ನಗ್ರೋಟಾ ಸೇನಾ ನೆಲೆ ಮೇಲೆ ಉಗ್ರರ ದಾಳಿ: 7 ಯೋಧರು ಹುತಾತ್ಮ

By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ನವೆಂಬರ್, 29: ಜಮ್ಮು ಕಾಶ್ಮೀರದ ನಗ್ರೋಟಾ ಸೇನಾ ನೆಲೆ ಮೇಲೆ ಮಂಗಳವಾರ ಮುಂಜಾನೆ 5:30 ರಲ್ಲಿ ಉಗ್ರರು ಮಾಡಿದ ದಾಳಿಯಲ್ಲಿ ಭಾರತ 7 ಯೋಧರು ಹುತಾತ್ಮರಾಗಿದ್ದಾರೆ.

ಜಮ್ಮುವಿನಿಂದ 20 ಕಿ.ಮೀ ದೂರದಲ್ಲಿರುವ ನಗೋರ್ಟಾ ಸೇನಾ ಶಿಬಿರವಿದೆ. ಪ್ರಸ್ತುತ ನಗೋರ್ಟಾ ಸೇನಾ ನೆಲೆಯನ್ನು ಭಾರತ ಸೇನೆ ಸುತ್ತುವರಿದೆ.

Terror attack on army camp at Nagrota, J&K: Seven soldiers martyred

ಸ್ಥಳೀಯ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಸೇನೆ ಸೂಚಿಸಿದೆ. ನಗ್ರೋಟಾ ಸೇನಾ ಶಿಬಿರದ ಮೇಲೆ ಮೂವರು ಉಗ್ರರು ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರರು ಸೇನಾ ಶಿಬಿರದ ಮೇಲೆ ಗ್ರೆನೇಡ್ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಸೇನಾ ಶಿಬಿರಕ್ಕೆ ಇನ್ನಷ್ಟು ಭದ್ರತಾ ಸಿಬ್ಬಂದಿ ಧಾವಿಸಿದ್ದು ಪ್ರತಿರೋಧ ಕಾರ್ಯಾಚರಣೆ ನಡೆಸುತ್ತಿದೆ.

ದಾಳಿ ಮಾಡಿರುವ ಉಗ್ರರು ಫಿದಾಯಿನ್ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ದಾಳಿಯಲ್ಲಿ ಲಷ್ಕರ್-ಎ-ತಯ್ಯಬಾ ಉಗ್ರರ ಕೈವಾಡವೂ ಸಹ ಇದೆ ಎಂಬ ಅನುಮಾನವನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Seven soldiers were martyred in a terror attack near an army camp at Nagrota in Jammu and Kashmir. The attack took place at 5.30 AM this morning at Nagrota which is around 20 kilometres away from Jammu.
Please Wait while comments are loading...