ಭಾರತದ ಯುದ್ಧ ಟ್ಯಾಂಕ್ ಟಿ90ಗೆ ಹೊಸ ಕ್ಷಿಪಣಿ ವ್ಯವಸ್ಥೆ
ನವದೆಹಲಿ, ಆಗಸ್ಟ್ 21: ಭಾರತೀಯ ಸೇನೆ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆಕ್ರಮಣ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಪ್ರಧಾನ ಯುದ್ಧ ಟ್ಯಾಂಕ್ ಆಗಿರುವ ಟಿ-90ಗಳಿಗೆ ಮೂರನೇ ತಲೆಮಾರಿನ ಕ್ಷಿಪಣಿ ವ್ಯವಸ್ಥೆ ಜೋಡಿಸಲು ನಿರ್ಧರಿಸಲಾಗಿದೆ.
ಟಿ-90 ಟ್ಯಾಂಕ್ ಗಳಲ್ಲಿ ಲೇಸರ್ ನಿರ್ದೇಶಿತ INVAR ಕ್ಷಿಪಣಿ ವ್ಯವಸ್ಥೆ ಹೊಂದಿದೆ. ಇದರ ಬದಲಿಗೆ ಮೂರನೇ ತಲೆಮಾರಿನ ಸುಧಾರಿತ ಗನ್ ನಿರ್ದೇಶಿತ ಕ್ಷಿಪಣಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ರಷ್ಯಾ ಮೂಲದ ಟಿ-90 ಟ್ಯಾಂಕ್ ಗಳು ಭಾರತೀಯ ಸೇನೆಯ ಆಕ್ರಮಣ ರೂಪಿಸುವುದರಲ್ಲಿ ಪ್ರಮುಖವಾಗಿದೆ. ಈ ಮೂರನೇ ತಲೆಮಾರಿನ ಕ್ಷಿಪಣಿ 800 ರಿಂದ 850 ಎಂಎಂ ಆಳ(DoP) ಹಾಗೂ ದೂರವನ್ನು ಕ್ರಮಿಸುತ್ತದೆ. ರಾತ್ರಿ ಹಾಗೂ ಹಗಲಿನಲ್ಲಿ 8 ಕಿ.ಮೀ. ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಟಿ-90 ಟ್ಯಾಂಕ್ ಗಳಿಗೆ 125 ಎಂಎಂ ಗನ್ ಬ್ಯಾರಲ್ ಅಳವಡಿಕೆಯಿಂದ ಈ ಕ್ಷಿಪಣಿ ಹಾರಿ ಗುರಿ ತಲುಪಲಿದೆ. ಸ್ಥಿರ ಹಾಗೂ ಚರ ಗುರಿಯನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಟ್ಯಾಂಕರ್ ಹೊಂದಿದೆ. 1200 ರಿಂದ 1500 ಎಚ್ ಪಿ ಸಾಮರ್ಥ್ಯದ ಇಂಜಿನ್ ಹೊಂದಿದ್ದು, ಹೆಚ್ಚಿನ ಒತ್ತಡ ತಡೆದುಕೊಳ್ಳಬಹುದಾಗಿದೆ.(ಒನ್ಇಂಡಿಯಾ ಸುದ್ದಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications