ಬಸ್‌ನಲ್ಲಿ ಯುವತಿಯರ ಜತೆ ಕಾಂಗ್ರೆಸ್ ಹಾಲಿ ಶಾಸಕನ ದುರ್ವರ್ತನೆ! Viral Video ಗೆ ಭಾರೀ ಆಕ್ರೋಶ..
ಹೈದರಾಬಾದ್: ಯುವತಿಯರು, ಮಹಿಳೆಯರಿಗೆ ಬಸ್, ರೈಲುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಇದೆಯಾ? ಎಂಬ ಅನುಮಾನ ಮೂಡುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಯುವತಿಯರು ಯಾವುದೇ ಕಿರಿ ಕಿರಿ ಇಲ್ಲದೇ ಪ್ರಯಾಣ ಮಾಡಲು ಅರ್ಹರಾಗಿರುತ್ತಾರೆ. ಪೋಲಿ, ಪುಂಡರಂತೆ ಚುನಾಯಿತ ಪ್ರತಿನಿಧಿಯೊಬ್ಬರು ಯುವತಿಯರ ಬಗ್ಗೆ ಕಾಳಜಿ ವಹಿಸುತ್ತಿರುವಂತೆ ಮಾತನಾಡುವ ಜೊತೆಗೆ ಕೈ, ಸೊಂಟ ಮುಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 'ಶಾಸಕರಾದರೂ ಸರಿಯೇ ಕಪಾಳಮೋಕ್ಷ' ಮಾಡಬೇಕೆಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ನೀಡುವ 'ಮಹಾಲಕ್ಷ್ಮೀ' ಯೋಜನೆ ಜಾರಿಯಲ್ಲಿದೆ. ಸಮರ್ಪಕ ಯೋಜನೆಯ ಅನುಷ್ಠಾನ, ಸೇವೆಯ ಬಳಕೆ, ಮಹಿಳೆಯರ ಸಂಚಾರ ಕುರಿತು ಕುರಿತು ತಿಳಿಯಲು ಶಾಸಕ ಮಲ್ರೆಡ್ಡಿ ರಂಗಾ ರೆಡ್ಡಿ ಅವರು ಮಂಗಳವಾರ (ಅಕ್ಟೋಬರ್ 6) ಫಿಲ್ಡ್‌ಗೆ ಫಿಲ್ಡ್‌ಗೆ ಇಳಿದಿದ್ದರು. ಬಸ್‌ನಲ್ಲಿ ಅವರನ್ನು ಮಹಿಳೆಯರು ಪ್ರೀತಿಯಿಂದ, ಗೌರವಯುತವಾಗಿ ಸ್ವಾಗತಿಸಿದರು. ಅವರೊಂದಿಗೆ ಮಾತನಾಡಲು ಆರಂಭಿಸಿದರು.

70ರ ವರ್ಷದ ಶಾಸಕನ ವರ್ತನೆಗೆ ವ್ಯಾಪಕ ಟೀಕೆ
ಹೈದರಾಬಾದ್ ವ್ಯಾಪ್ತಿಯ ಇಬ್ರಾಹಿಂಪಟ್ನಂ ಕ್ಷೇತ್ರದ ಕಾಂಗ್ರೆಸ್ ಶಾಸಕ, 70 ವರ್ಷಯ ವಯಸ್ಸಿನ ಮಲ್ರೆಡ್ಡಿ ರಂಗಾ ರೆಡ್ಡಿ ಸಂವಾದ ವೇಳೆ ಯುವತಿಯರೊಂದಿಗೆ ನಡೆದುಕೊಂಡ ರೀತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅದೀಗ ರಾಜಕೀಯವಾಗಿಯು, ಸಾರ್ವಜನಿಕವಾಗಿಯೂ ಚರ್ಚೆಗೆ ಒಳಗಾಗುತ್ತಿದೆ. ತೀವ್ರ ಟೀಕೆಗೆ ಗುರಿಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, 'ಹಾಲಿ ಶಾಸಕರಾಗಿರುವ ಈತನ ಅಸಹ್ಯಕರ ವರ್ತನೆ' ನೋಡಿ ಎಂಬ ಶಿರ್ಷಿಕೆ ಬರೆಯಲಾಗಿದೆ.
ಪರ್ಮಿಷನ್ ಇಲ್ಲದೇ ಮುಟ್ಟುವಂತಿಲ್ಲ, ಶಾಸಕರಾದ್ರು ಕಪಾಳಕ್ಕೆ ಬಾರಿಸಿ..!
ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ರೇವತಿ ಎಂಬುವವರು ಹಂಚಿಕೊಂಡಿದ್ದಾರೆ. ಅದರಲ್ಲಿ 'ಪ್ರಿಯ ಯುವತಿಯರೇ, ಇಂತಹ ಅಸಹ್ಯಕರ ಕಾಮುಕರಿಗೆ ಕಪಾಳಮೋಕ್ಷ ಮಾಡಲು ಎಂದಿಗೂ ಹಿಂಜರಿಯಬೇಡಿ. ಯಾರೇ ಆದರೂ ಸರಿಯೇ ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನು ಈ ರೀತಿ ಮುಟ್ಟಬಾರದು ಮತ್ತು ಮುಟ್ಟುವಂತಿಲ್ಲ. ಅದು ಶಾಸಕರೇ ಆಗಿದ್ದರೂ ಸರಿ!!!' ಎಂದು ತಿಳಿಸಿದ್ದಾರೆ.
'ಹುಡುಗಿಯನ್ನು ಮುಟ್ಟದೆ ಅಥವಾ ಮೈಯನ್ನು ಸ್ಪರ್ಶಿಸದೇ ಈ ಶಾಸಕನಿಗೆ ಮಾತನಾಡಲು ಸಾಧ್ಯವಿಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಶಾಸಕರು ಮುಟ್ಟುವಾಗ 'ಆ ಇಬ್ಬರೂ ಯುವತಿಯರು ಸ್ಪಷ್ಟವಾಗಿ ಮುಜುಗರಕ್ಕೆ ಒಳಗಾಗಿದ್ದರು. ಕೆಂಪು ಕುರ್ತಾ ಧರಿಸಿದ್ದ ಯುವತಿ ಪದೇ ಪದೇ ದೂರ ಸರಿಯುತ್ತಿದ್ದರೂ, ಆತ ಆಕೆಯನ್ನು ಮುಟ್ಟಲು ಒಂದಲ್ಲ ಒಂದು ದಾರಿ ಹುಡುಕುತ್ತಿದ್ದ. ಆತ ಆಕೆಯ ಸೊಂಟದ ಮೇಲೆ ಕೈ ಇಟ್ಟಿದ್ದೇಕೆ??' ಈಗನೊಬ್ಬ ನಾಚಿಕೆಗೇಡಿನ ನೀಚ ವ್ಯಕ್ತಿ!'' ಎಂದು ಆಕ್ರೋಶ ಹೊರ ಹಾಕಲಾಗಿದೆ.
ನೆಟ್ಟಿಗರಿಂದ ಆಕ್ರೋಶ? ಟೀಕೆಗಳ ಸುರಿಮಳೆ..
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿ, ಅದರಲ್ಲೂ ತಂದೆಯ ಸಮಾನರಾದ ಈ ಶಾಸಕ ಆರ್ ಟಿಸಿ ಬಸ್‌ನಲ್ಲಿ ಹೀಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಸೋಷಿಯಲ್ ಮೀಡಿಯಾ ಬಳಕೆದಾರರು ಕಿಡಿ ಕಾರಿದ್ದಾರೆ.
'ಕಾಂಗ್ರೆಸ್ ಪಕ್ಷವು ತಮ್ಮ ಪುರುಷ ಶಾಸಕರಿಗೆ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ನಿರ್ದಿಷ್ಟ ತರಬೇತಿ ನೀಡಬೇಕು. ಅವರ ಸ್ಪರ್ಶದಿಂದ ಯುವತಿ ಅಹಿತಕರ ಅನುಭವ ಅನುಭವಿಸಿದ್ದಾಳೆ' ಎಂದು ಒಬ್ಬರು ಕಳವಳ ವ್ಯಕ್ತಪಡಿಸಿದರು.
ಎರಡನೇ ಬಳಕೆದಾರರು, 'ಬರೀ ರಾಜಕಾರಣಿಗಳಲ್ಲ ಜನಸೇವೆಯಲ್ಲಿರುವ ಕೆಲವು ಪೊಲೀಸ್ ಸಿಬ್ಬಂದಿ ಸಹ ಇದೇ ರೀತಿ ಇದ್ದಾರೆ. ಆಲ್ ಲೋಫರ್ಸ್ ಆರ್ ಸೇಮ್' ಎಂದು ಈ ಹಿಂದಿನ ಅಂತಹ ಘಟನೆಗಳ ಫೋಟೋಗಳನ್ನು ಕಾಮೆಂಟ್‌ನಲ್ಲಿ ಹಾಕಿದ್ದಾರೆ. ಮಹಿಳಾ ಸುರಕ್ಷತೆ ಬಗ್ಗೆ ವಿಷಾದಿಸಿದ್ದಾರೆ. ಮತ್ತೊಬ್ಬರು 'ಶಾಸಕ ಮುಟ್ಟುವಾಗ ಬಸ್ಸಿನಲ್ಲಿದ್ದ ಯುವತಿ ದೂರ ಸರಿಯಲು ಪ್ರಯತ್ನಿಸುತ್ತಿದ್ದರೂ ಶಾಸಕರು ಪದೇ ಪದೇ ಆಕೆಯನ್ನು ಮುಟ್ಟುತ್ತಿರುವುದು ತಪ್ಪು. ಇದು ಆಕೆಯ ವೈಯಕ್ತಿಕ ಗೌರವಕ್ಕೆ (ವೈಯಕ್ತಿಕ ಜಾಗಕ್ಕೆ) ಅಗೌರವ ತೋರುವಂತಿದೆ. ಚುನಾಯಿತ ಪ್ರತಿನಿಧಿಯಾದವರೂ ಸೇರಿದಂತೆ ಯಾರೂ ಅನುಮತಿಯಿಲ್ಲದೆ ಹೀಗೆ ಮಾಡಬಾರದು'. ಯುವತಿಯರು ಇಂತಹ ಕಿರಿಕಿರಿ ಇಲ್ಲದೆ ಪ್ರಯಾಣಿಸಲು ಅರ್ಹರು. ದಯವಿಟ್ಟು ಈ ವಿಡಿಯೋವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ.' ಎಂದು ಆಗ್ರಹಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಡಿಜಿಪಿ ಸೇರಿದಂತೆ ಪೊಲೀಸರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
This sorry excuse of a human being is Congress MLA Malreddy Ranga Reddy, from Ibrahimpatnam, Hyderabad. Dear Girls,Don’t hesitate to slap the hell out of disgusting lechers like these. No one. Absolutely no one can and should touch you like this without your permission. Not even an MLA!!! Why can’t this sorry thing of an MLA speak without touching and feeling the girl? Both the girls were clearly, clearly, clearly uncomfortable and the girl in red Kurtha kept moving away and he kept finding ways to touch her. Why would he put his hand on her waist??Shameless vermin! Thu#వెధవలు
— Revathi (@revathitweets) October 6, 2026


Click it and Unblock the Notifications
