'ವಲಸೆ' ಬಂದವರಿಗೆ ಆದ್ಯತೆ ಆರೋಪ: 13 ತೆಲಂಗಾಣ ಕಾಂಗ್ರೆಸ್ ಸದಸ್ಯರ ರಾಜೀನಾಮೆ

ಹೈದರಾಬಾದ್, ಡಿ. 19: ತೆಲಂಗಾಣ ಕಾಂಗ್ರೆಸ್‌ಗೆ ದೊಡ್ಡ ಆಘಾತ ಎದುರಾಗಿದೆ. ತೆಲಂಗಾಣ ಕಾಂಗ್ರೆಸ್‌ನಲ್ಲಿ ಪಕ್ಷದ ಆಂತರಿಕ ಜಗಳ ತೀವ್ರಗೊಂಡಿದ್ದು, 13 ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ವಲಸೆ ಬಂದವರು ಪ್ರಾಮುಖ್ಯತೆ ಪಡೆದಿದ್ದಾರೆ ಎಂಬ ಕೆಲ ಹಿರಿಯ ನಾಯಕರ ಹೇಳಿಕೆಯನ್ನು ಪ್ರತಿಭಟಿಸಿ, ರಾಜೀನಾಮೆ ನೀಡಿದ್ದಾರೆ. ಈ 13 ಸದಸ್ಯರಲ್ಲಿ ಹಾಲಿ ಕಾಂಗ್ರೆಸ್ ಶಾಸಕಿ ದಾನಸರಿ ಅನಸೂಯ (ಸೀತಕ್ಕ) ಮತ್ತು ಮಾಜಿ ಶಾಸಕ ವೆಂ ನರೇಂದ್ರ ರೆಡ್ಡಿ ಸೇರಿದ್ದಾರೆ.

ಅವಿಭಜಿತ ಆಂಧ್ರಪ್ರದೇಶದ ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಅವರು ಶನಿವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕೆಲವು ಮಾಜಿ ತೆಲುಗು ದೇಶಂ ಪಕ್ಷದ ನಾಯಕರನ್ನು ಉಲ್ಲೇಖಿಸಿ, "ವಲಸೆ ಬಂದವರಿಗೆ ಪ್ರಾಮುಕ್ಯತೆ ನೀಡಿದರೇ, ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೇ? ಎಂದು ಪ್ರಶ್ನಿಸಿದ್ದರು.

Telangana: 13 Congress members resign from Pradesh Congress Committee

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಎ ರೇವಂತ್ ರೆಡ್ಡಿ ಕುರಿತು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಉಲ್ಲಂಘಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ನೇರವಾಗಿ ಪ್ರತಿಕ್ರಿಯಿಸದೆ, ಪಕ್ಷದ ಹೈಕಮಾಂಡ್ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ತೆಲಂಗಾಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಗ್ರಾಮದಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಮುಖಂಡರು ಜನವರಿ 26 ರಿಂದ ತೆಲಂಗಾಣದಲ್ಲಿ 'ಪಾದಯಾತ್ರೆ' ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಬಿಆರ್‌ಎಸ್ ಮತ್ತು ಕೇಂದ್ರದಲ್ಲಿ ಬಿಜೆಪಿ ಎರಡು ಸರ್ಕಾರಗಳ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಂತೆ ಅವರು ಹಿರಿಯ ನಾಯಕರನ್ನು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ನಂತರ, ಪಕ್ಷದ ಹಲವಾರು ನಾಯಕರು ಇತ್ತೀಚೆಗೆ ರಚಿಸಲಾಗಿರುವ ಸಮಿತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+