ಗಣರಾಜ್ಯೋತ್ಸವಕ್ಕೆ ಭಯೋತ್ಪಾದನಾ ದಾಳಿಯ ಸಂಚು: ಇಬ್ಬರ ಬಂಧನ
ನವದೆಹಲಿ, ಜನವರಿ 17: ಗಣರಾಜ್ಯೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇರುವಾಗಲೇ ದೆಹಲಿ ಪೊಲೀಸರು ಕಳೆದ ವಾರ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಇಬ್ಬರನ್ನು ಬಂಧಿಸಿದ್ದು, ಇದಲ್ಲದೆ ಇತರ ನಾಲ್ವರು ಭಯೋತ್ಪಾದಕ ಶಂಕಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ದೆಹಲಿ ಪೊಲೀಸ್ ವಿಶೇಷ ವಿಭಾಗದ ಮೂಲಗಳ ಪ್ರಕಾರ, ಭಯೋತ್ಪಾದಕ ಶಂಕಿತರು ಗಣರಾಜ್ಯೋತ್ಸವ ದಿನವನ್ನು ಗುರಿಯಾಗಿಸಿಕೊಂಡು ದಾಳಿಗಳಗಳನ್ನು ಮಾಡಲು ಉದ್ದೇಶಿದ್ದರು. ಇವರು ಪಾಕಿಸ್ತಾನದಿಂದ ಡ್ರಾಪ್ ಡೆಡ್ ವಿಧಾನದ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದಿದ್ದರು. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಮೂಲಕ ಗಡಿಯ ಇನ್ನೊಂದು ಬದಿಯಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಲಾಗಿದೆ.
ದಿಲ್ಲಿ ಪೊಲೀಸರು ಇತರ 4 ಶಂಕಿತರನ್ನು ಹುಡುಕುತ್ತಿದ್ದಾರೆ. ಅವರು ಡ್ರಾಪ್ ಡೆಡ್ ವಿಧಾನದ ಮೂಲಕ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದಾರೆ. ಸಿಗ್ನಲ್ ಮೂಲಕ ಅಪ್ಲಿಕೇಶನ್‌ನಲ್ಲಿ ಪಾಕ್‌ನಲ್ಲಿರುವ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು. ಅವರು ಉತ್ತರಾಖಂಡದ ಅಜ್ಞಾತ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆದಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. .
ಜನವರಿಯಲ್ಲಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ನಂತರ ವಿವಿಧ ರಾಜ್ಯಗಳಲ್ಲಿ ಉದ್ದೇಶಿತ ದಾಳಿಗಳನ್ನು ನಡೆಸಲು ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಪೊಲೀಸರಿಗೆ ದಾಳಿಯ ಸಂಚಿನಲ್ಲಿ 8 ಮಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಭಾರತದಲ್ಲಿ ನಾಲ್ವರು ಶಂಕಿತರು ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಭಯೋತ್ಪಾದಕರ ಘಟಕದಲ್ಲಿ 8 ಜನ
ಗಡಿಯಲ್ಲಿ ಕುಳಿತಿರುವ ಅವರ ಹ್ಯಾಂಡ್ಲರ್‌ಗಳು ಸಿಗ್ನಲ್ ಅಪ್ಲಿಕೇಶನ್‌ನಲ್ಲಿ ಸೂಚನೆಗಳನ್ನು ಕಳುಹಿಸಿದ್ದಾರೆ. ನಂತರ ಅವರು ಶಸ್ತ್ರಾಸ್ತ್ರ ತುಂಬಿದ ಚೀಲದ ಸ್ಥಳವನ್ನು ಗೂಗಲ್ ನಕ್ಷೆಗಳ ಮೂಲಕ ಹಂಚಿಕೊಂಡು ಸುಮಾರು 8 ಜನರು ಈ ಭಯೋತ್ಪಾದಕರ ಘಟಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ 4 ಇನ್ನೂ ಭಾರತದಲ್ಲಿ ಇರಬಹುದಾಗಿದೆ. ಕೇವಲ 2 ಭಯೋತ್ಪಾದಕರನ್ನು ಶಸ್ತ್ರಾಸ್ತ್ರಗಳನ್ನು ಒದಗಿಸಲು ಬಳಸಲಾಯಿತು. 2 ಶಸ್ತ್ರಾಸ್ತ್ರಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸುವ ಮೂಲಕ ಶಸ್ತ್ರಾಸ್ತ್ರಗಳ ಗೂಗಲ್ ಲೋಕೆಶನ್ ಅನ್ನು ಅವರ ಮೇಲಧಿಕಾರಿಗಳಿಗೆ ಕಳುಹಿಸಲು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ.

ಜಹಾಂಗೀರ್‌ಪುರಿ ಪ್ರದೇಶದಿಂದ ಬಂಧನ
ಭಯೋತ್ಪಾದಕರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಉತ್ತರಾಖಂಡದ ಅಜ್ಞಾತ ಸ್ಥಳದಲ್ಲಿ ಪತ್ತೆಯಾಗಿವೆ. ಅದನ್ನು ಈಗ ಪರಿಶೀಲಿಸಲಾಗುತ್ತಿದೆ. ಏತನ್ಮಧ್ಯೆ, ಗುರುವಾರ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪ್ರದೇಶದಿಂದ ಬಂಧಿಸಲಾದ ಇಬ್ಬರು ಭಯೋತ್ಪಾದಕ ಶಂಕಿತರನ್ನು ಜನವರಿ 27 ಮತ್ತು ಜನವರಿ 31 ರಂದು ಬಲಪಂಥೀಯ ನಾಯಕರ ಉದ್ದೇಶಿತ ಹತ್ಯೆಗಳನ್ನು ನಡೆಸಲು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಸೋಮವಾರ ಹೇಳಿವೆ.

14 ದಿನಗಳ ಪೊಲೀಸ್ ಕಸ್ಟಡಿಗೆ
ಜಹಾಂಗೀರ್‌ಪುರಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿನ ಅವರ ಮನೆಯಿಂದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಈ ಹಿಂದೆ ತಿಳಿಸಿದ್ದರು. ದೆಹಲಿ ಪೊಲೀಸರ ವಿಶೇಷ ವಿಭಾಗವು ಇಬ್ಬರು ಶಂಕಿತರನ್ನು ಬಂಧಿಸಿದೆ. ಅವರನ್ನು ಜಗಜಿತ್ ಸಿಂಗ್ (29) ಮತ್ತು ನೌಶಾದ್ (56) ಎಂದು ಗುರುತಿಸಲಾಗಿದೆ. ಶುಕ್ರವಾರ ಅವರನ್ನು ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಹತ್ಯೆಗೆ ಸಮಯ ಮತ್ತು ದಿನಾಂಕ
ಪಂಜಾಬ್ ಮತ್ತು ದೆಹಲಿಯ ಮೂವರು ಬಲಪಂಥೀಯ ನಾಯಕರು ಅವರ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಅವರು ತಮ್ಮ ಎರಡು ಗುರಿಗಳನ್ನು ಮುಗಿಸಲು ದಿನಾಂಕ ಮತ್ತು ಸಮಯವನ್ನು ಸಹ ನಿಗದಿಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ನಂತರ ಹೇಳಿಕೊಂಡಿವೆ. ಇದಲ್ಲದೆ ಈಗ ಪೊಲೀಸ್ ಕಸ್ಟಡಿಯಲ್ಲಿರುವ ಶಂಕಿತರು ತಮ್ಮ ಎರಡು ಗುರಿಗಳನ್ನು ಮುಟ್ಟಲು ವಿಫಲರಾಗಿದ್ದಾರೆ. ಶಂಕಿತರು ಮೊದಲ ವ್ಯಕ್ತಿಯನ್ನು ಕೊಲ್ಲಲು 50 ಲಕ್ಷ ರೂ., ಎರಡನೇ ವ್ಯಕ್ತಿಗೆ 1 ಕೋಟಿ ರೂ. ಮತ್ತು ಮೂರನೇ ವ್ಯಕ್ತಿ ಹತ್ಯೆಗೆ 1.5 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ. ಈ ಇಬ್ಬರೂ ಹವಾಲಾ ಆಪರೇಟರ್‌ಗಳ ಮೂಲಕ 5 ಲಕ್ಷ ರೂಪಾಯಿಗಳನ್ನು ಟೋಕನ್ ಹಣವಾಗಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.












Click it and Unblock the Notifications