Pics : ಭಾರತೀಯ ಸೇನಾ ಶಿಬಿರಕ್ಕೆ ನುಗ್ಗಿದ ಉಗ್ರರ ಗುಂಡು
ಶ್ರೀನಗರ, ಡಿ.5: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಭಾರತೀಯ ಸೇನೆಯ ಶಿಬಿರವನ್ನು ಉಗ್ರರ ಗುಂಡು ತಲುಪಿದೆ. ಶುಕ್ರವಾರ ಮುಂಜಾನೆ ನಡೆದ ಉಗ್ರರು ಗುಂಡಿನ ದಾಳಿಗೆ ಐವರು ಯೋಧರು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಸಾವಿನಸಂಖ್ಯೆ 17ಕ್ಕೇರಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ.
ಇತ್ತೀಚಿನ ವರದಿಗಳು ಬಂದಾಗ ಸುಮಾರು 11 ಭದ್ರತಾ ಸಿಬ್ಬಂದಿ ಹಾಗೂ 6 ಜನ ಉಗ್ರರು ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣಾ ಮತದಾನ ಮುಗಿದಿದ್ದು, ಎರಡನೇ ಹಂತದ ಮತದಾನ ಡಿ.9 ರಂದು ನಡೆಯಲಿದೆ. ಡಿ.23ಕ್ಕೆ ಫಲಿತಾಂಶ ಹೊರಬೀಳಲಿದೆ. ಇಂದು ಗುಂಡಿನ ಚಕಮಕಿ ನಡೆದ ಉರಿ ಪ್ರದೇಶದಲ್ಲಿ 6 ವಿಧಾನಸಭಾಕ್ಷೇತ್ರಗಳಿವೆ.
ಗಡಿ ನಿಯಂತ್ರಣ ರೇಖೆ ಸಮೀಪದ ಉರಿ ವಲಯಗಳಲ್ಲಿದ್ದ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಲು ಉಗ್ರರು ಯತ್ನ ಮಾಡಿದ್ದಾರೆ. ಈ ವೇಳೆ, ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಬರಮುಲ್ಲಾ ಜಿಲ್ಲೆಯ ಉರಿ ಎಂಬಲ್ಲಿ ಗುಂಡಿನ ಚಕಮಕಿ ನಡೆದಿದೆ. ಭಾರತೀಯ ಸೇನಾ ಶಿಬಿರದಲ್ಲಿ ಭಾರಿ ಶಸ್ತ್ರಾಸ್ತ್ರಗಳಿರುವುದನ್ನು ಗಮನಿಸಿರುವ ಉಗ್ರರು ಶಿಬಿರವನ್ನು ಟಾರ್ಗೆಟ್ ಮಾಡಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.

ಉಗ್ರರ ದಾಳಿಯಲ್ಲಿ ಮೂವರು ಯೋಧರು, ಇಬ್ಬರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ ಎಂದು ಸೇನೆ ಪ್ರಕಟಿಸಿದೆ.

ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಸಹ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಯೋಧರ ಗುಂಡಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.

ಗುಂಡಿನ ಚಕಮಕಿ ನಿಂತಿದ್ದರೂ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಉಗ್ರರಿಗಾಗಿ ಯೋಧರು ತೀವ್ರ ಶೋಧ ನಡೆಸಲಾಗುತ್ತಿದೆ.












Click it and Unblock the Notifications