Cyclone Michaung: ಚೆನ್ನೈನಲ್ಲಿ ಪರಿಹಾರ ಕಾರ್ಯಾಚರಣೆ: ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ತಮಿಳುನಾಡಿನಲ್ಲಿ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿರುವುದರಿಂದ, ಮೈಚಾಂಗ್ ಚಂಡಮಾರುತದ ನಂತರ, ರಾಜ್ಯ ಸರ್ಕಾರವು ಡಿ.8 ರಂದು ಚೆನ್ನೈನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತು. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಿದೆ.

"ಸೈಕ್ಲೋನಿಕ್ ಚಂಡಮಾರುತದಿಂದ ಅಗತ್ಯವಾದ ಪರಿಹಾರದ ನಿರ್ವಹಣೆಗೆ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು, ಪ್ರಧಾನಿ ನರೇಂದ್ರ ಮೋದಿ ಅವರು ಎಸ್‌ಡಿಆರ್‌ಎಫ್‌ನ 2 ನೇ ಕಂತಿನ ಕೇಂದ್ರ ಪಾಲನ್ನು ಮುಂಚಿತವಾಗಿ ಬಿಡುಗಡೆ ಮಾಡುವಂತೆ ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡಿದರು. ಆಂಧ್ರಪ್ರದೇಶಕ್ಕೆ ₹493.60 ಮತ್ತು ತಮಿಳುನಾಡಿಗೆ ₹450 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Tamil Nadu Declares Holiday Amid Cyclone Michaung Relief Efforts

ನಗರಕ್ಕೆ ಸೇವೆ ಸಲ್ಲಿಸುವ ಎರಡು ಪ್ರಮುಖ ಟರ್ಮಿನಲ್‌ಗಳಾದ ಚೆನ್ನೈ ಸೆಂಟ್ರಲ್ ಮತ್ತು ಚೆನ್ನೈ ಎಗ್ಮೋರ್‌ನಿಂದ ರೈಲು ಸೇವೆಗಳು ಗುರುವಾರದಿಂದ ಆರಂಭವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕೆಲವು ಬದಲಾವಣೆಗಳನ್ನು ಹೊರತುಪಡಿಸಿ, ಚೆನ್ನೈ ಸೆಂಟ್ರಲ್‌ನಿಂದ ಹೆಚ್ಚಿನ ಮೇಲ್/ಎಕ್ಸ್‌ಪ್ರೆಸ್ ಸೇವೆಗಳು ಶುಕ್ರವಾರದಿಂದ ಎಲ್ಲಾ ದಿಕ್ಕುಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜನಾಥ್ ಸಿಂಗ್ ಭೇಟಿ

ಚಂಡಮಾರುತ ಪರಿಹಾರಕ್ಕಾಗಿ ತಮಿಳುನಾಡಿಗೆ ಎರಡನೇ ಕಂತಿನ ₹450 ಕೋಟಿ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದ್ದರಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಚೆನ್ನೈನಲ್ಲಿ ತಿಳಿಸಿದರು.

ವೈಮಾನಿಕ ಸಮೀಕ್ಷೆ ಮತ್ತು ಸೆಕ್ರೆಟರಿಯೇಟ್‌ನಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸಿಂಗ್, ರಾಜ್ಯಕ್ಕೆ ಮೊದಲ ಕಂತು ₹ 450 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅಧಿಕಾರಿಗಳ ನಿಯೋಜನೆ

ಮಿಚಾಂಗ್ ಚಂಡಮಾರುತವು ನಗರಕ್ಕೆ ಅಪ್ಪಳಿಸಿದ ನಂತರ ಚೆನ್ನೈನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಕುರಿತು ವಿವರಿಸಿದ ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಗುರುವಾರ ಇತರ ಜಿಲ್ಲೆಗಳಿಂದ 9,000 ಅಧಿಕಾರಿಗಳನ್ನು ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಇಎನ್ ಸಿಬ್ಬಂದಿ ಮುಂತಾದ ಇತರ ಜಿಲ್ಲೆಯ ಕಾರ್ಮಿಕರನ್ನು ಚೆನ್ನೈನಲ್ಲಿ ಕೆಲಸ ಮಾಡಲು ಕರೆಯಲಾಗಿದೆ. ಇತರ ಜಿಲ್ಲೆಗಳ ಒಟ್ಟು 9,000 ಅಧಿಕಾರಿಗಳನ್ನು ಚೆನ್ನೈನಲ್ಲಿ ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ, ಎಂದು ಮೀನಾ ಹೇಳಿದರು. ಶುಕ್ರವಾರ ಸಂಜೆ ವೇಳೆಗೆ ಶೇ 100ರಷ್ಟು ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಗ್ಗು ಪ್ರದೇಶಗಳಿಂದ ತುಂಬಿರುವ ನೀರನ್ನು ಹೊರಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಚೆನ್ನೈನಲ್ಲಿ 488 ಬಸ್ ಮಾರ್ಗಗಳಿವೆ, ಅವುಗಳಲ್ಲಿ 39 ಬಸ್ ಮಾರ್ಗಗಳು ಇನ್ನೂ ತೆರವುಗೊಂಡಿಲ್ಲ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+