Maharashtra politics: ಶರದ್ ಪವಾರ್ ನಮ್ಮ ಮಾತು ಕೇಳಿದರು, ಆದರೆ ಮೌನವಹಿಸಿದ್ದರು: ಅಜಿತ್ ಪವಾರ್
ಮುಂಬೈ, ಜುಲೈ. 17: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮತ್ತೆ ಭೇಟಿಯಾಗಿದ್ದಾರೆ. ತಮ್ಮ ಹಲವಾರು ನಿಷ್ಠಾವಂತ ಶಾಸಕರೊಂದಿಗೆ ಭಾನುವಾರವಷ್ಟೇ ಶರದ್ ಪವಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು, ಇದಾಗಿ ಒಂದು ದಿನದ ನಂತರ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಮುಖ್ಯಸ್ಥರನನ್ನು ಭೇಟಿ ಮಾಡಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ - ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಲು ಶರದ್ ಪವಾರ್ ಜೊತೆಗೆ ಅಜಿತ್ ಪವಾರ್ ಬಂಡಾಯವೆದ್ದಿದ್ದಾರೆ. ನಿನ್ನೆಯ ಭೇಟಿಯ ಬಗ್ಗೆ ಮಾತಾಡಿರುವ ಪ್ರಫುಲ್ ಪಟೇಲ್, ನಿನ್ನೆ ಭಾನುವಾರವಾದ್ದರಿಂದ ಹಠಾತ್ ಭೇಟಿಯ ಸಮಯದಲ್ಲಿ ಹಲವಾರು ಎನ್‌ಸಿಪಿ ಕ್ಯಾಬಿನೆಟ್ ಸಚಿವರು ಹಾಜರಾಗಿರಲಿಲ್ಲ ಎಂದು ಹೇಳಿದ್ದಾರೆ.

'ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಅವರು ಭಾನುವಾರ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು, ಅವರು ತಾಳ್ಮೆಯಿಂದ ನಮ್ಮ ಮಾತನ್ನು ಆಲಿಸಿದ್ದಾರೆ. ಆದರೆ, ಹಿರಿಯ ನಾಯಕರು ಏನನ್ನೂ ಹೇಳಲಿಲ್ಲ' ಎಂದು ಹೇಳಿದ್ದಾರೆ.
#WATCH | NCP president Sharad Pawar arrives at Mumbai's YB Chavan Centre where Maharashtra Deputy CM Ajit Pawar and NCP MLAs of his faction are present to meet him. pic.twitter.com/hrx8S2mVTR
— ANI (@ANI) July 17, 2023
ಇನ್ನು, ಶಾಸಕರ ಮೂಲಕ ನಿರ್ಣಯವನ್ನು ಅಂಗೀಕರಿಸಲು ಶರದ್ ಪವಾರ್ ಬಣವು ದೆಹಲಿಯಲ್ಲಿ ತಮ್ಮ ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸಿತು ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷದ ಸ್ಥಾನದಲ್ಲಿ ಉಳಿಯಲು ಕಾನೂನು ಅಭಿಪ್ರಾಯವನ್ನು ಕೋರಲಾಗಿದೆ. ಆದರೆ ಕಾನೂನು ತಂಡವೂ ಈ ಹಿಂದೆ ಮುಂದಿನ ಸಭೆಗಳಿಂದ ಗೊಂದಲಕ್ಕೊಳಗಾಗಿದೆ.
ಕಾನೂನು ಅಭಿಪ್ರಾಯದ ಪ್ರಕಾರ, ಶರದ್ ಪವಾರ್ ಪಾಳೆಯದ ಶಾಸಕರು ಪ್ರತಿಪಕ್ಷದಲ್ಲಿ ಉಳಿಯಲು ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು ಮತ್ತು ಆ ನಿರ್ಣಯವನ್ನು ಇಂದು ವಿಧಾನಸಭಾಧ್ಯಕ್ಷರಿಗೆ ರವಾನಿಸಬೇಕಿತ್ತು. ಇನ್ನು, ನಾಳೆ ದೆಹಲಿಯಲ್ಲಿ ನಡೆಯಲಿರುವ ಬೃಹತ್ ಎನ್‌ಡಿಎ ಸಭೆಯಲ್ಲಿ ಪ್ರಫುಲ್ ಪಟೇಲ್ ಮತ್ತು ಅಜಿತ್ ಪವಾರ್ ಭಾಗವಹಿಸಲಿದ್ದಾರೆ.
ಭಾನುವಾರ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ, ಬಂಡಾಯ ಪಾಳಯವು ಪಕ್ಷವು ವಿಭಜನೆಯಾಗದಂತೆ ನೋಡಿಕೊಳ್ಳಲು ಹಿರಿಯ ನಾಯಕರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿತ್ತು. "ಶರದ್ ಪವಾರ್ ನಮಗೆ ಉತ್ತರಿಸಲಿಲ್ಲ, ಅವರು ನಾವು ಹೇಳುವುದನ್ನು ಕೇಳುತ್ತಲೇ ಇದ್ದರು ಮತ್ತು ಅವರನ್ನು ಭೇಟಿಯಾದ ನಂತರ ನಾವು ಹಿಂತಿರುಗುತ್ತಿದ್ದೇವೆ" ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
"ಇಂದು ನಾವು ನಮ್ಮ ದೇವರು ಮತ್ತು ನಮ್ಮ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ನಾವು ಯಾವುದೇ ಅಪಾಯಿಂಟ್‌ಮೆಂಟ್ ಕೇಳದೆ ಇಲ್ಲಿಗೆ ಬಂದಿದ್ದೇವೆ. ಶರದ್ ಪವಾರ್ ಇಲ್ಲಿಗೆ ಸಭೆಗೆ ಆಗಮಿಸಿದ್ದಾರೆಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವರ ಆಶೀರ್ವಾದ ಪಡೆಯಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ" ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಶರದ್ ಪವಾರ್ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಪ್ರಗತಿಪರ ರಾಜಕೀಯವನ್ನು ಮುಂದುವರೆಸುವುದಾಗಿ ಮತ್ತು ಬಿಜೆಪಿಯೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ವಿರುದ್ಧ ವಿವಿಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ಎನ್‌ಸಿಪಿ ತೊರೆದು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ಎನ್‌ಸಿಪಿ ವಿಭಜನೆಯಾಗಿದೆ. ಶರದ್ ಪವಾರ್‌ಗಿಂತ ಹೆಚ್ಚಿನ ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸುವ ಅಜಿತ್ ಪವಾರ್, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದ ತಮ್ಮ ಚಿಕ್ಕಮ್ಮ ಪ್ರತಿಭಾ ಪವಾರ್ ಅವರನ್ನು ಭೇಟಿ ಮಾಡಲು ಕಳೆದ ವಾರ ತಮ್ಮ ಚಿಕ್ಕಪ್ಪನ ಮನೆಗೆ ಭೇಟಿ ನೀಡಿದ್ದರು.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications