ಈ ಹುಡುಗನ ಮೂಗಿನಲ್ಲಿತ್ತು ಮುಕ್ಕಾಲು ಕೆಜಿ ಗಾತ್ರದ ಗೆಡ್ಡೆ!

Posted By:
Subscribe to Oneindia Kannada

ನವದೆಹಲಿ, ಜನವರಿ 25: ಮೂಗಿನಲ್ಲಿ ಸುಮಾರು 750 ಗ್ರಾಂ ತೂಕದ ಗೆಡ್ಡೆಯನ್ನು ಹೊತ್ತುಕೊಂಡು ಉಸಿರಾಡಲೂ ಕಷ್ಟಪಡುತ್ತಿದ್ದ 17 ವರ್ಷದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ಇಲ್ಲಿನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯರ ತಂಡ ಬಾಲಕನಿಗೆ ಹೊಸ ಜೀವನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕರ ಹೆಸರು ಮತ್ತಿತರ ದಾಖಲೆಗಳನ್ನು ಆಸ್ಪತ್ರೆ ಗೌಪ್ಯವಾಗಿರಿಸಿದೆ. ವಿಶ್ವದಲ್ಲಿ ಹೀಗೆ ಮೂಗಿನಲ್ಲಿ ಗೆಡ್ಡೆ ಬೆಳೆಯುವ ಪ್ರಕರಣ ಇದು ಆರನೆಯದ್ದು ಎಂದು ಹೇಳಿರುವ ವೈದ್ಯರು, ಈ ಹುಡುಗ ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದನಂತೆ. ದಿನಗಳೆದಂತೆ ದಪ್ಪವಾಗುತ್ತಾ ಸಾಗಿ ಇತ್ತೀಚೆಗೆ ಟೆನಿಸ್ ಬಾಲ್ ನಷ್ಟು ಗಾತ್ರಕ್ಕೆ ಬೆಳೆದ ಈ ಗೆಡ್ಡೆಯಿಂದಾಗಿ ಆತನಿಗೆ ಸಹಜ ಉಸಿರಾಟಕ್ಕೆ ತೊಂದರೆಯಾಗಿತ್ತಲ್ಲದೆ, ಊಟ ಮಾಡಲು, ಮಾತನಾಡಲೂ ಕಷ್ಟಪಡುವಂಥ ಸ್ಥಿತಿಗೊಳಗಾಗಿದ್ದ ಎಂದು ಹೇಳಿದ್ದಾರೆ.

Teenager gets new life as doctors removed his 750 gms

ಇತ್ತೀಚೆಗೆ, ಜಯಪ್ರಕಾಶ ನಾರಾಯಣ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರಚಿಕಿತ್ಸೆಯ ನಂತರ ಆತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಗಡ್ಡೆಯ ಸಮಸ್ಯೆಯಿಂದ ಮುಕ್ತನಾಗಿದ್ದಾನೆಂದು ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಡಾ. ಜೆ.ಸಿ. ಪಾಸ್ಸೆ ತಿಳಿಸಿದ್ದಾರೆಂದು ಡೈಲಿ ಮೇಲ್ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doctors of Delhi's Loknayak Jayaprakash Narayan hospital successfully removed the tumour weighing about 750 gms from a unnamed 17 year old boy.
Please Wait while comments are loading...