ತಮಿಳುನಾಡು: ನ್ಯಾಯಾಲಯದ ಆವರಣದಲ್ಲೇ ಪತಿ ಪತ್ನಿ ಮೇಲೆ ಆ್ಯಸಿಡ್ ದಾಳಿ
ನ್ಯಾಯಾಲಯದ ಆವರಣದಲ್ಲಿ ಪತಿ ಪತ್ನಿ ಮೇಲೆ ಆ್ಯಸಿಡ್ ಎರಚಿದ ಭಯಾನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಗುರುವಾರ ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಆಸಿಡ್ ಎರಚಿದ್ದಾನೆ. ಪತಿ ವಿರುದ್ಧ ಮಹಿಳೆ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಕೋರ್ಟ್ ಮುಂದಾದಾಗ ಆಸಿಡ್ ದಾಳಿ ನಡೆದಿದೆ.
ಚಿತ್ರಾ ಎಂಬ ಮಹಿಳೆ ತನ್ನ ಪತಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಚಾರಣೆ ಆರಂಭಕ್ಕೂ ಮುನ್ನ ಮಹಿಳೆ ಕೊಯಮತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಏಕಾಏಕಿ ಶಿವಕುಮಾರ್ ಆಕೆಯ ಮುಖಕ್ಕೆ ಆಸಿಡ್ ಎರಚಿದ್ದಾನೆ. ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆಸಿಡ್ ಅನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದ ವಕೀಲರು ಶಿವಕುಮಾರ್ ಅವರನ್ನು ಹಿಡಿದರು. ಅಪಾರ ಜನಸಮೂಹ ಅಪರಾಧಿಯ ಮೇಲೆ ದಾಳಿ ಮಾಡಲು ಸಜ್ಜುಗೊಂಡಾಗ ಪೊಲೀಸರು ಶಿವಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಶಿವಕುಮಾರ್ ವಿರುದ್ಧ ಪತ್ನಿ ಮೇಲೆ ಆಸಿಡ್ ದಾಳಿ ಪ್ರಕರಣ ದಾಖಲಾಗಿದೆ.
"ಆಸಿಡ್ ದಾಳಿ ಬಳಿಕ ಸಾರ್ವಜನಿಕರ ಹಲ್ಲೆಯಿಂದ ಆರೋಪಿಯನ್ನು ನಾವು ರಕ್ಷಿಸಿದ್ದೇವೆ. ಪತಿ ಪತ್ನಿ ಮೇಲೆ ಆಸಿಡ್ ಎರಚಿದ್ದಾನೆ. ಶಿವಕುಮಾರ್ ಆಸಿಡ್ ಅನ್ನು ನೀರಿನ ಬಾಟಲಿಯಲ್ಲಿ ತಂದಿದ್ದರು'' ಎಂದು ಕೊಯಮತ್ತೂರು ಡೆಪ್ಯುಟಿ ಕಮಿಷನರ್ ಸಂಧೀಶ್ ಹೇಳಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನ
ತಪ್ಪಿಸಿಕೊಳ್ಳಲು ಯತ್ನಿಸಿದ ಶಿವನನ್ನು ಪೊಲೀಸರು ಮತ್ತು ವಕೀಲರು ಹಿಡಿದಿದ್ದಾರೆ. "ಅವನು ಓಡಿಹೋಗುವುದನ್ನು ನಾನು ನೋಡಿದೆ. ನಾನು ಕೆಲವು ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಕೋರಿದೆ ಮತ್ತು ಅವನು ತಪ್ಪಿಸಿಕೊಳ್ಳುವ ಮೊದಲು ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ'' ಎಂದು ನ್ಯಾಯಾಲಯದ ಕರ್ತವ್ಯದಲ್ಲಿದ್ದ ಆನಮಲೈ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎಂ.ಇಂದುಮತಿ ಹೇಳಿದರು.

ಪೊಲೀಸರ ತನಿಖೆಯಿಂದ ಶಿವ ಮತ್ತು ಆತನ ಪತ್ನಿಗೆ ಇಬ್ಬರು ಮಕ್ಕಳಿರುವುದು ಬೆಳಕಿಗೆ ಬಂದಿದೆ. ಎರಡು ಕಳ್ಳತನ ಪ್ರಕರಣಗಳನ್ನು ಎದುರಿಸುತ್ತಿರುವ ಮಹಿಳೆ ಒಂದು ವಾರದ ಹಿಂದೆ ಮನೆ ತೊರೆದು ತನ್ನ Instagram ಸ್ನೇಹಿತ ಪ್ರಭು ಜೊತೆ ವಾಸಿಸಲು ಪ್ರಾರಂಭಿಸಿದಳು. ಉದ್ಯೋಗದಲ್ಲಿ ಲಾರಿ ಡ್ರೈವರ್ ಆಗಿರುವ ಶಿವ, ಅಂದಿನಿಂದ ತನ್ನ ಹೆಂಡತಿಗಾಗಿ ಹುಡುಕಾಟ ನಡೆಸುತ್ತಿದ್ದ.
"ಶಿವನಿಗೆ ವಕೀಲರಿಂದ ಕರೆ ಬಂದಿತ್ತು, ಗುರುವಾರ ನೀವು ನ್ಯಾಯಾಲಯಕ್ಕೆ ಹಾಜರಾಗಬೇಕು. ಗುರುವಾರ ಪತ್ನಿ ನ್ಯಾಯಾಲಯಕ್ಕೆ ಬರುತ್ತಾರೆ ಎಂದು ತಿಳಿದಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ವೇಳೆ ಘಟನೆ ನಡೆದಿದೆ.
ಮಹಿಳೆಗೆ ಸುಟ್ಟ ಗಾಯ
ಕೊಯಮತ್ತೂರು ಉತ್ತರದ ಉಪ ಪೊಲೀಸ್ ಆಯುಕ್ತ ಜಿ.ಚಂದೀಶ್ ನ್ಯಾಯಾಲಯದ ಆವರಣಕ್ಕೆ ಭೇಟಿ ನೀಡಿದರು. ಮಹಿಳೆಗೆ ಸುಮಾರು 80% ಸುಟ್ಟ ಗಾಯಗಳಾಗಿವೆ ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಕೊಯಮತ್ತೂರು ಬಾರ್ ಅಸೋಸಿಯೇಷನ್ ಮತ್ತು ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ನ್ಯಾಯಾಲಯ ಆವರಣದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ವಿ.ಬಾಲಕೃಷ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಫೆಬ್ರವರಿ 13 ರಂದು, ಕೊಲೆ ಪ್ರಕರಣದ ಆರೋಪಿಯನ್ನು ಜನರ ಗುಂಪೊಂದು ನ್ಯಾಯಾಲಯದ ಸಂಕೀರ್ಣದ ಬಳಿ ಕತ್ತರಿಸಿ ಕೊಂದಿತ್ತು. ಇದರಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. ಕೋರ್ಟ್ ಆವರಣದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.












Click it and Unblock the Notifications