ದೇಶ ಮಾರುವ ಪಿಎಂಗಿಂತ, ಟೀ ಮಾರುವ ಪ್ರಧಾನಿ ಉತ್ತಮ!

ರಾಯ್ ಘರ್ (ಛತ್ತೀಸ್ ಗಢ), ನ. 15 : "ದೇಶವನ್ನೇ ಮಾರಾಟ ಮಾಡುವ ಪ್ರಧಾನಿಗಿಂತ ಟೀ ಮಾರಾಟ ಮಾಡುವ ಪ್ರಧಾನಮಂತ್ರಿ ಉತ್ತಮ ಅಲ್ಲವೇ?" ಎಂದು ಜನರನ್ನು ಪ್ರಶ್ನಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಭಾರತ ದೇಶ ಭ್ರಷ್ಟಾಚಾರ ರಹಿತವಾಗಬೇಕೆಂದರೆ ಅದಕ್ಕೂ ಮುನ್ನ ನಮ್ಮ ದೇಶ ಕಾಂಗ್ರೆಸ್ ಮುಕ್ತವಾಗಬೇಕು ಎಂದು ಕರೆ ನೀಡಿದ್ದಾರೆ.

ಛತ್ತೀಸ್ ಗಢದಲ್ಲಿ ನ.19ರಂದು ನಡೆಯಲಿರುವ ಎರಡನೇ ಹಂತದ ವಿಧಾನಸಭೆ ಚುನಾವಣೆಗಾಗಿ ಶುಕ್ರವಾರ ನರೇಂದ್ರ ಮೋದಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಪ್ರಚಾರ ನಡೆಸಿದರು. ಕಾಂಗ್ರೆಸ್ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ ಮೋದಿ, ಕೇಂದ್ರ ಸರ್ಕಾರ ನರೇಂದ್ರ ಮೋದಿ ಭಾಷಣದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದು, ಆಡಳಿತದ ಬಗ್ಗೆ ನಿರಾಸಕ್ತಿ ಹೊಂದಿದೆ ಎಂದು ಕುಟುಕಿದರು.

ಟೀ ಮಾರುತ್ತಿದ್ದ ವ್ಯಕ್ತಿ ಪ್ರಧಾನಿ ಅಭ್ಯರ್ಥಿ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಅವರು, ದೇಶವನ್ನು ಮಾರಾಟ್ ಮಾಡುವ ಪ್ರಧಾನ ಮಂತ್ರಿಗಿಂತ, ಟೀ ಮಾರುವ ಪ್ರಧಾನ ಮಂತ್ರಿ ಉತ್ತಮ ವಲ್ಲವೇ ಎಂದು ಜನರನ್ನು ಪ್ರಶ್ನಿಸುವ ಮೂಲಕ ಪ್ರಧಾನಿ ಮನಹೋಹನ್ ಸಿಂಗ್ ಅವರನ್ನು ಟೀಕಿಸಿದರು. ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ.

ಟೀ ಮಾರುವ ಪ್ರಧಾನಿ ಉತ್ತಮವಲ್ಲವೇ?

ಟೀ ಮಾರುವ ಪ್ರಧಾನಿ ಉತ್ತಮವಲ್ಲವೇ?

ಕಾಂಗ್ರೆಸ್ ಪಕ್ಷ ಟೀ ಮಾರುತ್ತಿದ್ದ ವ್ಯಕ್ತಿ ಪ್ರಧಾನಿ ಅಭ್ಯರ್ಥಿ ಎಂದು ಹೇಳುತ್ತದೆ. ದೇಶವನ್ನೇ ಮಾರಾಟ ಮಾಡುವ ಪ್ರಧಾನಿಗಿಂತ ಟೀ ಮಾರಾಟ ಮಾಡುವ ಪ್ರಧಾನಮಂತ್ರಿ ಉತ್ತಮ ಅಲ್ಲವೇ?" ಎಂದು ಜನರನ್ನು ಪ್ರಶ್ನಿಸಿದರು. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ತಿರುಗೇಟು ನೀಡಿದರು.

ಕಾಂಗ್ರೆಸ್ ಟಿವಿ ಮುಂದೆ ಕುಳಿತಿದೆ

ಕಾಂಗ್ರೆಸ್ ಟಿವಿ ಮುಂದೆ ಕುಳಿತಿದೆ

ಭಾರತ ದೇಶ ಭ್ರಷ್ಟಾಚಾರ ರಹಿತವಾಗಬೇಕೆಂದರೆ ಅದಕ್ಕೂ ಮುನ್ನ ನಮ್ಮ ದೇಶ ಕಾಂಗ್ರೆಸ್ ಮುಕ್ತವಾಗಬೇಕು. ಕಾಂಗ್ರೆಸ್ ದೇಶದ ಆಡಳಿತ ನಡೆಸುವ ಬದಲು, ಮೋದಿ ಎಲ್ಲಿದ್ದಾರೆ? ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂದು ಟಿವಿ ನೋಡುತ್ತಾ ಕುಳಿತಿರುತ್ತದೆ. ಆದ್ದರಿಂದ ದೇಶ ಅಭಿವೃದ್ಧಿಯಾಗುತ್ತಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು

ಟಿವಿಯಲ್ಲಿ ಮೋದಿ ನೋಡುತ್ತಾರೆ

ಟಿವಿಯಲ್ಲಿ ಮೋದಿ ನೋಡುತ್ತಾರೆ

ಕಾಂಗ್ರೆಸ್ ಬಳಿ ಜನರ ಸಮಸ್ಯೆ ಬಗೆಹರಿಸಲು ಸಮಯವಿಲ್ಲ. ಮೋದಿ ಏನು ಮಾತನಾಡುತ್ತಾರೇ?, ಅವರ ಸಮಾವೇಶಕ್ಕೆ ಎಷ್ಟು ಜನರು ಸೇರಿದ್ದಾರೆ? ಎಂದು ಟಿವಿ ಮುಂದೆ ಕುಳಿತು ವೀಕ್ಷಿಸಲು ಸಮಯವಿರುತ್ತದೆ ಎಂದು ಮೋದಿ ಟೀಕಿಸಿದ್ದಾರೆ. ದೆಹಲಿ ಸರ್ಕಾರಕ್ಕೆ ಟಿವಿ ಮುಂದೆ ಕುಳಿತು ಮೋದಿ ಎಲ್ಲಿದ್ದಾರೆ, ಅವರ ಭಾಷಣಕ್ಕೆ ಎಷ್ಟು ಜನರು ನೆರೆದಿದ್ದಾರೆ, ಯಾವ ರೀತಿ ಭರವಸೆ ನೀಡುತ್ತಿದ್ದಾರೆ ಎಂದು ವೀಕ್ಷಿಸುವುದು ಕೆಲಸವಾಗಿದೆ ಎಂದು ಕುಟುಕಿದ್ದಾರೆ

ಸ್ವಾರ್ಥಕ್ಕಾಗಿ ದೇಶವನ್ನು ಬಳಸಿಕೊಳ್ಳುತ್ತಾರೆ

ಸ್ವಾರ್ಥಕ್ಕಾಗಿ ದೇಶವನ್ನು ಬಳಸಿಕೊಳ್ಳುತ್ತಾರೆ

ಕಾಂಗ್ರೆಸ್ ಪಕ್ಷ ತಮ್ಮ ಸ್ವಾರ್ಥಕ್ಕಾಗಿ ದೇಶದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ ದೇಶ ಇಂತಹ ಸ್ಥಿತಿಗೆ ಬಂದು ತಲುಪಿದೆ. ಭ್ರಷ್ಟಾಚಾರ ನಡೆಸಿ ದೇಶದ ದುಸ್ಥಿತಿಗೆ ಕಾರಣವಾಗಿರುವ ಕಾಂಗ್ರೆಸ್ ಮತ್ತೆ ಜನರ ಮುಂದು ಮತ ಕೇಳುತ್ತಿದೆ. ನಿಮ್ಮ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತೀರಾ? ಎಂದು ಮೋದಿ ಜನರಿಗೆ ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ

ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಅವರು ಎಲ್ಲವನ್ನೂ ಬದಲಾಯಿಸುತ್ತಾರೆ, ಅವರಿಗೆ ಬಡವರ ಅಭಿವೃದ್ಧಿ ಮಾಡುವುದಕ್ಕಿಂತಲೂ, ಸ್ವಂತ ಹಿತಾಸಕ್ತಿಯೇ ಮುಖ್ಯವಾಗಿದೆ. ಇಂತಹವರಿಗೆ ಮತ ಕೊಡುತ್ತೀರಾ? ಎಂದು ನೀವೇ ತೀರ್ಮಾನಿಸಿ.

ಹಿಟ್ಲರ್ ಆಡಳಿತ

ಹಿಟ್ಲರ್ ಆಡಳಿತ

ಕಾಂಗ್ರೆಸ್ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿದೆ. ಲತಾ ಮಂಗೇಶ್ಕರ್ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಾರೆ ಇದು ಹಿಟ್ಲರ್ ಆಡಳಿತವವಲ್ಲವೇ? ಇಣತಹ ಆಡಳಿತ ನಿಮಗೆ ಬೇರೆ ಎಂದು ಮೋದಿ ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+