ತೆಲಂಗಾಣ: ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ
ತುಪ್ರಾನ್ ಮಂಡಲ್, ಫೆಬ್ರವರಿ 22: ಮಗುವನ್ನು ಪ್ಲಾಟ್ ಫಾರ್ಮ್ ನಲ್ಲಿ ಕೂರಿಸಿ, ಪತಿ-ಪತ್ನಿ ಇಬ್ಬರೂ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ತುಪ್ರಾನ್ ಮಂಡಲ್ ಎಂಬಲ್ಲಿ ನಡೆದಿದೆ.
ಮೃತ ದೇಹದ ಬಳಿ ಇದ್ದ ಆಧಾರ್ ಕಾರ್ಡಿನ ಮೂಲಕ ಪೊಲೀಸರು, ದಂಪತಿಯ ಗುರುತು ಪತ್ತೆ ಹಚ್ಚಿದ್ದು ನಿಜಾಮಾಬಾದ್ ಜಿಲ್ಲೆಯವರು ಎಂಬುದು ತಿಳಿದುಬಂದಿದೆ.
ದಂಪತಿಯನ್ನು ಒಂಟೆದು ಕಾಶಿರಾಮ್ ಮತ್ತು ಪದ್ಮಜವಾಣಿ ಎಂದು ಗುರುತಿಸಲಾಗಿದೆ. ಪ್ಲಾಟ್ ಫಾರ್ಮ್ ಮೇಲೆ ಅಳುತ್ತ ಕೂತಿದ್ದ ಮಗುವನ್ನು ರಕ್ಷಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications