ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್‌ ನೋಡಲು ಆನ್‌ಲೈನ್‌ನಲ್ಲೇ ಟಿಕೆಟ್ ಬುಕಿಂಗ್

By Kiran B Hegde
|
Google Oneindia Kannada News

ಆಗ್ರಾ, ಡಿ. 26: ಪ್ರೇಮದ ಸಂಕೇತ ತಾಜ್ ಮಹಲ್ ನೋಡುವುದು ಯುವ ಜೋಡಿಗಳ ಕನಸಾಗಿರುತ್ತದೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಈ ಪ್ರೇಮಸೌಧ ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

ಆದರೆ, ಆಗ್ರಾಕ್ಕೆ ತೆರಳಿದವರು ಟಿಕೆಟ್ ಪಡೆಯಲು ಸಾಲಿನಲ್ಲಿ ನಿಲ್ಲಬೇಕು. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಒಂದು ವೇಳೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರೆ ಅನೇಕರಿಗೆ ಸಾಲಲ್ಲಿ ನಿಂತರೂ ವಿಶ್ವವಿಖ್ಯಾತ ಪ್ರೇಮ ಸೌಧ ನೋಡಲು ಸಮಯ ಸಿಗದೆ ವಾಪಸ್ ಬರುವ ಪ್ರಸಂಗವೂ ಎದುರಾಗಬಹುದು.

ಈ ಸಮಸ್ಯೆ ಪರಿಹರಿಸಲು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ)ಯು ತಾಜ್ ಮಹಲ್ ವೀಕ್ಷಣೆಗೆ ಆನ್‌ಲೈನ್ ಬುಕಿಂಗ್ ಆರಂಭಿಸಿದೆ. ಡಿ. 27ರಿಂದಲೇ ಪ್ರವಾಸಿಗರು ಆನ್‌ಲೈನ್‌ನಲ್ಲಿ ಪ್ರೇಮಸೌಧ ನೋಡಲು ಟಿಕೆಟ್ ಖರೀದಿಸಬಹುದು. [ವಕ್ಫ್ ವಶಕ್ಕೆ ತಾಜ್ ಮಹಲ್ ಸರಿಯೇ?]

taj

ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಮಹೇಶ ಶರ್ಮಾ ಶುಕ್ರವಾರ ಆನ್‌ಲೈನ್ ಟಿಕೆಟ್ ಬುಕಿಂಗ್ ಉದ್ಘಾಟಿಸಿದರು. "ವಾಜಪೇಯಿ ಜನ್ಮದಿನವಾದ ಡಿಸೆಂಬರ್ 25ರಂದು ಉತ್ತಮ ಆಡಳಿತ ದಿನ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಮಿತ್ತ ತಾಜ್ ಮಹಲ್ ವೀಕ್ಷಣೆಗೆ ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭಿಸಲಾಗಿದೆ" ಎಂದು ತಿಳಿಸಿದರು.

"ಪ್ರಸ್ತುತ ವೆಬ್‌ಸೈಟ್‌ನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆ ಮಾತ್ರ ಲಭ್ಯವಿದೆ. ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ರಷ್ಯನ್, ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳನ್ನೂ ಶೀಘ್ರ ಅಳವಡಿಸಲಾಗುವುದು. ಪ್ರವಾಸಿಗರು 90 ದಿನಗಳ ಮೊದಲೇ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದು" ಎಂದು ತಿಳಿಸಿದರು.

ವೆಬ್‌ಸೈಟ್ ಆರಂಭ : ಐಸಿಆರ್‌ಟಿಸಿ ಮತ್ತು ಎಎಸ್ಐ ವತಿಯಿಂದ ಜಾತ್ ಮಹಲ್ ಮತ್ತು ಹುಮಾಯೂನ್‌ನ ಟಾಂಬ್‌ಗಾಗಿ ವೆಬ್‌ಸೈಟ್ ಆರಂಭಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಈ ವೆಬ್‌ಸೈಟ್‌ನಲ್ಲಿ (ವೆಬ್ ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ) ಟಿಕೆಟ್ ಖರೀದಿಸಬಹುದು.

ಈ ಕುರಿತು ಆಗ್ರಾ ನಗರದ ಬ್ರಜ್ ಮಂಡಲ್ ಹೆರಿಟೇಜ್ ಕನ್ಸರ್ವೇಶನ್ ಸೊಸೈಟಿ ಅಧ್ಯಕ್ಷ ಸುರೇಂದ್ರ ಶರ್ಮಾ ಪ್ರತಿಕ್ರಿಯಿಸಿ, "ಪ್ರವಾಸಿಗರು ಟಿಕೆಟ್ ಪಡೆಯಲು ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುತ್ತಿದ್ದರು. ಆದ್ದರಿಂದ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಪ್ರತಿದಿನ ತಾಜ್ ಮಹಲ್ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆಯನ್ನೂ ಸೀಮಿತಗೊಳಿಸಬಹುದು. ಆಗ ಜನಜಂಗುಳಿ ಉಂಟಾಗುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ : ಪ್ರಸ್ತುತ ತಾಜ್‌ಮಹಲ್ ವೀಕ್ಷಿಸಲು ಭಾರತೀಯ ಪ್ರವಾಸಿಗರು ತಲಾ 20 ರೂ. ಹಾಗೂ ವಿದೇಶಿ ಪ್ರವಾಸಿಗರು ತಲಾ 750 ರೂ. ಶುಲ್ಕ ನೀಡಬೇಕು. ಭಾರತೀಯರಿಗೆ ತಲಾ 50 ರೂ. ಹಾಗೂ ವಿದೇಶೀಯರಿಗೆ ತಲಾ 1,000 ರೂ.ಗಳಿಗೆ ಶುಲ್ಕ ಏರಿಸಬೇಕೆಂದು ಆಗ್ರಾ ಅಭಿವೃದ್ಧಿ ಪ್ರಾಧಿಕಾರವು ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. [ತಾಜ್ ಮಹಲ್ ಪ್ರೇಮಸೌಧವಲ್ಲ, ಪುರಾತನ ದೇಗುಲ]

ಆದರೆ, ಈ ಪ್ರಸ್ತಾವನೆಗೆ ಆಗ್ರಾ ನಗರದಲ್ಲಿರುವ ಪ್ರವಾಸಿ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಶುಲ್ಕವನ್ನೂ ಏರಿಸಿದರೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಕಡಿಮೆಯಾಗಬಹುದು ಎಂದು ಪ್ರವಾಸಿ ಸಂಸ್ಥೆಗಳ ಮುಖಂಡರು ಆತಂಕ ವ್ಯಕ್ತಡಿಸಿದ್ದಾರೆ.

ವರ್ಷಕ್ಕೆ 60 ಲಕ್ಷಕ್ಕಿಂತ ಹೆಚ್ಚು ಪ್ರವಾಸಿಗರು : 17ನೇ ಶತಮಾನದ ಈ ಪ್ರೇಮ ಸೌಧಕ್ಕೆ ಪ್ರತಿ ವರ್ಷ ಸುಮಾರು 60 ಲಕ್ಷಕ್ಕಿಂತಲೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಾಜ್ ಮಹಲ್ ವೀಕ್ಷಣೆ ಉಚಿತವಾಗಿದೆ. ಆದರೆ, ಪ್ರತಿ ಶುಕ್ರವಾರ ಇಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. [ದುಬೈನಲ್ಲಿ ಬೃಹತ್ ತಾಜ್ ಮಹಲ್]

English summary
Archaeological Survey of India (ASI) officials told that online booking of tickets to the Taj Mahal will begin from December 27. Website for the Taj Mahal and Humayun's Tomb has been launched. Tourists can book tickets at online (ask.irctc.co) now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X