ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿ
ಸುಜ್ವಾನ್, ಫೆಬ್ರವರಿ 10: ಕೆಲವು ಭಯೋತಾದಕರು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಘಟನೆ ಇಂದು(ಫೆ.10) ಬೆಳಿಗ್ಗೆ ಜಮ್ಮು ಕಾಶ್ಮೀರದ ಸುಜ್ವಾನ್ ಪ್ರದೇಶದಲ್ಲಿ ನಡೆದಿದೆ.
"ಘಟನೆಯಲ್ಲಿ ಇಬ್ಬರು ಸೈನಿಕರಿಗೆ ಗಾಯಗಳಾಗಿದ್ದು, ಭಯೋತ್ಪಾದಕರು ಸೇನಾ ನೆಲೆಯ ಕ್ವಾಟ್ರಸ್ ವೊಂದರಲ್ಲಿ ಅಡಗಿ ಕುಳಿತಿದ್ದಾರೆ. ಅವರನ್ನು ಸದೆಬಡಿಯಲು ಕಾರ್ಯಾಚರಣೆ ಮುಂದುವರಿಯುತ್ತಿದೆ" ಎಂದು ಜಮ್ಮು ಐಜಿಪಿ ಎಸ್ ಡಿ ಸಿಂಗ್ ಜಮ್ವಾಲ್ ತಿಳಿಸಿದ್ದಾರೆ.
#Visuals deferred by unspecified time: Operation underway after terrorists attacked Sunjwan Army camp. One Hawaldar & his daughter injured. pic.twitter.com/X7BuGrn8WZ
— ANI (@ANI) February 10, 2018
ಬೆಳಿಗ್ಗೆ 4:45 ರ ಸುಮಾರಿಗೆ ಆರ್ಮಿ ಕ್ಯಾಂಪ್ ನ ಗೇಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಅದಕರು ಶಿಬಿರದೊಳಗೆ ಹೊಕ್ಕಿದ್ದಾರೆ.
ಭಯೋತ್ಪಾದಕರು ಅಡಗಿ ಕುಳಿತ ಮನೆಯ ಸುತ್ತ ಸೈನಿಕರು ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications