ಪ್ರಧಾನಿ ಮೋದಿಗೆ ಗಡ್ಡ ತೆಗೆಯಲು 100 ರೂ ಕಳಿಸಿಕೊಟ್ಟ ಟೀ ಮಾರಾಟಗಾರ

ಮುಂಬೈ, ಜೂನ್ 09: ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯಲು ಟೀ ಮಾರಾಟಗಾರನೊಬ್ಬ 100 ರೂ. ಕಳುಹಿಸಿಕೊಟ್ಟಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಬಾರಾಮತಿಯ ಟೀ ಮಾರಾಟಗಾರನಾಗಿದ್ದು, ಹಣದ ಜತೆಗೆ ಒಂದು ಪತ್ರವನ್ನೂ ಕೂಡ ನೀಡಿದ್ದಾರೆ.

ಪ್ರಧಾನಿ ಹುದ್ದೆ ದೇಶದ ಅತ್ಯುನ್ನತ ಹುದ್ದೆಯಾಗಿದೆ. ಪ್ರಧಾನಿಗಳ ಬಗ್ಗೆ ಅವರ ಆಡಳಿತದ ಬಗ್ಗೆ ಗೌರವವಿದೆ. ನನ್ನ ಉಳಿತಾಯದ ಹಣದಿಂದ 100 ರೂಪಾಯಿಗಳನ್ನು ನಾನು ಅವರಿಗೆ ಗಡ್ಡ ತೆಗೆಸಿಕೊಳ್ಳುವುದಕ್ಕಾಗಿ ಕಳಿಸುತ್ತಿದ್ದೇನೆ.

ಅವರು ಅತ್ಯುನ್ನತ ನಾಯಕ ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ. ದೇಶದ ಬಡ ಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯುವುದಕ್ಕಾಗಿ ಈ ರೀತಿ ಮಾಡಿದ್ದೇನೆ ಎಂದು ಅನಿಲ್ ಮೋರೆ ತಿಳಿಸಿದ್ದಾರೆ.

Tea Vendor Sends Rs 100 To PM Modi To Get His Beard Shaved

ಕಳೆದ ಒಂದೂವರೆ ವರ್ಷದಲ್ಲಿ ಕೊರೊನಾ, ಲಾಕ್ ಡೌನ್ ನಿಂದ ಅಸಂಘಟಿತ ವಲಯ ತೀವ್ರವಾಗಿ ಕುಸಿತ ಕಂಡಿದೆ. ಇದರಿಂದ ತೀವ್ರವಾಗಿ ಬೇಸತ್ತ ಟೀ ವ್ಯಾಪಾರಿ ಅನಿಲ್ ಮೋರೆ, ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಗಡ್ಡ ಬೆಳೆಸಿದ್ದಾರೆ.

ಆದರೆ ಏನನ್ನಾದರೂ ಬೆಳೆಸುವುದಾದರೆ ದೇಶದ ಜನತೆಗೆ ಉದ್ಯೋಗಾವಕಾಶಗಳನ್ನು ಬೆಳೆಸಿ, ಲಸಿಕೆಯನ್ನು ಹೆಚ್ಚಿಸಿ, ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಏರಿಕೆ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.

ಕಳೆದ 2 ಬಾರಿಯ ಲಾಕ್‌ಡೌನ್‌ನಿಂದ ಜನರು ಕಂಗೆಟ್ಟಿದ್ದಾರೆ, ಅವರ ಸಮಸ್ಯೆಗಳು ನಿವಾರಣೆಯಾಗುವುದನ್ನು ಪ್ರಧಾನಿ ಮೋದಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಟೀ ಮಾರಾಟ ಮಾಡುವ ಅನಿಲ್ ಮೋರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರಿಗೆ 5 ಲಕ್ಷ ರೂಪಾಯಿ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ 30,000 ರೂಪಾಯಿಗಳನ್ನು ನೀಡುವುದಕ್ಕೆ ಪ್ರಧಾನಿಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದೇನೆ ಎಂದು ಅನಿಲ್ ಮೋರೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+