ಟಾಯೋಟಾ ಫಾರ್ಚುನರ್‌ಗೆ ಒಂದಲ್ಲ.. ಎರಡು ಬಾರಿ ಡಿಕ್ಕಿ ಹೊಡೆದ ಟಾಟಾ ಹ್ಯಾರಿಯರ್ ಎಸ್‌ಯುವಿ-ವಿಡಿಯೋ ಇಲ್ಲಿದೆ
ಯಾವುದೋ ಒಂದು ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದರೆ, ಅದು ಚಾಲಕನ ನಿಂತ್ರಣ ತಪ್ಪಿ ಆದ ಘಟನೆ ಎನ್ನಬಹುದು. ಆದರೆ ಟಾಟಾ ಹ್ಯಾರಿಯರ್ ಎಸ್‌ಯುವಿ ಎರಡು ಬಾರಿ ಟಾಯೋಟಾ ಫಾರ್ಚುನರ್‌ಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಥಾಣೆಯ ರಸ್ತೆಯಲ್ಲಿ ನಡೆದಿದೆ. ಇನ್ನೂ ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಮಂಗಳವಾರ (ಆಗಸ್ಟ್ 20) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಟಾಟಾ ಹ್ಯಾರಿಯರ್ ಎಸ್‌ಯುವಿ ಎರಡು ಬಾರಿ ಟಾಟಾ ಫಾರ್ಚುನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಇದು ಉದ್ದೇಶಪೂರ್ವಕವಾಗಿ ದ್ವೇಷವನ್ನಿಟ್ಟುಕೊಂಡು ಎರಡು ಬಾರಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಲಾಗಿದೆ ಎಂಬುದು ಈ ವಿಡಿಯೋದಲ್ಲಿ ಕ್ಲಿಯರ್ ಆಗಿ ಕಾಣುತ್ತಿದೆ.

ಬದ್ಲಾಪುರ್-ಅಂಬರ್ ನಾಥ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋದಲ್ಲಿ ಬಿಳಿ ಫಾರ್ಚುನರ್ ಕಾರ್‌ನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಮಗು ಈ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ತಕ್ಷಣ ಕಿರುಚಾಡಿದೆ. ಬಳಿಕ ಮತ್ತೊಂದ ಬಾರಿ ಯು-ಟರ್ನ್ ತೆಗೆದುಕೊಂಡು ಬಂದು ಮತ್ತೆ ಡಿಕ್ಕಿ ಹೊಡೆದಾಗ ಆ ಮಗು ಕೆಳಗೆ ಬಿದ್ದಿರುವು ದೃಶ್ಯ ವಿಡಿಯೋದಲ್ಲಿ ಕಾಣುತ್ತಿದೆ.
This video is from Ambarnath, Thane.
— Vivek Gupta (@imvivekgupta) August 20, 2024
Really Shocking Video. pic.twitter.com/rEUUzwsoca
ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಳಿ ಬಣ್ಣದ ಟಾಯೋಟಾ ಫಾರ್ಚುನರ್ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ. ಇನ್ನು ಘಟನೆಯಲ್ಲಿ ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಂಬರನಾಥ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಈ ದೃಶ್ಯವನ್ನು ಗಮನಿಸಿದರೆ, ಘಟನೆಗೆ ಎರಡು ಗುಂಪುಗಳ ನಡುವಿನ ವೈಷಮ್ಯವೇ ಕಾರಣ ಎನ್ನಲಾಗಿದೆ.












Click it and Unblock the Notifications