ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಕ್ಕೆ ತೆರೆ: ಜಗತ್ತಿನ ಎಲ್ಲ ಆದಾಯಕ್ಕೂ ಯುಕೆಯಲ್ಲಿ ತೆರಿಗೆ ಪಾವತಿಸುವೆ ಎಂದ ಅಕ್ಷತಾ

|
Google Oneindia Kannada News

ಲಂಡನ್, ಏಪ್ರಿಲ್ 9: ಜಗತ್ತಿನಾದ್ಯಂತ ತಾವು ಗಳಿಸುವ ಒಟ್ಟು ಆದಾಯದ ಮೇಲೆ ಯುಕೆ ಸರ್ಕಾರಕ್ಕೆ ತೆರಿಗೆ ಪಾವತಿಸುವುದಾಗಿ ಅಕ್ಷತಾ ಮೂರ್ತಿ ಘೋಷಿಸಿದ್ದಾರೆ. ಆ ಮೂಲಕ ಬ್ರಿಟನ್‌ನ ಚಾನ್ಸೆಲರ್ ಆಗಿರುವ ತಮ್ಮ ಪತಿ ರಿಷಿ ಸುನಕ್ ರಾಜಕೀಯ ವೃತ್ತಿಜೀವನವನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಒತ್ತಾಯಕ್ಕೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮಣಿದಿದ್ದಾರೆ.

ತನ್ನ ಸುಮಾರು 1-ಬಿಲಿಯನ್ ಡಾಲರ್ ಸಂಪತ್ತಿನ ಮೇಲೆ "ವಾಸಯೋಗ್ಯವಲ್ಲದ" ತೆರಿಗೆ ವಿನಾಯಿತಿಗಳನ್ನು ಪಡೆಯುವುದನ್ನು ನಿಲ್ಲಿಸುವುದಾಗಿ ಹೇಳಿದ್ದು, ಅವರನ್ನು ರಾಣಿಗಿಂತ ಶ್ರೀಮಂತರನ್ನಾಗಿಸಿದೆ. "ಬ್ರಿಟಿಷ್ ಅರ್ಥದಲ್ಲಿ ನ್ಯಾಯ ಸಮ್ಮತವಾಗಿಯು ತಮ್ಮ ತೆರಿಗೆ ಸ್ಥಿತಿಯನ್ನು ಬದಲಾಯಿಸುತ್ತಿರುವುದಾಗಿ ಅಕ್ಷತಾ ಹೇಳಿದ್ದಾರೆ.

ಬ್ರಿಟನ್ನರಿಗೆ ತೆರಿಗೆ ಹೆಚ್ಚಳ, ಆದರೆ ನಾರಾಯಣ ಮೂರ್ತಿ ಪುತ್ರಿ ಅಕ್ಷತಾರಿಗೆ ಏಕೆ ಇಲ್ಲ ತೆರಿಗೆ!?ಬ್ರಿಟನ್ನರಿಗೆ ತೆರಿಗೆ ಹೆಚ್ಚಳ, ಆದರೆ ನಾರಾಯಣ ಮೂರ್ತಿ ಪುತ್ರಿ ಅಕ್ಷತಾರಿಗೆ ಏಕೆ ಇಲ್ಲ ತೆರಿಗೆ!?

ಅಕ್ಷತಾ ಮತ್ತು ಸುನಕ್ ತಮ್ಮ ಯುಕೆ ತೆರಿಗೆ ವ್ಯವಸ್ಥೆಗಳ ಮೇಲೆ ರಾಜಕೀಯ ನಡೆಸಲಾಗುತ್ತಿದೆ. ಇದು ಸಂಪೂರ್ಣ ಕಾನೂನುಬದ್ಧವಾಗಿದ್ದರೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಒಂಬತ್ತು ವರ್ಷಗಳ ಹಿಂದೆ ಬ್ರಿಟನ್‌ಗೆ ತೆರಳಿದ ನಂತರ, ಅಕ್ಷತಾ RNOR (ನಿವಾಸಿ ಅಲ್ಲ ಸಾಮಾನ್ಯ ನಿವಾಸಿ) ಅಥವಾ "ನಾನ್-ಡೋಮ್" ಸ್ಥಿತಿಯನ್ನು ಪಾಲನೆ ಮಾಡಿದ್ದರು. ಇದು ತಮ್ಮ UK ಆದಾಯದ ಮೇಲೆ ಮಾತ್ರ ತೆರಿಗೆ ಪಾವತಿಸಲು ಅವಕಾಶ ನೀಡುತ್ತದೆ. "ನಾನ್-ಡಾಮ್ಸ್" ಸ್ಥಿತಿಯಲ್ಲಿ ವ್ಯಕ್ತಿಯು ವರ್ಷಪೂರ್ತಿ ಯುಕೆಯಲ್ಲಿ ವಾಸಿಸಲು ಅವಕಾಶವಿದೆ.

ಇನ್ಫೋಸಿಸ್‌ನಲ್ಲಿ ಅಕ್ಷತಾ ಪಾಲು ಗಳಿಸಿದ ಆದಾಯ ಎಷ್ಟು ಗೊತ್ತೆ?

ಇನ್ಫೋಸಿಸ್‌ನಲ್ಲಿ ಅಕ್ಷತಾ ಪಾಲು ಗಳಿಸಿದ ಆದಾಯ ಎಷ್ಟು ಗೊತ್ತೆ?

ದಿ ಗಾರ್ಡಿಯನ್ ಪ್ರಕಾರ, ಇನ್ಫೋಸಿಸ್‌ನಲ್ಲಿ ಅಕ್ಷತಾ ಶೇ. 0.9 ಪಾಲು ಹೊಂದಿದ್ದಾರೆ. ಇದರಿಂದ ಕಳೆದ ವರ್ಷವೊಂದರಲ್ಲಿ 11.5 ಮಿಲಿಯನ್ ಪೌಂಡ್‌ಗಳ ಲಾಭಾಂಶ ಗಳಿಸಿರಬಹುದು. ಈ ಕುಟುಂಬದ ದೊಡ್ಡ ಸಂಪತ್ತಿನ ಪ್ರಮಾಣವು ಪ್ರಮುಖ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಿತ್ತು. "ನಾನು ಬ್ರಿಟಿಷ್ ನ್ಯಾಯವನ್ನು ಅರ್ಥ ಮಾಡಿಕೊಂಡಿದ್ದೇನೆ ಮತ್ತು ಪ್ರಶಂಸಿಸುತ್ತೇನೆ. ನನ್ನ ತೆರಿಗೆ ಸ್ಥಿತಿಯು ನನ್ನ ಪತಿಗೆ ಅಡ್ಡಿಪಡಿಸಲು ಅಥವಾ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಲು ನಾನು ಬಯಸುವುದಿಲ್ಲ," ಎಂದು ಅಕ್ಷತಾ ಹೇಳಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ತೆರಿಗೆ ನೀತಿಯಲ್ಲಿ ಏರಿಕೆ

ಯುನೈಟೆಡ್ ಕಿಂಗ್ ಡಮ್ ತೆರಿಗೆ ನೀತಿಯಲ್ಲಿ ಏರಿಕೆ

ಚಾನ್ಸೆಲರ್ ಆಗಿರುವ ಸುನಕ್ ಕಠಿಣ ಬಜೆಟ್ ಅನ್ನು ಪರಿಚಯಿಸಿದರೆ, ಇನ್ನೊಂದು ಮಗ್ಗಲಿನಲ್ಲಿ ನಾನ್-ಡೋಮ್ ಆಗಿ ಪತ್ನಿ ಅಕ್ಷತಾ ಅಪಾರ ತೆರಿಗೆ ಹಣವನ್ನು ಉಳಿಸುತ್ತಿದ್ದರು. ಈ ಬೆಳವಣಿಗೆ ವಿಮರ್ಶಕರನ್ನು ಕೆರಳಿಸಿತು. ಏಕೆಂದರೆ ಯುಕೆಯಲ್ಲಿ ಬೆಲೆ ಏರಿಕೆ ಬಿಸಿ ಸಾರ್ವಜನಿಕರಿಗೆ ಬರೆ ಹಾಕುವ ಮಟ್ಟಕ್ಕೆ ತಲುಪಿದ್ದು, ಇದರ ಮಧ್ಯೆ ಕಳೆದ ತಿಂಗಳು ತೆರಿಗೆ ಹೊರೆಯನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸಲಾಗಿತ್ತು. 1940ರ ನಂತರದಲ್ಲಿ ಅತಿಹೆಚ್ಚು ತೆರಿಗೆಯನ್ನು ಹೆಚ್ಚಳ ಮಾಡಲಾಗಿತ್ತು.

ಯುಕೆಯಲ್ಲಿ ತೆರಿಗೆ ಪಾವತಿಸಿದರೆ ಮೂಲ ಅಂಶ ಬದಲಾಗದು

ಯುಕೆಯಲ್ಲಿ ತೆರಿಗೆ ಪಾವತಿಸಿದರೆ ಮೂಲ ಅಂಶ ಬದಲಾಗದು

ಕಳೆದ ಹಣಕಾಸು ವರ್ಷದಲ್ಲಿ ತನ್ನ ಆದಾಯದ ಮೇಲೆ ಸಂಪೂರ್ಣ ಬ್ರಿಟಿಷ್ ತೆರಿಗೆಯನ್ನು ಪಾವತಿಸುತ್ತೇನೆ. ಆದರೆ ಅದಕ್ಕಿಂತ ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಕ್ಷತಾ ಹೇಳಿಕೊಂಡಿದ್ದಾರೆ. "ವಿಶ್ವಾದ್ಯಂತ ನನ್ನ ಎಲ್ಲಾ ಆದಾಯದ ಮೇಲೆ ಯುಕೆ ತೆರಿಗೆಯನ್ನು ಪಾವತಿಸುವ ನಾನು ನಿರ್ಧರಿಸಿದ್ದೇನೆ. ಆದರೆ, ಇದರಿಂದ ಭಾರತವೇ ನನ್ನ ಜನ್ಮ, ಪೌರತ್ವ, ಪೋಷಕರ ಮನೆ ಮತ್ತು ಮೂಲ ವಾಸಸ್ಥಳದ ದೇಶ ಎಂಬ ಅಂಶವನ್ನು ಬದಲಾಯಿಸುವುದಿಲ್ಲ," ಎಂದು ಅಕ್ಷತಾ ಹೇಳಿದ್ದಾರೆ.

ಇನ್ಫೋಸಿಸ್ ಹಣಕಾಸಿನ ಹೂಡಿಕೆಗಿಂತ ಹೆಚ್ಚು

ಇನ್ಫೋಸಿಸ್ ಹಣಕಾಸಿನ ಹೂಡಿಕೆಗಿಂತ ಹೆಚ್ಚು

ಭಾರತೀಯ ಪೌರತ್ವದ ಬಗ್ಗೆ ಅಕ್ಷತಾ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ಫೋಸಿಸ್ ಎಂಬುದು ಹಣಕಾಸಿನ ಹೂಡಿಕೆಗಿಂತ ಹೆಚ್ಚಿನದಾಗಿದೆ ಎಂದಿದ್ದಾರೆ. "ರಿಷಿ ಸುನಕ್ ನನ್ನ ಭಾರತೀಯ ಪೌರತ್ವವನ್ನು, ಭಾರತದೊಂದಿಗೆ ಸಂಬಂಧಗಳನ್ನು ಅಥವಾ ನನ್ನ ವ್ಯಾಪಾರ ವ್ಯವಹಾರಗಳನ್ನು ತ್ಯಜಿಸುವಂತೆ ಯಾವತ್ತೂ ಕೇಳಿಲ್ಲ. ಹೀಗಿರುವಾಗ ಅವರ ರಾಜಕೀಯ ವಿಷಯಗಳನ್ನು ಸರಳಗೊಳಿಸಲು ನಾನು ಕ್ರಮ ತೆಗೆದುಕೊಳ್ಳುತ್ತೇನೆ," ಎಂದರು.

"ಇನ್ಫೋಸಿಸ್‌ನಲ್ಲಿ ನನ್ನ ದೀರ್ಘಕಾಲದ ಷೇರುಗಳು ಕೇವಲ ಹಣಕಾಸಿನ ಹೂಡಿಕೆ ಮಾತ್ರವಲ್ಲ. ನನ್ನ ತಂದೆಯ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದು ರಿಷಿ ತಿಳಿದಿದ್ದಾರೆ, ಆ ಬಗ್ಗೆ ನಾನು ಅತಿಹೆಚ್ಚು ಹೆಮ್ಮೆ ಪಡುತ್ತೇನೆ, ಆದರೆ ನಾನು ಯುಕೆಯನ್ನೂ ಪ್ರೀತಿಸುತ್ತೇನೆ. ಇಲ್ಲಿ ನಾನು ಬ್ರಿಟಿಷ್ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ್ದೇನೆ. ನನ್ನ ಹೆಣ್ಣುಮಕ್ಕಳು ಬ್ರಿಟಿಷ್ ಪ್ರಜೆಗಳಾಗಿದ್ದು, ಅವರು ಯುಕೆಯಲ್ಲಿ ಬೆಳೆಯುತ್ತಿದ್ದಾರೆ. ನಾನು ಇಲ್ಲಿರುವುದಕ್ಕೂ ತುಂಬಾ ಹೆಮ್ಮೆ ಪಡುತ್ತೇನೆ," ಎಂದು ಅಕ್ಷತಾ ಹೇಳಿದ್ದಾರೆ.

ಪತಿ ರಿಷಿ ಸುನಕ್ ಕುರಿತು ಅಕ್ಷತಾ ಹೇಳಿದ ಮಾತು

ಪತಿ ರಿಷಿ ಸುನಕ್ ಕುರಿತು ಅಕ್ಷತಾ ಹೇಳಿದ ಮಾತು

ತಾವು ವಿದ್ಯಾರ್ಥಿ ಆಗಿದ್ದ ಸಂದರ್ಭದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಇಬ್ಬರೂ ಪರಸ್ಪರ ಭೇಟಿ ಆಗಿದ್ದೆವು. ಅಂದು ಅವರು ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿರಲಿಲ್ಲ. ನಾನು ಅವರನ್ನು ಭೇಟಿ ಮಾಡಿದಾಗ ಅವರಿನ್ನೂ 24 ವರ್ಷದ ವಿದ್ಯಾರ್ಥಿ ಆಗಿದ್ದು, ಬೇರೆ ರಾಷ್ಟ್ರದ ವಿದ್ಯಾರ್ಥಿಯಾಗಿದ್ದರು. ಅಲ್ಲಿಂದ ಬದುಕು ನಮ್ಮನ್ನು ಮುಂದೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದೇ ತಿಳಿದಿರಲಿಲ್ಲ. ನಾನು ಭಾರತೀಯ ಪ್ರಜೆ ಎಂಬ ಸತ್ಯವನ್ನು ರಿಷಿ ಯಾವಾಗಲೂ ಗೌರವಿಸುತ್ತಾರೆ, ಈ ಬಗ್ಗೆ ನನಗೂ ಅವರ ಬಗ್ಗೆ ಹೆಮ್ಮೆಯಿದೆ," ಎಂದು ಅಕ್ಷತಾ ಹೇಳಿದರು.

English summary
Akshata Murthy, the wife of British finance minister Rishi Sunak, has announced she will pay full UK taxes on her worldwide income after a controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X