ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ನೆಟ್ ವರ್ಕ್ ಸರಿ ಇಲ್ಲವೇ? ಟ್ವೀಟ್ ಮಾಡಿ

|
Google Oneindia Kannada News

ನವದೆಹಲಿ, ಆಗಸ್ಟ್, 03: ಟ್ವಿಟ್ಟರ್ ಮೂಲಕ ಜನರಿಗೆ ಹತ್ತಿರವಾಗಿರುವ ಭಾರತೀಯ ರೈಲ್ವೆ ಇಲಾಖೆ, ಕೇಂದ್ರ ವಿದೇಶಾಂಗ ಇಲಾಖೆಯನ್ನು ಕೇಂದ್ರ ಅಂಚೆ ಮತ್ತು ಟೆಲಿಕಾಂ ಇಲಾಖೆ ಸಹ ಅನುಸರಿಸಿದೆ. ನಾಗರಿಕರ ಸಮಸ್ಯೆ ಆಲಿಸಿ ಪರಿಹರಿಸಲು ಟ್ವಿಟ್ಟರ್ ಬಳಸಿಕೊಳ್ಳಲು ಮುಂದಾಗಿದೆ.

ನಾಗರಿಕರ ದೂರುಗಳನ್ನು ಆಲಿಸಲು ಕೇಂದ್ರ ಸರ್ಕಾರ ಟ್ವಿಟರ್ ಇಂಡಿಯಾ ಸಹಯೋಗದಲ್ಲಿ ಟ್ವಿಟರ್‌ಸೇವಾ ಎಂಬ ನೂತನ ಸೇವೆ ಆರಂಭಿಸಿದೆ. ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಟ್ವಿಟರ್‌ಸೇವಾಗೆ ಚಾಲನೆ ನೀಡಿದ್ದಾರೆ.[ಭಾರತಾದ್ಯಂತ ಎಲ್ಲಾ ತುರ್ತು ಸೇವೆಗೆ '112' ಸಾಮಾನ್ಯ ಸಂಖ್ಯೆ]

Telecom and postal complaints could be put on Twitter

ಅಂಚೆ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್ ಮತ್ತು ಖಾಸಗಿರಂಗದ ಟೆಲಿಕಾಂ ಆಪರೇಟರ್‌ಗಳ ಕುರಿತಾದ ಯಾವುದೇ ಬಗೆಯ ದೂರುಗಳನ್ನು ಸಚಿವರ ಖಾತೆಗೆ ನೇರವಾಗಿ ಟ್ವೀಟ್ ಮಾಡಬಹುದು.[ಬಿಎಸ್ಎನ್ಎಲ್ ನಿಂದ 40 ಸಾವಿರ ವೈಫೈ ಹಾಟ್ ಸ್ಪಾಟ್]

ಇಲ್ಲಿ ಗಮನಿಸಬೇಕಾದ ಕೆಲ ಅಂಶಗಳನ್ನು ಹೇಳಲಾಗಿದೆ. ಗ್ರಾಹಕರು ದೂರು ನೀಡಲು ಮತ್ತು ಸೇವೆ ಬಯಸುವ ಸಂಸ್ಥೆಯ ಹೆಸರನ್ನು ಟ್ವಿಟರ್‌ಸೇವಾ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಬಹುದು. ಬಳಿಕ ಸಚಿವಾಲಯವು ದೂರುಗಳನ್ನು ವಿಂಗಡಿಸಿ, ಸಂಬಂಧಪಟ್ಟ ಸಂಸ್ಥೆಗೆ ಮತ್ತು ಇಲಾಖೆಗಳಿಗೆ ಕಳುಹಿಸಿ ಪರಿಹರಿಸಲಿದೆ.
ಸಚಿವರ ಟ್ವಿಟ್ಟರ್ ಖಾತೆ; @manojsinhabjp

English summary
Consumers of telecom and postal services will now be able to lodge complaints on social networking site Twitter. Communications minister Manoj Sinha launched TwitterSewa, through which the ministry will provide real-time grievance redressal. The customised e-governance delivery service by Twitter India is already in use in the commerce, foreign, and railways ministries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X