Tata Cars: ಈ ಎಲ್ಲ ಕಾರುಗಳ ಮೇಲೆ ₹1.55 ಲಕ್ಷದವರೆಗೆ ಡಿಸ್ಕೌಂಟ್‌ ಘೋಷಣೆ

ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಸರಕು ಮತ್ತು ಸೇವಾ ತೆರಿಗೆ (GST) ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ ವಿಧಿಸಲಾಗುತ್ತಿದ್ದ ತೆರಿಗೆ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡುವ ಮೂಲಕ ದೇಶದ ಜನರಿಗೆ ನೆಮ್ಮದಿ ನೀಡಿದೆ. ಈ ಹೊಸ ತೆರಿಗೆ ಇನ್ನೇನು ಕೆಲವೇ ದಿನಗಳಿಂದ ಅನುಷ್ಠಾನಕ್ಕೆ ಬರಲಿದೆ. ಆಟೋಮೊಬೈಲ್‌ ವಲಯದಲ್ಲೂ ಜಿಎಸ್‌ಟಿ ಕಡಿತಗೊಳಿಸಿರುವ ಹಿನ್ನೆಲೆ ಕಾರು ಮಾರಾಟಗಾರರು ತಮ್ಮ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದ್ದಾರೆ. ಹೊಸ ತೆರಿಗೆಯಿಂದಾಗಿ ಕಾರುಗಳು ಯಾವ ಬೆಲೆಗೆ ಗ್ರಾಹಕರ ಕೈಸೇರಲಿದೆ ಎಂಬ ದರಪಟ್ಟಿಯನ್ನು ಕೂಡ ಪ್ರಕಟಿಸಿದೆ.

ಭಾರತದ ಜನಪ್ರಿಯ ಕಾರು ತಯಾರಕ ಬ್ರ್ಯಾಂಡ್‌ ಆಗಿರುವ ಟಾಟಾ ಮೋಟಾರ್ಸ್‌ (Tata Motors) ತನ್ನ ವಿವಿಧ ಮಾಡಲ್‌ ಕಾರುಗಳ ಮೇಲೆ ಹೊಸ ಜಿಎಸ್‌ಟಿ ನಿಯಮದ ಅನ್ವಯ ದರ ಪ್ರಕಟಿಸಿದೆ. ಟಾಟಾ ಸಮೂಹದ ಆಟೋ ದೈತ್ಯ ಸಂಸ್ಥೆ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್, ಕರ್ವ್, ಟಿಯಾಗೊ ಮತ್ತು ಪಂಚ್ ಸೇರಿದಂತೆ ವಿವಿಧ ಶ್ರೇಣಿಯ ಕಾರುಗಳ ಮೇಲೆ ಬರೋಬ್ಬರಿ 65,000 ರೂಪಾಯಿಗಳಿಂದ 1.55 ಲಕ್ಷ ರೂಪಾಯಿವರೆಗೆ ರಿಯಾಯಿತಿ ಘೋಷಿಸಿದೆ.

ಜಿಎಸ್‌ಟಿಯ ಸಂಪೂರ್ಣ ಪ್ರಯೋಜನ, ಉಳಿತಾಯದ ಸಂಪೂರ್ಣ ಸಂತೋಷ. ಸೆಪ್ಟೆಂಬರ್ 22ರಿಂದ ಟಾಟಾ ಮೋಟಾರ್ಸ್ ಕಾರುಗಳು ಮತ್ತು ಎಸ್‌ಯುವಿಗಳು ₹1.55 ಲಕ್ಷದವರೆಗಿನ ಉಳಿತಾಯದೊಂದಿಗೆ ನಿಮ್ಮ ಮನೆಗೆ ಬರುತ್ತವೆ. ಈಗಲೇ ಬುಕ್‌ ಮಾಡಿಕೊಳ್ಳಿ ಎಂದು ಪ್ರಕಟಣೆ ನೀಡಿದೆ.

tata-motors-announces-discounts-upto-1-55-lakh-on-cars-after-new-gst

ಜಿಎಸ್‌ಟಿ ಮಂಡಳಿಯು ಇತ್ತೀಚೆಗೆ ಕೆಲ ಷರತ್ತುಗಳ ಮೂಲಕ ಸಣ್ಣ ಕಾರುಗಳಿಗೆ ಕಡಿಮೆ ತೆರಿಗೆಯನ್ನು ಅನುಮೋದಿಸಿದೆ. ಹೀಗಾಗಿ ಗ್ರಾಹಕರನ್ನು ಆಕರ್ಷಿಸಲು ಕಾರು ತಯಾರಕರು ಈ ಡಿಸ್ಕೌಂಟ್‌ಗಳನ್ನು ಘೋಷಿಸುತ್ತಿದ್ದಾರೆ. ಪರೋಕ್ಷ ತೆರಿಗೆ ಆಡಳಿತದ ಅಡಿಯಲ್ಲಿ ದೇಶದ ಪ್ರಮುಖ ದರ ನಿರ್ಧರಿಸುವ ಸಂಸ್ಥೆಯಾದ ಹಣಕಾಸು ಸಚಿವರ ನೇತೃತ್ವದ ಜಿಎಸ್‌ಟಿ ಮಂಡಳಿಯು ಜಿಎಸ್‌ಟಿ 2.0 ದರ ಕಡಿತವನ್ನು ಘೋಷಿಸಿದ ನಂತರ, ಟಾಟಾ ಮೋಟಾರ್ಸ್ ತನ್ನ ಪ್ರಸ್ತುತ ತನ್ನ ಕಾರುಗಳ ಮೇಲೆ ಸಿಗಲಿರುವ ರಿಯಾಯಿತಿಗಳ ದರ ಪಟ್ಟಿ ಪ್ರಕಟಿಸಿ ಮೊದಲ ಹೆಜ್ಜೆ ಇಟ್ಟಿದೆ.

ಜಿಎಸ್‌ಟಿ ಕಡಿತದ ನಂತರ ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ?

* ಟಾಟಾ ಟಿಯಾಗೊ: 75,000 ರೂ.
* ಟಾಟಾ ಟಿಗೋರ್: 85,000 ರೂ.
* ಟಾಟಾ ಆಲ್ಟ್ರೋಝ್: 1.10 ಲಕ್ಷ ರೂ.
* ಟಾಟಾ ಪಂಚ್: 85,000 ರೂ.
* ಟಾಟಾ ನೆಕ್ಸಾನ್: 1.55 ಲಕ್ಷ ರೂ.
* ಟಾಟಾ ಕರ್ವ್: 65,000 ರೂ.
* ಟಾಟಾ ಹ್ಯಾರಿಯರ್: 1.40 ಲಕ್ಷ ರೂ.
* ಟಾಟಾ ಸಫಾರಿ: 1.45 ಲಕ್ಷ ರೂ.

ಹೊಸ ತೆರಿಗೆ ನಿಯಮ ಏನು?

ಜಿಎಸ್‌ಟಿ ಮಂಡಳಿಯು ಕೆಲ ವಸ್ತುಗಳ ಮೇಲೆ ತೆರಿಗೆ ಕಡಿಮೆ ಒಪ್ಪಿಗೆ ನೀಡಿದೆ. ಅದರಂತೆ 1,200 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ, 4 ಸಾವಿರ ಎಂ.ಎಂಗಿಂತ ಹೆಚ್ಚು ಉದ್ದವಿಲ್ಲದ ಪೆಟ್ರೋಲ್‌, ಎಲ್‌ಪಿಜಿ ಹಾಗೂ ಸಿಎನ್‌ಜಿ ವಾಹನಗಳ ಮೇಲಿನ ಜಿಎಸ್‌ಟಿ ಶೇ18ಕ್ಕೆ ಇಳಿಕೆ ಮಾಡಿದೆ. ಈ ಹಿಂದೆ ಶೇ 28ರಷ್ಟು ತೆರಿಗೆ ವಿಧಿಸಲಾಗಿತ್ತು. ಇನ್ನು 1,500 ಸಿಸಿವರೆಗಿನ ಹಾಗೂ 4 ಸಾವಿರ ಎಂ.ಎಂ ಉದ್ದದ ಡಿಸೇಲ್ ವಾಹನಗಳಿಗೂ ಶೇ 18ರಷ್ಟು ತೆರಿಗೆ ಇಳಿಸಲಾಗಿದೆ. ಹಾಗಾಗಿ ಕಾರು ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+