10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ

Posted By:
Subscribe to Oneindia Kannada

ನವದೆಹಲಿ, ಡಿ. 28: ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆದಾರರಿಗೆ ಸಬ್ಸಿಡಿ ಸಿಲಿಂಡರ್​ಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ಹೊಸ ವ್ಯವಸ್ಥೆ ಜನವರಿ 1, 2016ರಿಂದ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ.

ಹೊಸ ಯೋಜನೆಯಂತೆ ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವಾರ್ಷಿಕ 10 ಲಕ್ಷ ರುಗೂ ಅಧಿಕ ಆದಾಯ ಹೊಂದಿರುವ ವ್ಯಕ್ತಿಗಳು ಎಲ್ ಪಿಜಿ ಸಬ್ಸಿಡಿ ಪಡೆಯುವಂತಿಲ್ಲ. ಸದ್ಯಕ್ಕೆ ಇದನ್ನು ಕಡ್ಡಾಯಗೊಳಿಸಿಲ್ಲ. ಗ್ರಾಹಕರು ಸ್ವಯಂಪ್ರೇರಿತರಾಗಿ ಸಬ್ಸಿಡಿ ಹಿಂತಿರುಗಿಸಲು ಅವಕಾಶ ನೀಡಲಾಗಿದೆ.[ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು]

ಏಪ್ರಿಲ್ 1, 2014ರಿಂದ ವಾರ್ಷಿಕ ಸಿಲಿಂಡರ್ ಬಳಕೆ ಮಿತಿಯನ್ನು 6 ರಿಂದ 12ಕ್ಕೇರಿಸಲಾಯಿತು. ಇದಕ್ಕೆ ದೊರೆಯುವ ಸಬ್ಸಿಡಿ ಮೊತ್ತವನ್ನು ನೇರವಾಗಿ ಬ್ಯಾಂಕಿಗೆ ತಲುಪುವ ವ್ಯವಸ್ಥೆ ಮಾಡಲಾಯಿತು. 2014-15ರಲ್ಲಿ ಸುಮಾರು 40,551 ಕೋಟಿ ರು ದಾಖಲೆಯ ಮೊತ್ತದ ವಹಿವಾಟು ನಡೆದಿದೆ.

Tax payers earning over Rs 10L/yr not to get subsidised LPG

ಸದ್ಯದ ವ್ಯವಸ್ಥೆಯಂತೆ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್ ಗಳು (14.2 ಕೆಜಿ ತೂಗುವ) ವರ್ಷಕ್ಕೆ 12ರಂತೆ ಪಡೆಯಬಹುದು. ಇದರ ಬೆಲೆ 419.26ರು ಇದೆ. ಸಬ್ಸಿಡಿ ರಹಿತ ಮಾರುಕಟ್ಟೆ ದರ 608 ರು ಮೀರುತ್ತದೆ.

ಈಗಾಗಲೇ ದೇಶಾದ್ಯಂತವಿರುವ 15 ಕೋಟಿಗೂ ಅಧಿಕ ಗ್ರಾಹಕರ ಪೈಕಿ 57.5 ಲಕ್ಷ ಜನರು ಸಬ್ಸಿಡಿ ವಾಪಸ್ ಮಾಡಿದ್ದಾರೆ. ಬಡವರಿಗಾಗಿಯೇ ಸಬ್ಸಿಡಿ ಸಿಲಿಂಡರ್ ನೀಡುತ್ತಿರುವುದು, ಹೀಗಿರುವಾಗ 10 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಸಬ್ಸಿಡಿ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಕಳೆದ ತಿಂಗಳು ಈ ವ್ಯವಸ್ಥೆ ಬಗ್ಗೆ ಸುಳಿವು ನೀಡಿದ್ದರು.

ದೇಶದೆಲ್ಲೆಡೆ ಅಕ್ರಮವಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿರುವುದನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿರುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tax payers with annual income of more than Rs 10 lakh will not get subsidised cooking gas (LPG) from next month as the government on Monday(Dec 28) decided to limit supply of under-priced fuel to cut subsidies.
Please Wait while comments are loading...