ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಸಮೂಹ ಸೇರಿದ ಏರ್‌ ಇಂಡಿಯಾ: ಏನೇನು ಬದಲಾವಣೆ?

|
Google Oneindia Kannada News

ನವದೆಹಲಿ, ಜನವರಿ 28: ಏರ್ ಇಂಡಿಯಾದ ಕಾರ್ಯಾಚರಣೆಯನ್ನು ಟಾಟಾ ಸಮೂಹ ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಸರ್ಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಲಾಗಿದೆ.

ಹಾಗಾದರೆ ಏರ್ ಇಂಡಿಯಾದಲ್ಲಿ ಏನೇನು ಬದಲಾವಣೆಯಾಗಲಿವೆ ಎಂಬುದರ ಕುರಿತು ಕುತೂಹಲ ಸಾಕಷ್ಟು ಮಂದಿಯಲ್ಲಿದೆ. ಆ ಮೂಲಕ ಕಳೆಗುಂದಿರುವ 'ಮಹಾರಾಜ'ನಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ. ಈಗಾಗಲೇ ಹಲವು ಸೇವೆಗಳು ಆರಂಭವಾಗಿದ್ದು, ಸೇವೆಯ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಸಿಬ್ಬಂದಿಗಳಿಗೆ ಟಾಟಾ ಸಂದೇಶ ರವಾನೆ ಮಾಡಿದೆ.

Breaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರBreaking: ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ

ಏರ್​ ಇಂಡಿಯಾದ ಹಸ್ತಾಂತರದ ದಿನಾಂಕ ನಿಗದಿಯಾದ ಮೊದಲುಗೊಂಡು, ಅಧಿಕಾರಿಗಳನ್ನು ನೇಮಕ ಮಾಡುವ ತನಕ ಟಾಟಾ ಸಮೂಹವು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದೆ.

Tata Group Plan to Implement These Changes in Air India; Smartly Dressed Crew, Better Meals, Timely Flights

ಅದರ ಉದ್ದೇಶ ಏರ್​ಲೈನ್ ಕಂಪೆನಿಯ ಪುನಶ್ಚೇತನ. ಏಕೆಂದರೆ ಕಳೆದ ಕೆಲ ಸಮಯದಿಂದಲೇ ವೈಮಾನಿಕ ಉದ್ಯಮವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಏರ್​ ಇಂಡಿಯಾ ಹೆಣಗಾಡುತ್ತಿದೆ. 1932ರಲ್ಲಿ ಜೆಆರ್​ಡಿ ಟಾಟಾ ಅವರು ಸ್ಥಾಪಿಸಿದ ವಿಮಾನ ಯಾನ ಸಂಸ್ಥೆ ಇದು. ಆ ನಂತರ ರಾಷ್ಟ್ರೀಕರಣಗೊಳಿಸಲಾಯಿತು, ಅದನ್ನು ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯಾಗಿ ಮಾಡಲಾಯಿತು.

ಸಂಸ್ಥೆಯೊಳಗಿನ ಬದಲಾವಣೆಗಳನ್ನು ಹೊರತುಪಡಿಸಿ, ವಿಮಾನ ಪ್ರಯಾಣದ ಅನುಭವ ಕೂಡ ವಿಸ್ತರಿಸಲು ಟಾಟಾ ಸಮೂಹ ಎದುರು ನೋಡುತ್ತಿದೆ. ಮುಂಬೈನಿಂದ ಕಾರ್ಯ ನಿರ್ವಹಿಸುವ ನಾಲ್ಕು ವಿಮಾನಗಳಿಂದ ಆಹಾರ ಸೇವೆಯ ವಿಸ್ತರಣೆ ಕೂಡ ಪರಿಚಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುರುವಾರದಿಂದ ಮುಂಬೈ- ದೆಹಲಿ (A1864), ಮುಂಬೈ-ದೆಹಲಿ (A1687), ಮುಂಬೈ- ಅಬುಧಾಬಿ (A1945) ಹಾಗೂ ಮುಂಬೈ-ಬೆಂಗಳೂರು (A1639) ವಿಮಾನಗಳಲ್ಲಿ ಆಹಾರ ಸೇವೆ ವಿಸ್ತರಣೆ ಆಗಲಿದೆ.

ಸಿಎನ್​ಬಿಸಿ ಪ್ರಕಾರ, ವಿಮಾನ ಸಿಬ್ಬಂದಿಯ ದಿರಿಸಿನ ವಿಚಾರದಲ್ಲೂ ಗಮನಾರ್ಹ ಬದಲಾವಣೆ ಮಾಡುವುದಕ್ಕೆ ಟಾಟಾ ಸಮೂಹ ಮುಂದಾಗಿದೆ. ಇನ್ನು ಸಮಯಕ್ಕೆ ಸರಿಯಾಗಿ ಹೊರಡುವ ಮತ್ತು ತಲುಪುವ ಬಗ್ಗೆ ಕೂಡ ತಿಳಿಸಲಾಗಿದೆ. ವಿಮಾನದಲ್ಲಿನ ಘೋಷಣೆಯೂ ಬದಲಾಗಲಿದೆ. ವಿಮಾನದೊಳಗೆ ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ಟಾಟಾ ಅವರ ವಿಶೇಷ ಸಂದೇಶ ಪ್ರಸಾರ ಆಗಲಿದೆ. ಆದರೆ ವಿಮಾನದೊಳಗಿನ ಇಂಟಿರೀಯರ್ಸ್ ಬದಲಾವಣೆಗೆ ಸಮಯ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಈಗಿನ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಟಾಟಾ ಸಮೂಹವು 117 ಅಗಲ- ಆಕಾರ ಮತ್ತು ಉದ್ದ- ಆಕಾರದ ವಿಮಾನಗಳಿದ್ದು, 24 ಉದ್ದವಾದ ಏರ್​ ಇಂಡಿಯಾ ಎಕ್ಸ್​ಪ್ರೆಸ್ ವಿಮಾನಗಳಿವೆ. ಇದರ ಹೊರತಾಗಿ 4400 ದೇಶೀ ಹಾಗೂ 1800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್​ಗಳನ್ನು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಹತೋಟಿ ಪಡೆಯುತ್ತದೆ.

ಮುಂಬೈ- ದೆಹಲಿ, ಮುಂಬೈ - ದೆಹಲಿ, ಮುಂಬೈ - ಬೆಂಗಳೂರು, ಮುಂಬೈ - ಲಂಡನ್‌, ಮುಂಬೈ - ನ್ಯೂಯಾರ್ಕ್‌, ಮುಂಬೈ - ಅಬುಧಾಬಿ ನಡುವೆ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲು ನಿರ್ಧರಿಸಲಾಗಿದೆ.

ಟಾಟಾ ವಿಮಾನ ಕ್ಯಾಟೆರಿಂಗ್ ಸೇವೆ ನೀಡುವ ತಾಜ್‌ಸಾಟ್ಸ್‌ನ ನಿರ್ದೇಶನದನ್ವಯ ಈ ಬದಲಾವಣೆ ತರಲಾಗಿದೆ.

ಭೋಜನಕ್ಕೆ ನೂತನ ಮಾರ್ಗಸೂಚಿ: ಪ್ರಯಾಣಿಕರಿಗೆ ಗುಣಮಟ್ಟದ ಊಟ ಹಾಗೂ ಸೇವೆ ಒದಗಿಸಲು ಟಾಟಾ ಸಮೂಜ ಭೋಜನಕ್ಕಾಗಿಯೇ ಹೊಸ ಮಾರ್ಗಸೂಚಿ ರಚಿಸಿದೆ. ಪ್ರತಿಯೊಂದು ಊಟದ ವೇಳೆ ನಿರ್ದೇಶಿಸಲಾದ ಮಾರ್ಗಸೂಚಿಯನ್ವಯವೇ ಗ್ರಾಹಕರಿಗೆ ನೀಡಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಲಾಗಿದೆ. ಬ್ಯುಸಿನೆಸ್‌ ಕ್ಲಾಸ್‌ ಹಾಗೂ ಎಕಾನಮಿ ಕ್ಲಾಸ್‌ಗೆ ಪ್ರತ್ಯೇಕ ಸೂಚಿಗಳನ್ನು ತಯಾರಿಸಲಾಗಿದೆ.

ವೈನ್‌ ಗ್ಲಾಸ್‌ ಹಾಗೂ ಮೆಲಮೈನ್‌ ಕಪ್‌ಗಳ ಬಳಕೆ: ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಮೆಲಮೈನ್ ಗ್ಲಾಸ್‌ಗಳಲ್ಲಿ ಚಹಾ ಹಾಗೂ ಕಾಫಿಯನ್ನು ನೀಡಬೇಕು ಎಂದು ಸಿಬ್ಬಂದಿಗಳಿಗೆ ನಿರ್ದೇಶಿಸಲಾಗಿದೆ.

ಬ್ಯುಸಿನೆಸ್ ಹಾಗೂ ಫಸ್ಟ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವೈನ್‌ ನೀಡುವಾಗ ಹೈ ಬಾಲ್‌ ಹಾಗೂ ವೈನ್‌ ಗ್ಲಾಸ್‌ಗಳಲ್ಲಿ ನೀಡಬೇಕು ಎಂದು ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಾಸಿಲೈನ್‌ ಕಪ್‌ಗಳಲ್ಲಿ ಚಹಾ ಅಥವಾ ಕಾಫಿ ನೀಡಬೇಕು ಎಂದು ಸೂಚಿಸಲಾಗಿದೆ.

ದಿನ ಪತ್ರಿಕೆಗಳು: ಇನ್ನು ಬ್ಯುಸಿನೆಸ್‌, ಫಸ್ಟ್‌ ಕ್ಲಾಸ್‌ ಹಾಗೂ ಎಕಾನಮಿ ಕ್ಲಾಸ್‌ ಪ್ರಯಾಣಿಕರಿಗೆ ದಿನ ಪತ್ರಿಕೆ ಹಾಗೂ ನಿಯಾತಕಾಲಿಕೆ ಒದಗಿಸಬೇಕು ಎಂದು ಟಾಟಾ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಬ್ಲಾಂಕೆಟ್‌ ಹಾಗೂ ತಲೆದಿಂಬು: ಬ್ಯುಸಿನೆಸ್‌ ಹಾಗೂ ಫಸ್ಟ್‌ ಕ್ಲಾಸ್ ಪ್ರಯಾಣಿಕರಿಗೆ ತಪ್ಪದೇ ಬ್ಲಾಕೆಂಟ್‌ ಹಾಗೂ ತಲೆದಿಂಬು ನೀಡುವುದು ಹಾಗೂ ಎಕಾನಮಿ ಕ್ಲಾಸ್‌ ಪ್ರಯಾಣಿಕರು ಬಯಸಿದರೆ ನೀಡಲು ಪ್ರತೀ ವಿಮಾನದಲ್ಲೂ 50 ಬ್ಲಾಕೆಂಟ್ ಹಾಗೂ ತಲೆದಿಂಬುಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.

ಪ್ರಯಾಣಿಕರ ಸೇವೆ: ಪ್ರಯಾಣಿಕರನ್ನು ಅತಿಥಿಗಳಂತೆ ಸ್ವಾಗತಿಸಬೇಕು, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಹಾಗೂ ಅವರಿಗೆ ನೀಡುವ ಸೇವೆಯ ಗುಣಮಟ್ಟದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಉತ್ತಮ ಬಟ್ಟೆ ಧರಿಸುವುದು: ಪ್ರತಿ ಸಿಬ್ಬಂದಿಗಳು ತಮಗೆ ನಿಗದಿ ಪಡಿಸಲಾದ ಉತ್ತಮ ಬಟ್ಟೆ ಧರಿಸಬೇಕು. ಕ್ಯಾಬಿನ್‌ ಕ್ರೂಗಳ ಬ್ರಾಂಡ್‌ ಬೆಳವಣಿಗೆಯ ರಾಯಭಾರಿಗಳಾಗಿರುವುದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

English summary
The journey that started in 1932 as Tata Airlines has finally come to a full circle with homegrown conglomerate Tata Group acquiring 100 percent stake in Air India from the Government of India under PM Modi's vision of privatization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X