ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ಜೊತೆಗಿನ ನಿಮ್ಮ ನೆನಪು ಹಂಚಿಕೊಳ್ಳಿ!

By Mahesh
|
Google Oneindia Kannada News

ಆಗ್ರಾ, ಆಗಸ್ಟ್ 16: ಸಾಮಾಜಿಕ ಜಾಲ ತಾಣ ಟ್ವಿಟ್ಟರ್‌ ಗೆ ಎಂಟ್ರಿ ಕೊಟ್ಟ ವಿಶ್ವದ ಮೊಟ್ಟಮೊದಲ ಐತಿಹಾಸಿಕ ಸ್ಮಾರಕ ಎಂಬ ಹೆಗ್ಗಳಿಕೆ ತಾಜ್‌ಮಹಲ್ ಪಾಲಾಗಿರುವುದು ಎಲ್ಲರಿಗೂ ಗೊತ್ತಿರಬಹುದು. ಇದರ ಬೆನ್ನಲ್ಲೇ ತಾಜ್ ಮಹಲ್ ಜೊತೆಗಿನ ನಿಮ್ಮ ನೆನಪು ಹಂಚಿಕೊಳ್ಳಲು ಆರಂಭವಾದ 'ಮೈ ತಾಜ್ ಮೆಮೋರಿ' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಅವರು ತಾಜ್‌ಮಹಲ್ ಟ್ವಿಟ್ಟರ್ ಖಾತೆಯನ್ನು ಲೋಕಾರ್ಪಣೆ ಮಾಡಿದರು. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಟ್ವಿಟ್ಟರ್ ಇಂಡಿಯಾದ ಮುಖ್ಯಸ್ಥ ರಾಹೀಲ್ ಖುರ್ಷೀದ್, ವಿಶ್ವದಲ್ಲೇ ಪ್ರತ್ಯೇಕ ಟ್ವಿಟರ್ ಅಕೌಂಟ್(@TajMahal) ತೆರೆದ ಮೊಟ್ಟ ಮೊದಲ ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ಎಂದಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್‌ಮಹಲ್ ಬಳಿ ವೈಫೈ ಸೌಲಭ್ಯ ವ್ಯವಸ್ಥೆ ಆರಂಭಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಟ್ವಿಟ್ಟರ್ ಗೆ ಬಂದ ತಾಜ್‌ಮಹಲ್‌ಗೆ ಮೊದಲ ಒಂದು ಗಂಟೆಯಲ್ಲೇ 2 ಸಾವಿರ ಫಾಲೋಯರ್‌ಗಳು ಸಿಕ್ಕಿದ್ದರು. ಸದ್ಯಕ್ಕೆ ಭಾನುವಾರ ಮಧ್ಯಾಹ್ನದ ವೇಳೆಗೆ 9,943 ಹಿಂಬಾಲಕರನ್ನು ಪಡೆದುಕೊಂಡಿದೆ.[ಆನ್ ಲೈನ್ ಟಿಕೆಟ್ ಸೌಲಭ್ಯವಿದೆ]

ಟ್ವಿಟ್ಟರ್ ಖಾತೆ ಆರಂಭಿಸಿದ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು #MyTajMemory ಗೆ ಚಾಲನೆ ನೀಡಿದರು. ಇದರಿಂದ ಪುಳಕಿತರಾದ ಸಾರ್ವಜನಿಕರು ತಾಜ್ ಮಹಲ್ ಜೊತೆಗಿನ ತಮ್ಮ ನೆನಪು ಹಂಚಿಕೊಳ್ಳುತ್ತಿದ್ದಾರೆ.

ಪ್ರೇಮಸೌಧ ಆದಾಯ ಗಳಿಕೆಯಲ್ಲಿ ನಂ.1

ಪ್ರೇಮಸೌಧ ಆದಾಯ ಗಳಿಕೆಯಲ್ಲಿ ನಂ.1

17ನೇ ಶತಮಾನದ ಸ್ಮಾರಕ ತಾಜ್‌ಮಹಲ್‌ ನೋಡಲು ಪ್ರತಿ ವರ್ಷ ಲಕ್ಷಾಂತರ ಜನರು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ. ಪ್ರವಾಸಿ ತಾಣಗಳ ಪೈಕಿ ಅತಿ ಹೆಚ್ಚು ಆದಾಯ ಗಳಿಕೆ ಕೂಡಾ ತಾಜ್ ಮಹಲ್ ಪಡೆದುಕೊಳ್ಳುತ್ತಿದೆ. ಅದರೆ, ವಾಯುಮಾಲಿನ್ಯದಿಂದ ತಾಜ್ ಮಹಲ್ ಮಂಕಾಗುತ್ತಿದೆ. [ಆದಾಯ ಗಳಿಕೆಯಲ್ಲಿ ನಂ.1]

ಸೌಂದರ್ಯ ರಕ್ಷಣೆಗೆ ಪಾಕಿಸ್ತಾನದ ಮಣ್ಣು

ಸೌಂದರ್ಯ ರಕ್ಷಣೆಗೆ ಪಾಕಿಸ್ತಾನದ ಮಣ್ಣು

ಭಾರತೀಯ ಪುರಾತತ್ವ ಇಲಾಖೆ (ಎಸ್‌ಎಸ್‌ಐ) ತಾಜ್‌ಮಹಲ್‌ಗೆ ಮುಲ್ತಾನಿನ ಮಣ್ಣು ಬಳಿಯಲು ಯೋಜಿಸಿದ್ದಾರೆ.ತಾಜ್ ಮಹಲ್ ಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ಸುಮಾರು 10.4 ಲಕ್ಷ ರು ಎಂದು ಹೇಳಲಾಗಿದೆ. [ಮಣ್ಣಿಗೆ ಎಷ್ಟು ಖರ್ಚಾಗಲಿದೆ]

ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು

ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು

ತಾಜಮಹಲಿನ ಮಮ್ತಾಜಳ ರಕ್ಷಣೆಗೆ ಪತಿವ್ರತಾ ಶಿರೋಮಣಿ ತುಳಸಿಯ ನೆರವನ್ನು ಕೋರಲಾಗಿತ್ತು. ಸಾವಿರಾರು ತುಳಸಿ ಗಿಡಗಳನ್ನು ನೆಟ್ಟು ಸೌಂದರ್ಯ ಸಂರಕ್ಷಣೆ ಕಾರ್ಯ ಭರದಿಂದ ಸಾಗಿತ್ತು. ಅದರೆ, ತಕ್ಕ ಪ್ರತಿಫಲ ಸಿಕ್ಕಿರಲಿಲ್ಲ.[ವಿವರ ಇಲ್ಲಿ ಓದಿ]

ತಾಜ್ ಮಹಲ್ ಅಕೌಂಟ್ ನಿಂದ ಟ್ವೀಟ್

ತಾಜ್ ಮಹಲ್ ಅಕೌಂಟ್ ನಿಂದ ಟ್ವೀಟ್ ಗಳು ಗಮನ ಸೆಳೆಯುತ್ತಿದೆ. ನನ್ನನ್ನು ನೋಡಲು ಪ್ರವಾಸಿಗರು ಯಾವ ರೀತಿ ಇರುತ್ತಾರೆ ಎಂಬುದರ ಬಗ್ಗೆ ಟ್ವೀಟ್.

ಸಿಎಂ ಅಖಿಲೇಶ್ ಯಾದವ್ ಟ್ವೀಟ್

ಟ್ವಿಟ್ಟರ್ ಖಾತೆ ಆರಂಭಿಸಿದ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು #MyTajMemory ಗೆ ಚಾಲನೆ ನೀಡಿದರು

ಕನ್ನಡಿಗರಿಂದಲೂ ತಾಜ್ ನೆನಪಿನ ಟ್ವೀಟ್

ಕನ್ನಡಿಗರಿಂದಲೂ ತಾಜ್ ನೆನಪಿನ ಟ್ವೀಟ್ ಗಳು ಬಂದಿವೆ.

ರಿಯಾ ಅವರು ತಾಜ್ ಮಹಲ್ ನೆನಪಿಸಿಕೊಂಡಿದ್ದು

ರಿಯಾ ಅವರು ತಾಜ್ ಮಹಲ್ ನೆನಪಿಸಿಕೊಂಡಿದ್ದು ಹೀಗೆ...

ಟ್ವಿಟ್ಟರ್ ಇಂಡಿಯಾದಿಂದ ಈ ಬಗ್ಗೆ ಟ್ವೀಟ್

ಟ್ವಿಟ್ಟರ್ ಇಂಡಿಯಾದಿಂದ ತಾಜ್ ಮಹಲ್ ಬಗ್ಗೆ ಟ್ವೀಟ್...

ತಾಜ್ ಮಹಲ್ ಜೊತೆ ವಾಲ್ ಮಾರ್ಟ್ ಸಿಇಒ

ತಾಜ್ ಮಹಲ್ ಜೊತೆ ವಾಲ್ ಮಾರ್ಟ್ ಸಿಇಒ ಪೋಸ್ ಕೊಟ್ಟಿದ್ದು ಹೀಗೆ...

ಹಳೆ ಚಿತ್ರಗಳನ್ನು ಹಂಚಿಕೊಂಡ ಸಾರ್ವಜನಿಕರು

ಹಳೆ ಚಿತ್ರಗಳನ್ನು ಹಂಚಿಕೊಂಡ ಸಾರ್ವಜನಿಕರು, ವಾಹ್ ತಾಜ್ ಎಂದಿದ್ದಾರೆ.

ತಾಜ್ ಎಂದರೆ ಚಿಕ್ಕಂದಿನ ಸ್ಮರಣೆ

ತಾಜ್ ಎಂದರೆ ಚಿಕ್ಕಂದಿನ ಸ್ಮರಣೆ ಎಂದು ಟ್ವೀಟ್

English summary
Uttar Pradesh Chief Minister Akhilesh Yadav marked Independence Day on Saturday by launching the official Twitter account of the 17th century Taj Mahal. people from across India and the world started sharing their Taj Mahal experiences with the hashtag #MyTajMemory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X