Get Updates
Get notified of breaking news, exclusive insights, and must-see stories!

ತಮಿಳುನಾಡು ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮಾದರಿ ಗ್ಯಾರಂಟಿ ಯೋಜನೆ ಘೋಷಿಸಿದ ಬಿಜೆಪಿ ಮಿತ್ರ ಪಕ್ಷ ಎಐಎಡಿಎಂಕೆ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ - 2026ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ತಮಿಳುನಾಡಿನ ವಿರೋಧ ಪಕ್ಷವಾಗಿರುವ ಹಾಗೂ ಬಿಜೆಪಿ ಮೈತ್ರಿ ಪಕ್ಷವಾಗಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ /AIADMK) ಕರ್ನಾಟಕ ಮಾದರಿ ಅನುಸರಿಸಲು ಮುಂದಾಗಿದೆ.

ಹೌದು ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಯನ್ನು ಎಐಎಡಿಎಂಕೆ ಘೋಷಿಸಿದೆ. ಅಚ್ಚರಿಯ ವಿಷಯವೆಂದರೆ ಕರ್ನಾಟಕದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಸೌಲಭ್ಯ ನೀಡಿರುವಂತೆ ತಮಿಳುನಾಡಿನಲ್ಲಿ ಪುರುಷರಿಗೂ ಫ್ರೀ ಬಸ್ ಸೌಲಭ್ಯ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

Tamil Nadu Assembly Elections BJP ally AIADMK announces Congress-style guarantee scheme

2026ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪಕ್ಷವು ಚುನಾವಣಾ ಭರವಸೆ (ಮೊದಲ ಹಂತದ ಪ್ರಣಾಳಿಕೆ)ಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಮಿತ್ರಪಕ್ಷವೂ ಆಗಿರುವ ಎಐಎಡಿಎಂಕೆ ಪಕ್ಷವು ಕಾಂಗ್ರೆಸ್ ಮಾದರಿ ಗ್ಯಾರಂಟಿ ಯೋಜನೆಯನ್ನು ಅನುಸರಿಸುತ್ತಿದೆ. ಪ್ರತಿ ಕುಟುಂಬ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ಸಾವಿರ ರೂಪಾಯಿ ಕೊಡುವುದು ಮತ್ತು ಪುರುಷರಿಗೆ ಉಚಿತ ಬಸ್ ಪ್ರಯಾಣವನ್ನು ವಿಸ್ತರಿಸುವ ಯೋಜನೆಗಳು ಪ್ರಮುಖವಾಗಿದೆ.

ಇನ್ನು ತಮಿಳುನಾಡಿನಲ್ಲಿ ಈಗಾಗಲೇ ಕುಟುಂಬದ ಮಹಿಳೆಗೆ 1,000 ರೂಪಾಯಿ ಹಾಗೂ ಉಚಿತ ಬಸ್ ಸೇವೆ ಇದೆ. ನಾವು ಮುಂದೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡಲಿದ್ದೇವೆ. ಅಲ್ಲದೇ ಪುರುಷರಿಗೂ ಫ್ರೀ ಬಸ್ ಸೇವೆ ಕಲ್ಪಿಸಲಾಗುವುದು ಎಂದು ಎಐಎಡಿಎಂಕೆ ಭರವಸೆ ನೀಡಿದೆ.

ಈ ಬಾರಿ ತಮಿಳುನಾಡು ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ನಟ ಹಾಗೂ ರಾಜಕಾರಣಿ ವಿಜಯ್ ಅವರು ಅಲ್ಲಿನ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ತಮಿಳಿಗರಿಗೆ ಹೊಸ ಯೋಜನೆಗಳನ್ನು ಪರಿಚಯಿಸುವುದಾಗಿ ಎಐಎಡಿಎಂಕೆ ಹೇಳಿದೆ. ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸಮಗ್ರ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಭದ್ರತೆಗೆ ಆದ್ಯತೆ ನೀಡುವುದಾಗಿ ಪಕ್ಷವು ಹೇಳಿದೆ.

ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಜಿ ರಾಮಚಂದ್ರನ್ ಅವರ 109ನೇ ಜನ್ಮ ವಾರ್ಷಿಕೋತ್ಸವದ ದಿನದಂದು ಈ ಘೋಷಣೆಗಳನ್ನು ಎಐಎಡಿಎಂಕೆ ಮಾಡಿದೆ. ಮಹಿಳೆಯರ ಸಬಲೀಕರಣ, ಜೀವನೋಪಾಯವನ್ನು ಬಲಪಡಿಸುವುದು, ಎಲ್ಲರಿಗೂ ವಸತಿ ಖಚಿತಪಡಿಸುವುದು ಮತ್ತು ಕಾರ್ಮಿಕರ ಘನತೆಯನ್ನು ಕಾಪಾಡುವುದು ನಮ್ಮ ಮುಖ್ಯ ಆದ್ಯತೆಗಳಾಗಿವೆ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿರೋಧ ಪಕ್ಷದ ನಾಯಕ ಪಳನಿಸ್ವಾಮಿ ಅವರು ಹೇಳಿದ್ದಾರೆ.

ಕುಲವಿಳಕ್ಕು (ಕುಟುಂಬದ ನಂದಾದೀಪ) ಯೋಜನೆ ಅಡಿಯಲ್ಲಿ ಪಕ್ಷವು ಎಲ್ಲಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಮಾಸಿಕ 2,000 ರೂ.ಗಳ ನಗದು ಸಹಾಯವನ್ನು ನೀಡುವುದಾಗಿ ಹೇಳಿದೆ. ನೇರವಾಗಿ ಮನೆಯ ಮಹಿಳಾ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಪ್ರಸ್ತಾವನೆಯು ಡಿಎಂಕೆ ಸರ್ಕಾರದ ಕಲೈಗ್ನರ್ ಮಗಳಿರ್ ಉರಿಮೈ ತೋಗೈ ಯೋಜನೆಯಡಿಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ 1,000 ರೂ. ಯೋಜನೆಗೆ ಟಕ್ಕರ್ ಕೊಡುವ ಉದ್ದೇಶವನ್ನು ಹೊಂದಿದೆ.

ಎಐಎಡಿಎಂಕೆ ಪಕ್ಷದ ಪ್ರಮುಖ ಭರವಸೆಗಳು

1. ಕುಟುಂಬದ ಮುಖ್ಯಸ್ಥೆ / ಮಹಿಳೆಗೆ ಪ್ರತಿ ತಿಂಗಳು ತಲಾ 2 ಸಾವಿರ ರೂಪಾಯಿ.

2. ಪುರುಷರಿಗೂ ಉಚಿತ ಬಸ್, ಮಹಿಳೆಯರಿಗೆ ಉಚಿತ ಬಸ್ ಸೇವೆ ಯಥಾಸ್ಥಿತಿ.

3. ನಗರ ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷರಿಗೆ ಉಚಿತ ಬಸ್ ಪ್ರಯಾಣ.

4. ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಭೂಮಿ ಮತ್ತು ಉಚಿತ ಕಾಂಕ್ರೀಟ್ ಮನೆಗಳ ನಿರ್ಮಾಣ.

5. ನಗರ ಪ್ರದೇಶಗಳಲ್ಲಿ ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸುವುದು ಮತ್ತು ಹಂಚಿಕೆ ಮಾಡುವುದು.

6. 5 ಲಕ್ಷ ಮಹಿಳೆಯರಿಗೆ ಸಬ್ಸಿಡಿಯಲ್ಲಿ ದ್ವಿಚಕ್ರ ವಾಹನ ಸೌಲಭ್ಯ, ತಲಾ 25,000 ರೂ. ಸಬ್ಸಿಡಿ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+