Telangana Poll: ಚುನಾವಣೆ ಪ್ರಚಾರದ ವಾಹನದಿಂದ ಉರಳಿ ಬಿದ್ದ ಬಿಆರ್‌ಎಸ್ ನಾಯಕ
ಬೆಂಗಳೂರು, ನವೆಂಬರ್ 09: ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾರತ್ ರಾಷ್ಟ್ರ ಸಮಿತಿ (BRS) ನಾಯಕರ ಕೆಟಿಆರ್ ರಾವ್ ಅವರು ಮತ್ತು ಇತರ ನಾಯಕರು ವಾಹನ ಮೇಲಿಂದ ಕೆಳಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣ X ವಿಡಿಯೋ ಹರಿದಾಡುತ್ತಿದೆ.
#WATCH | Telangana Minister and BRS leader KTR Rao fell down from a vehicle during an election rally in Armoor, Nizamabad district.
— ANI (@ANI) November 9, 2023
More details awaited. pic.twitter.com/FSNREb5bZZ
ತೆಲಂಗಾಣದಲ್ಲಿ ಇದೇ ನವೆಂಬರ್ 30ರಂದು ವಿಧಾನಸಭಾ ಚುನಾವಣೆ 2023 ನಡೆಯಲಿದೆ. ಈ ಸಂಬಂಧ ಎಲ್ಲ ಪಕ್ಷಗಳು ರಾಜಕೀಯ ಪ್ರಚಾರ ಆರಂಭಿಸಿವೆ. ಇದೇ ರೀತಿ ತೆಲಂಗಾಣ ಸಚಿವ ಮತ್ತು ಬಿಆರ್‌ಎಸ್ ನಾಯಕ ಕೆಟಿಆರ್ ರಾವ್ ಅವರು ನಿಜಾಮಾಬಾದ್ ಜಿಲ್ಲೆಯ ಆರ್ಮೂರ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸುತ್ತಿದ್ದರು.

ಕೆಟಿಆರ್ ರಾವ್ ಅವರು ಸೇರಿದಂತೆ ಪಕ್ಷದ ಕೆಲವು ನಾಯಕರು ವಾಹನದ ಮೇಲೆ ನಿಂತುಕೊಂಡು ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆ ಅವರಿದ್ದ ವಾಹನದ ಮುಂದಿದ್ದ ವಾಹನ ದಿಢೀರ್ ಬ್ರೇಕ್ ಹಾಕಿದೆ. ಹೀಗಾಗಿ ಈ ವಾಹನವು ಏಕಾಎಕಿ ಬ್ರೇಕ್ ಹಾಕಿದ್ದರಿಂದ ಈ ಘಟನೆ ನಡೆದಿದೆ ಎಂಬುದು ವಿಡಿಯೋದಲ್ಲಿ ಕಂಡು ಬಂದಿದೆ.












Click it and Unblock the Notifications