Telangana Poll: ರಾಹುಲ್ ಗಾಂಧಿ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಸೇರಲಿರುವ ಬಿಜೆಪಿ ನಾಯಕಿ

ಹೈದರಾಬಾದ್, ನವೆಂಬರ್ 16: ತೆಲಂಗಾಣದಲ್ಲಿ ಬಿಜೆಪಿಯಲ್ಲಿ ಯಾವುದೇ ಗೌರವ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಟಿ ಮತ್ತು ರಾಜಕಾರಣಿ ವಿಜಯಶಾಂತಿ ಅವರು ಬುಧವಾರ ತೆಲಂಗಾಣ ಬಿಜೆಪಿಗೆ ರಾಜೀನಾಮೆ ನೀಡಿದ್ದರೆ. ಇವರು ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ ಎಂದು ವರದಿ ಆಗಿದೆ.

ಸದ್ಯ ನಡೆಯುತ್ತಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಂತಿ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಕೆಲವು ಆಂತರಿಕ ಕಾರಣಗಳಿಂದ ಮಾಜಿ ಸಂಸದೆ ವಿಜಯಶಾಂತಿ ಅವರು ತಮ್ಮ ರಾಜೀನಾಮೆ ಬಿಜೆಪಿ ತೆಲಂಗಾಣ ಅಧ್ಯಕ್ಷ ಜಿ ಕಿಶನ್ ರೆಡ್ಡಿ ನೀಡಿದ್ದಾರೆ.

telangana-poll-bjp-leader-vijayashanti

ವಿಜಯಶಾಂತಿಯವರು ಕಳೆದ 25 ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಟಿಆರ್‌ಎಸ್ (ಈಗ ಬಿಆರ್‌ಎಸ್) ಪಕ್ಷಗಳ ಜತೆ ಗುರುತುಸಿಕೊಂಡಿದ್ದಾರೆ. ಹಿರಿಯ ರಾಜಕಾರಣಿಯಾಗಿದ್ದು, ದ್ವಂದ್ವ ನಿಲುವು ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇವರು 1997 ರಲ್ಲಿ ಆಗಿನ ಆಂಧ್ರಪ್ರದೇಶ ಬಿಜೆಪಿಗೆ ಸೇರಿದರು ಮತ್ತು ತೆಲಂಗಾಣ ಚಳವಳಿಯ ಭಾಗವಾಗಲು ಬಿಜೆಪಿ ತೊರೆದು 2009 ರಲ್ಲಿ ಟಿಆರ್‌ಎಸ್ ಸೇರಿದರು. ನಂತರ 2014 ರಲ್ಲಿ ಟಿಆರ್ ಎಸ್‌ ಇಂದಿನ ಬಿಆರ್‌ಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿದರು. ಅಲ್ಲಿ ಸಹ ಪೂರ್ಣಪ್ರಮಾಣದಲ್ಲಿ ನಿಲ್ಲದ ಅವರು 2020 ರಲ್ಲಿ ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದಾರೆ.

ಶುಕ್ರವಾರ ರಾಹುಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ?

ಕಳೆದ ಆರು ತಿಂಗಳಿನಿಂದ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿವು ಉದ್ದೇಶ ಹೊಂದಿರುವ ಅವರು ಬಿಜೆಪಿ ನಿರ್ಧಾರಗಳಿಂದ ಅತೃಪ್ತರಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ವಿಜಯಶಾಂತಿ ಅವರಿಗೆ ಯಾವುದೇ ಮನ್ನಣೆ ಸಿಗದಂತೆ ಪಕ್ಷದ ಹಿರಿಯರು ನೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲ ಕಾರಣದಿಂದ ಅವರು ಈಗ ಕಾಂಗ್ರೆಸ್‌ಗೆ ಮರಳಲು ನಿರ್ಧರಿಸಿದ್ದಾರೆ. ಶುಕ್ರವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಅವರು ಪಕ್ಷ ಸೇರಲಿದ್ದಾರೆ.

ಮೆದಕ್ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ಆಕಾಂಕ್ಷಿ

ಬಿಜೆಪಿ ತೊರೆಯುತ್ತಿರುವ ವಿಜಯಶಾಂತಿ ಅವರ ಕಣ್ಣು ಮೇದಕ್ ಕ್ಷೇತ್ರದ ಮೇಲೆ ಬಿದ್ದಿದೆ. ಕಾಂಗ್ರೆಸ್‌ನಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಒಲವು ಹೊಂದಿದ್ದಾರೆ ಎನ್ನಲಾಗಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಮೇದಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಅವರು ಸೋಲುಂಡಿದ್ದರು.

ಕಾಂಗ್ರೆಸ್ ಸೇರ್ಪಡೆ ಆದ ಮೇಲೆ ಅವರಿಗೆ 2024ರ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗಲಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಟಿಕೆಟ್ ಹಂಚಿಕೆ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+