ಮನೆ ಜಗಳದಲ್ಲಿ ತೆಲಂಗಾಣದ ಮಹಿಳೆ ಆತ್ಮಹತ್ಯೆ, ನೋಟಿನ ಕಾರಣವಲ್ಲ

By: ವಿಕಾಸ್ ನಂಜಪ್ಪ
Subscribe to Oneindia Kannada

ತೆಲಂಗಾಣ, ನವೆಂಬರ್ 10:ಮಗ ಹಾಗೂ ಮಗಳಿಬ್ಬರಿಗೆ ಜಮೀನು ಮಾರಿದ ಹಣ ಹಂಚಬೇಕು ಎಂದುಕೊಂಡಿದ್ದ ಮಹಿಳೆ ಜತೆಗೆ ಆಕೆ ಮಗ ಜಗಳವಾಡಿದ್ದರಿಂದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಸಾವಿನ ವಿಚಾರವಾಗಿ ಕುಟುಂಬದವರೇ ಈ ಮೊದಲು ಬೇರೆ ಸುದ್ದಿ ಹಬ್ಬಿಸಿದ್ದರು.

ತೆಲಂಗಾಣದ ಮೆಹಬೂಬ್ ಜಿಲ್ಲೆಯ ಮಹಿಳೆಯೊಬ್ಬರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ವಿನೋದಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಮೊದಲು, ಆಕೆ ಮನೆಯಲ್ಲಿ 500, 1000 ರುಪಾಯಿಯ ನೋಟುಗಳಿದ್ದವು. ಅದನ್ನು ಏನು ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೀಡಾಗಿದ್ದರು. ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕದಲ್ಲಿ ವಿನೋದಾ ಆತ್ಮಹತ್ಯೆ ಮಾಡಿಕೊಂಡಿಡಿದ್ದಾರೆ ಎಂದು ಸುದ್ದಿ ಹಬ್ಬಿತ್ತು.

ವಿನೋದಾ ಅವರು ಕೆಲ ತಿಂಗಳ ಹಿಂದೆ ಹನ್ನೆರಡು ಎಕರೆ ಜಮೀನು ಮಾರಿದ್ದರು. 55 ಲಕ್ಷ ಹಣ ಬಂದಿತ್ತು. ಅದರ ವಿತರಣೆ ವಿಚಾರವಾಗಿಯೇ ಮನಸ್ತಾಪ ಬಂದು, ಶನಿಸಿಂಗಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಬಗ್ಗೆ ನಾನಾ ಸುದ್ದಿ ಹರಿದಾಡಿದ್ದರಿಂದ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.[ನೋಟು ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಕೇಂದ್ರದಿಂದ ಕೇವಿಯಟ್]

Telangana woman committed suicide fearing her money was worthless

ಕುಟುಂಬ ಮೂಲಗಳು, ಅಷ್ಟೊಂದು ದೊಡ್ಡ ಮೊತ್ತದ ನೋಟುಗಳನ್ನು ಏನು ಮಾಡಬೇಕು ಅಂತ ಗೊತ್ತಾಗದೆ ಗೊಂದಲ ಏರ್ಪಟ್ಟು, ವಿನೋದಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದವು. ಆದರೆ ಸಂಬಂಧಿಕರು, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು.[ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ]

'ವಿನೋದಾ ಅವರಿಗೆ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಮೇಲ್ನೋಟಕ್ಕೆ ಗೊತ್ತಾಗೋದು ಏನಂದರೆ, ಆ ಹಣವನ್ನು ಹಂಚಿಕೊಳ್ಳಲು ಬಯಸಿದ್ದ ಮಗ, ವಿನೋದಾ ಅವರ ಮೇಲೆ ದೌರ್ಜನ್ಯ ಮಾಡಿದ್ದಾನೆ. ನಾವು ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ಕಲೆ ಹಾಕ್ತಿದೀವಿ. ಅಂತ್ಯ ಸಂಸ್ಕಾರದ ನಂತರ ಕುಟುಂಬದವರ ವಿಚಾರಣೆ ಮಾಡ್ತೀವಿ' ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman in Telangana's Mahabubabad district committed suicide on Thursday. Fifty-five-year-old Vinida reportedly had a large amount of Rs 500 and Rs 1000 notes stored in her house.
Please Wait while comments are loading...