ಬದಲಾಗಲಿದೆ ಬಡತನದ ವ್ಯಾಖ್ಯೆ, 21 ಅಂಶದ ಹೊಸ ಮಾನದಂಡ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 18: ಬಡತನ ಎಂದರೇನು ಎಂಬ ವ್ಯಾಖ್ಯೆ ಬದಲಾಗಲಿದೆ. ಅಂತ್ಯೋದಯ ಯೋಜನೆ ಅಡಿಯಲ್ಲಿ ಐವತ್ತು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡತನ ನಿರ್ಮೂಲನೆಗೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಯಾವ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಯಲ್ಲಿ ಅಂದರೆ, ಕುಟುಂಬದ ಹೆಚ್ಚಿನ ಸದಸ್ಯರ ಖಾತೆಯಲ್ಲಿ ಹತ್ತು ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಇರುತ್ತದೋ ಅಂಥವರು ಬಡವರಲ್ಲ ಎಂದು ನಿರ್ಧರಿಸಬಹುದಾಗಿದೆ.

ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮಹಿಳೆಯರು ಉದ್ಯೋಗ ಮಾಡುತ್ತಿದ್ದಾರೆ, ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ ಹಾಗೂ ಅಡುಗೆ ಅನಿಲ ಸಂಪರ್ಕ ಹೊಂದಿದ ಕುಟುಂಬಗಳೆಷ್ಟು ಎಂಬುದನ್ನು ಕೂಡ ಇದಕ್ಕಾಗಿ ಪರಿಗಣಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು.

Ten thousand in bank account, to measure rural poverty

ಬಡತನದ ವ್ಯಾಖ್ಯೆಗಾಗಿ ಇಪ್ಪತ್ತೊಂದು ಅಂಶಗಳ ಮಾನದಂಡವನ್ನು ನಿಗದಿ ಮಾಡಲಾಗಿದೆ. ಸಾಲ, ಕೃಷಿಯೇತರ ಉದ್ಯೋಗ, ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಇವು ಒಳಗೊಂಡಿವೆ. ಕೂಲಿ ಮಾಡುವ ಕುಟುಂಬಗಳೆಷ್ಟು, ಸ್ವಯಂ ಉದ್ಯೋಗ ಕೈಗೊಂಡಿರುವವರು ಎಷ್ಟು ಮಂದಿ ಎಂಬುದರ ಸಂಖ್ಯೆಯನ್ನು ಆಧರಿಸಿ, ಆಯಾ ಗ್ರಾಮ ಪಂಚಾಯಿತಿ ಎಷ್ಟು ಉತ್ತಮ ಎಂಬುದನ್ನು ಅಳೆಯಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The higher the number of households with a minimum Rs 10,000 in their savings account, better will be a panchayat's prospects of being rated positively on the poverty index, the government has decided in a bid to devise measures to evaluate neediness.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ