ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ

ವಿಶಾಖಪಟ್ಟಣಂ, ಸೆಪ್ಟೆಂಬರ್ 23: ಆಂಧ್ರಪ್ರದೇಶದ ಅರುಕು ಕ್ಷೇತ್ರದ ಹಾಲಿ ಶಾಸಕ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖಂಡ ಕಿಡಾರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಸಿವೇರಿ ಸೋಮ ಅವರನ್ನು ಇಂದು ಟುಟಾಂಗಿ ಎಂಬಲ್ಲಿ ನಕ್ಸಲರು ಕೊಂಡಿಕ್ಕಿ ಕೊಂದಿದ್ದಾರೆ.

ಅರುಕು ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇವರಿಬ್ಬರು ವಾಪಸ್ ಬರುವಾಗ ಟುಟಾಂಗಿ ಎಂಬಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ನಕ್ಸಲರ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಬಹುಸಂಖ್ಯೆಯಲ್ಲಿ ಬಂದಿದ್ದ ನಕ್ಸಲರು ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಶೂಟ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

AP: TDP leaders Kidari Sarveswara Rao, Siveri Soma shot dead by Naxals in Visakhapatnam

ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ 2014ರಲ್ಲಿ ಎಸ್ಟಿ ಮೀಸಲು ಕ್ಷೇತ್ರವಾದ ಅರುಕುವಿನಲ್ಲಿ ಗೆಲುವು ಸಾಧಿಸಿದ್ದ ಸರ್ವೇಶ್ವರ ರಾವ್ ಅವರು ನಂತರ 2016ರಲ್ಲಿ ಟಿಡಿಪಿ ಸೇರಿದ್ದರು.

ಮಾವೋವಾದಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸಂಸ್ಥಾಪನಾ ದಿನ(ಸೆಪ್ಟೆಂಬರ್ 21)ದಂದೇ ಸರ್ವೇಶ್ವರ್ ರಾವ್ ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಸರ್ವೇಶ್ವರ್ ರಾವ್ ಹಾಗೂ ಶಿವ ಅವರು ನಕ್ಸಲರ ಹಿಟ್ ಲಿಸ್ಟ್ ನಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+