Telangana Poll: ಕರ್ನಾಟಕದಂತೆ ತೆಲಂಗಾಣದಲ್ಲಿ ಕಾಂಗ್ರೆಸ್‌ನಿಂದ 'ಗ್ಯಾರಂಟಿ ಪ್ರಣಾಳಿಕೆ' ಬಿಡುಗಡೆ
ಹೈದರಾಬಾದ್, ನವೆಂಬರ್ 17: ಕರ್ನಾಟಕ ಕಾಂಗ್ರೆಸ್ ನಾಯಕರು ಸಹ ಅಬ್ಬರದ ಪ್ರಚಾರ ಮಾಡಿದ್ದ ತೆಲಂಗಾಣದಲ್ಲಿ ಇಂದು ಶುಕ್ರವಾರ ಕಾಂಗ್ರೆಸ್ ತನ್ನ 'ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದಂತೆ ಒಟ್ಟು ಆರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ.
ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ತೆಲಂಗಾಣ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 'ಬಂಗಾರು ತೆಲಂಗಾಣದ ಕನಸನ್ನು ನನಸಾಗಿಸುವುದು' ಎಂದು ಭರವಸೆ ನೀಡಿದರು. ಅದಕ್ಕಾಗಿ ಆರು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಕಾಂಗ್ರೆಸ್ ಪಟ್ಟಿ ಸಮೇತ ವಿವರಿಸಿದರು.

ಕಾಂಗ್ರೆಸ್ ತೆಲಂಗಾಣವನ್ನು ರಚಿಸಿದೆ. ಇದಕ್ಕಾಗಿ ಮಾಡಲಾಗಿದ್ದ ಚಳವಳಿಯ ಹೋರಾಟ ಮತ್ತು ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಕಮಿಷನ್ ರಾಜ್ ಮತ್ತು ಬಿಆರ್‌ಎಸ್ ಪಕ್ಷದಿಂದ ಲೂಟಿಗೆ ಅವಕಾಶ ಕೊಡುವುದಿಲ್ಲ ತಿಳಿಸಿದರು.
ಪ್ರಗತಿಗೆ ಕಾಂಗ್ರೆಸ್ ಸಂಕಲ್ಪ
ತೆಲಂಗಾಣ ವಿಧಾನಸಭೆ ಚುನಾವಣೆ 2023ಯಲ್ಲಿ ಗೆದ್ದು ತೆಲಂಗಾಣದ ಜನರಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಮತ್ತು ಅನಿಯಂತ್ರಿತ ಪ್ರಗತಿಯನ್ನು ಒದಗಿಸಲು ನಾವು ಸಂಕಲ್ಪ ಮಾಡಿದ್ದೇವೆ.
ರಾಜ್ಯದ ಗದ್ವಾಲ್, ನಲ್ಗೊಂಡ ಮತ್ತು ವಾರ್ನಗಲ್‌ನಲ್ಲಿ ಚುನಾವಣಾ ಪ್ರಚಾರದಲ್ಲಿಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ನಾಳೆ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ತೆಲಂಗಾಣದಲ್ಲಿ 119 ಒಟ್ಟು ಕ್ಷೇತ್ರಗಳಿಗೆ ಏಕಕಾಲಕ್ಕೆ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮೂರು ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ
ಬಿಆರ್‌ಎಸ್ ಪಕ್ಷದ ಮುಖ್ಯಸ್ಥ, ಸಿಎಂ ಚಂದ್ರಶೇಖರ್ ರಾವ್ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಇವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಇವರು ವಿರುದ್ಧ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ನ ತೆಲಂಗಾಣ ಮುಖ್ಯಸ್ಥರ ರೇವಂತ್ ರೆಡ್ಡಿಯನ್ನು ಪಕ್ಷ ಕಣಕ್ಕಿಳಿಸಿದೆ.
ಇತ್ತ ಬಿಜೆಪಿಯು ನಟ ಪವನ್ ಕಲ್ಯಾಣ್ ಜೊತೆ ಕೈ ಜೋಡಿಸಿದೆ. ಇದರಿಂದ ಹಿರಿಯ ನಟಿ ವಿಜಯಶಾಂತಿ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಇಲ್ಲಿ ಈ ಮೂರು ಪಕ್ಷಗಳಿಗೂ ತ್ರೀಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.












Click it and Unblock the Notifications