು ಪರಾರಿಯಾಗಿತ್ತು.

ಈ ಘಟನೆಯಲ್ಲಿ ಉಲ್ಫಾ ಉಗ್ರರ ಕೈವಾಡವಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪಿಟಿಐ(ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ)ಗೆ ಮಾಡಿದ ಇ ಮೇಲ್ ವೊಂದರಲ್ಲಿ, 'ಈ ಕೃತ್ಯದಲ್ಲಿ ನಮ್ಮ ಸಂಘಟನೆಯ ಕೈವಾಡವಿಲ್ಲ' ಎಂದು ಆದು ಸ್ಪಷ್ಟಪಡಿಸಿದೆ.

Terrorists kill 5 people in Assam, ULFA denies role

ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ಐವರ ಹತ್ಯೆಯಾಗಿತ್ತು.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್, 'ಇಂಥ ಹೇಯಕೃತ್ಯ ಎಸಗಿದ ಹೇಡಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ನಾನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದ್ದೇನೆ' ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+