'ಸ್ವಚ್ಛ ಭಾರತ' ಕನಸಿಗೆ ಕೈ ಜೋಡಿಸಿದ ಟಿಸಿಎಸ್‌

ಬೆಂಗಳೂರು, ಆ, 18: ಪ್ರಧಾನಿ ನರೇಂದ್ರ ಮೋದಿಯವರ 'ಸ್ವಚ್ಛ ಭಾರತ' ಕನಸಿಗೆ ಕೈಜೋಡಿಸಲು ಮುಂದಾಗಿರುವ ಟಿಸಿಎಸ್‌(ಟಾಟಾ ಕನ್ಸಲ್‌ಟನ್ಸಿ ಸರ್ವೀಸಸ್‌) ದೇಶದ ಹತ್ತು ಸಾವಿರ ಹೆಣ್ಣು ಮಕ್ಕಳ ಶಾಲೆಗೆ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದೆ.(ಮಹಿಳೆಯರ ಶೌಚಾಲಯಕ್ಕೆ ನುಗ್ಗಿದವನಿಗೆ ಧರ್ಮದೇಟು)

ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ಕಂಪನಿ ಸಿಇಒ ಎನ್‌.ಚಂದ್ರಶೇಖರನ್‌, ಹೆಣ್ಣು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಲು ಕಂಪನಿ ಮುಂದಾಗಿದೆ. ಬಡ ಹೆಣ್ಣು ಮಕ್ಕಳಿಗೆ ಆರೋಗ್ಯ ಕಾಪಾಡುವ ಕಿಟ್‌ ಒದಗಿಸಲು ನೂರು ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

toilet

ಈ ಕ್ರಮಗಳು ಗ್ರಾಮೀಣ ಮತ್ತು ಬಡ ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಪಡೆಯಲು ನೆರವಾಗುತ್ತದೆ. ಅವರ ಸಮುದಾಯದ ಆರ್ಥಿಕ ಸ್ಥಿತಿ ಕಾಪಾಡುತ್ತದೆ ಎಂದು ಹೇಳಿದರು.

ನರೇಂದ್ರ ಮೋದಿಯವರ 'ಸ್ವಚ್ಛ ಭಾರತ' ಕಲ್ಪನೆಗೆ ಸಂಸ್ಥೆ ಸಹಕಾರ ನೀಡಲಿದೆ. ಹೆಣ್ಣು ಮಕ್ಕಳಿಗೆ ಈ ರೀತಿಯ ಸೌಲಭ್ಯ ಕಲ್ಪಿಸಿದರೆ ಅದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಾಕ ಬದಲಾವಣೆ ತರಲಿದ್ದು ಭಾರತದ ಅಭಿವೃದ್ಧಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+