Video: ತಮಿಳುನಾಡಿನ 10 ವರ್ಷದ ಬಾಲಕಿ ಕೇಸ್: ಗಂಭೀರತೆ ಮರೆತು ನಗಾಡಿದ ಪೊಲೀಸರಿಗೆ ನೆಟ್ಟಿಗರಿಂದ ತರಾಟೆ
ಕೊಯಮತ್ತೂರು: ತಮಿಳುನಾಡಿನಲ್ಲಿ ಹತ್ತು ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತ ನೀಡುವು ಮುನ್ನ ನಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇಂಥಹ ಗಂಭೀರ ಪ್ರಕರಣ ನಿರ್ವಹಿಸುವಾಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಹಾಯನುಭೂತಿ ಕೊರತೆ ಇದೆ, ಸೂಕ್ಷ್ಮತೆ ಅವರಿಗಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯವೇ ಮರುಗುತ್ತಿದೆ. ಮೃತ ಬಾಲಕಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾರ್ವಜನಿಕರು ಆರೋಪಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು ನಿರ್ವಹಿಸುವ ಪೊಲೀಸರು ಸಾಮಾನ್ಯ ವಿವೇಚನೆ ಇಲ್ಲದವರಂತೆ ಮೊಬೈಲ್ ನೋಡುತ್ತಾ ಸುದ್ದಿಗೋಷ್ಠಿಯಲ್ಲಿ ಜಗತ್ತೆ ಮರೆತವರಂತೆ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೊಲೀಸರಿಗೆ ಇಂತಹ ಘಟನೆ, ಪ್ರಕರಣಗಳು ಸಾಮಾನ್ಯ ಅನ್ನಿಸಿದರೂ ಸಹಿತ ಇಲ್ಲಿ ಎಲ್ಲರೂ ಮನುಷ್ಯರೆ. ಪರಸ್ಪರ ಭಾವನೆಗಳಿಗೆ ಗೌರವ ಕೊಡಬೇಕಾಗುತ್ತದೆ. ಅದರಲ್ಲೂ ಇದು ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣವಾಗಿದ್ದರಿಂದ ಇದರ ಸ್ವರೂಪ ಸಾಮಾನ್ಯ ಕೇಸುಗಳಂತಲ್ಲ. ಜನಸಾಮಾನ್ಯರೇ ಇಂತಹ ಸಂದರ್ಭದಲ್ಲಿ ಸೂಕ್ಷ್ಮಸವೇದನೆಯಿಂದ ವರ್ತಿಸುತ್ತಾರೆ. ಪ್ರಕರಣ ಆಳ, ಗಂಭೀರತೆ ಗೊತ್ತಿರುವ ಪೊಲೀಸರು ಅದು ಸುದ್ದಿಗೋಷ್ಠಿಯಲ್ಲಿ ಹೀಗೆ ಕರ್ತವ್ಯ ಮರೆತವರಂತೆ ವರ್ತಿಸಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಮೂವರು ಪೊಲೀಸರ ಸುದ್ದಿಗೋಷ್ಠಿಯ ವಿಡಿಯೋ
ವೈರಲ್ ಆದ ವಿಡಿಯೋದಲ್ಲಿ ಮೂವರು ಪೊಲೀಸರು ಪ್ರಕರಣ ಕುರಿತು ವಿವರಣ ನೀಡಲು ಸುದ್ದಿಗೋಷ್ಠಿ ನಡೆಸಿದ್ದು ತಿಳಿಯುತ್ತದೆ. ಮೂವರು ಪೊಲೀಸರ ಪೈಕಿ ನಡುವೆ ಕೂತಿದ್ದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಪಶ್ಚಿಮ ವಲಯ) ಅರ್.ವಿ.ರಮ್ಯಾ ಭಾರತಿ ಅವರು ಸಹೋದ್ಯೋಗಿ ಪೊಲೀಸರೊಂದಿಗೆ ಮಾತನಾಡುತ್ತಾ, ಮೊಬೈಲ್ ನೋಡುತ್ತಾ ನಗಡಾಡಿದ್ದಾರೆ. ಮೂವರು ಪೊಲೀಸರು ನಗುವ ವಿಡಿಯೋ ನೋಡಿದ ಸಾರ್ವಜನಿಕರು ಟೀಕಾಪ್ರಹಾರ ನಡೆಸಿದ್ದಾರೆ. ಸಾಕಷ್ಟು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಟಿವಿಕೆ ಸರ್ಕಾರ ತಿವಿದ ವಿಪಕ್ಷಗಳು
ಮತ್ತೊಂದೆಡೆ ಈ ಪ್ರಕರಣವು ರಾಜ್ಯದಲ್ಲಿ ಆಕ್ರೋಶದ ಜ್ವಾಲೆ ಭುಗಿಲೇಳುವಂತೆ ಮಾಡಿದೆ. ಹಲವರು ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಟಿವಿಕೆ ಪಕ್ಷದ ಮುಖ್ಯಸ್ಥ, ಸಿಎಂ ವಿಜಯ್ ಅವರನ್ನು ಗುರಿಯಾಗಿಸಿ ದೂರುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಸಹ ಧ್ವನಿಗೂಡಿಸಿ ಪ್ರಕರಣ ಖಂಡಿಸುವ ಜೊತೆಗೆ ಇಂದಿನ ಸಂದರ್ಭವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿವೆ.
ವಿಡಿಯೋ ನೋಡಿದ ನೆಟ್ಟಿಗರಿಂದ ತೀವ್ರ ಟೀಕೆ
'ಮಹಿಳಾ ಪೊಲೀಸ್ ಅಧಿಕಾರಿ ಮಾನಸಿಕವಾಗಿ ಅಸ್ಥಿರಗೊಂಡಂತೆ ಕಾಣುತ್ತಾರೆ. ಅವರ ಕೈಚಲನೆಗಳು ಅದನ್ನು ಖಚಿತಪಡಿಸುತ್ತವೆ' ಎಂದು ಸಾಮಾಜಿಕ ಬಳಕೆದಾರರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು 'ಇಂತಹ ಗಂಭೀರ ಪ್ರಕರಣದ ವಿಚಾರ ಹಂಚಿಕೊಳ್ಳುವ ಈ ಪೊಲೀಸರಲ್ಲಿ ಸಹಾನುಭೂತಿಯ ಕೊರತೆ ಎದ್ದು ಕಾಣುತ್ತದೆ' ಎಂದಿದ್ದಾರೆ.' ಬಾಲಕಿ ಹತ್ಯೆಯಂತಹ ಮಹಾಪರಾಧ ನಡೆದಿದೆ. ಅದರ ಕುರಿತು ಅಪ್ಡೇಟ್ ನೀಡುವ ಸಂದರ್ಭದಲ್ಲಿ ಈ ಅಧಿಕಾರಿಗೆ ಗಂಭೀರತೆ ಇಲ್ಲವೇ, ಆತ್ಮಸಾಕ್ಷಿ ಇಲ್ಲವೇ?' ಎಂದು ಮೂರನೇಯವರು ಕಾಮೆಂಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್, ಎಕ್ಸ್ ಖಾತೆಗಳಲ್ಲಿ ವಿಡಿಯೋ ನೋಡಿದ ಅನೇಕರು ಪೊಲೀಸರು ಅದರಲ್ಲೂ ಈ ಮಹಿಳಾ ಪೊಲೀಸ್ ಅಧಿಕಾರಿ ವರ್ತನೆ, ಅವರ ಮನದುಂಬಿ ನಗುವ ಕ್ಷಣಗಳನ್ನು ಪ್ರಶ್ನಿಸಿದ್ದಾರೆ. ಮಾಧ್ಯಮ ಉದ್ದೇಶಿಸಿ ಮಾತನಾಡುವಾಗ ಹೇಗಿರಬೇಕೆಂಬ ತಿಳವಳಿಕೆ ಇವರಲ್ಲಿಲ್ಲ' ಎಂದು ಕಿಡಿ ಕಾರಿದ್ದಾರೆ.
How can anyone be so insensitive? 😰
— Satish Acharya (@satishacharya) May 25, 2026
10-year old girl was sexually assulted & brutally killed.
And these police officers were cracking jokes & laughing hysterically at the press briefing. pic.twitter.com/UfPzxC4k0z
ಬೈಟ್ ಕೊಡುವಾಗಲೂ ನಿಲ್ಲದ ಮಹಿಳಾ ಅಧಿಕಾರಿ ನಗು!
ಪ್ರಕರಣದ ತನಿಖಾಧಿಕಾರಿ ರಮ್ಯಾ ಭಾರತಿ ಅವರನ್ನು ಪ್ರತ್ಯೇಕವಾಗಿ ಎಎನ್‌ಐ ವರದಿಗಾರರೊಬ್ಬರು ಮಾತನಾಡಿಸಿದ್ದಾರೆ. 'ಪ್ರಕರಣದ ಸೂಕ್ಷ್ಮತೆ ನಮಗೆ ಅರ್ಥವಾಗುತ್ತದೆ. ಈಗಾಗಲೇ ನಾವು ತನಿಖೆ ಕೈಗೊಂಡಿದ್ದು, ಇಬ್ಬರನ್ನು ಬಂಧಿಸಿದ್ದೇವೆ. ತನಿಖೆ ಮುಂದಿನ ಹಂತ ಕ್ರಮಗಳು ಕೈಗೊಳ್ಳಲಿದ್ದೇವೆ' ಎಂದು ರಮ್ಯಾ ಭಾರತಿ ವಿವರಿಸುತ್ತಾರೆ. ಈ ಬಗ್ಗೆ ಹೆಚ್ಚು ಕೇಳಬೇಡಿ ಅನ್ನುತ್ತಲೇ ಸುಮಾರು ಎರಡು ಮೂರು ಬಾರಿ ನಗುತ್ತಲೇ ಉತ್ತರಿಸುತ್ತಾರೆ. 'ಈ ರಮ್ಯಾ ಭಾರತಿ ಅವರು ಆರೋಪಿಗಳ ಕುರಿತು ಕೇಳಿದರೆ ಯಾಕೇ ಹೀಗೆ ನಗಾಡುತ್ತಾರೆ' ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಾಲಕಿ ಸಾವು: ಇಬ್ಬರ ಬಂಧನ
ಮನೆಯಿಂದ ದಿನಸಿ ವಸ್ತುಗಳ ತರಲು ಕಳೆದ ಗುರುವಾರ ಮನೆ ಸಮೀಪದ ಅಂಗಡಿಗೆ ಹೋಗಿದ್ದ ಬಾಲಕಿ ಮರಳಿ ಮನೆ ಬಾರದ್ದನ್ನು ಕಂಡು ಪೋಷಕರು ಆತಂಕಗೊಂಡಿದ್ದರು. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾರನೇ ದಿನ ಶುಕ್ರವಾರ ಮನೆಯಿಂದ ಸುಮಾರು 1.5 ಕಿಲೋ ಮೀಟರ್ ದೂರದ ಪ್ರದೇಶದಲ್ಲಿ ಬಾಲಕಿ ಹೆಣವಾಗಿ ಪತ್ತೆ ಆಗಿದ್ದಾಳೆ. ಇದನ್ನು ಕಂಡು ಇಡೀ ಊರಿನವರೇ ಕಣ್ಣೀರಿಟ್ಟಿದ್ದಾರೆ. ಬಾಳಿ ಬದುಕಬೇಕಾದ ಬಾಲಕಿ ಕಳೆದುಕೊಂಡು ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ಬಾಲಕಿ ಸಾವಿಗೆ ಕಾರಣರಾದ ದಿನಗೂಲಿ ಕಾರ್ಮಿಕ ಕೆ.ಕಾರ್ತಿ (33) ಆತನ ಸಹಚರ ಆರ್.ಮೋಹನ್ (30) ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಸದ್ಯ ತನಿಖಾಧಿಕಾರಿಗಳ ವರ್ತನೆಗೆ ವ್ಯಾಪಕ ಟೀಕೆ ಕೇಳಿ ಬಂದಿವೆ.
Not just during the press conference even in random interviews this lady officer couldn’t control her laughter.
— Trupti Garg (@garg_trupti) May 25, 2026
The media is questioning her over such a sensitive case but look at her face@CMOTamilnadu still hasn’t taken any action against her.
Can people really expect… pic.twitter.com/BsGZD3whvM













Click it and Unblock the Notifications