'ನುಹ್ ರ್‍ಯಾಲಿಯಲ್ಲಿ ಕತ್ತಿಗಳನ್ನು ತಂದಿದ್ದು ಪೂಜೆಗಾಗಿ ತರಲಾಗಿತ್ತು': ಗೋರಕ್ಷಕ ಬಿಟ್ಟು ಬಜರಂಗಿ
ಹರಿಯಾಣದ ನುಹ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ವಾರ್ಷಿಕ ಬ್ರಜ್ ಮಂಡಲ್ ಯಾತ್ರೆಯಲ್ಲಿ ವಿಭಜಕ ಭೇದಿಗಳಿಗೆ ಹೆಸರುವಾಸಿಯಾದ ಸ್ವಯಂ ಘೋಷಿತ ಗೋರಕ್ಷಕ ಬಿಟ್ಟು ಬಜರಂಗಿ ಭಾಗವಹಿಸಿದ್ದರು. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಬಿಟ್ಟು ಬಜರಂಗಿ ಅವರು ಸೋಮವಾರದಂದು ಜಿಲ್ಲೆಯಲ್ಲಿ ಹಿಂಸಾಚಾರ ಹೇಗೆ ಉಂಟಾಯಿತು ಎನ್ನುವುದರ ಬಗ್ಗೆ ಹೇಳಿದ್ದಾರೆ.
''ಪ್ರತಿ ವರ್ಷದಂತೆ ಈ ವರ್ಷವೂ ಶೋಭಾ ಯಾತ್ರೆ ಆಯೋಜಿಸಿದ್ದೇವೆ. ಯಾತ್ರೆಯು ನುಹ್ ನ ನಲ್ಹಾರ್ ಮಹಾದೇವ ಮಂದಿರಕ್ಕೆ ಹೋಗಿ ಅಲ್ಲಿಂದ ಬೇರೆ ಪ್ರದೇಶಗಳಿಗೆ ಹೋಗಲು ನಿರ್ಧರಿಸಲಾಗಿತ್ತು. ಜಿಲ್ಲೆಯಾದ್ಯಂತ ಹಲವಾರು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ನಮ್ಮೊಂದಿಗೆ ಸೇರಿಕೊಂಡರು. ಮಂದಿರದಲ್ಲಿ ಪೂಜೆ ಸಲ್ಲಿಸಿ, ಕೀರ್ತನೆ ಆಯೋಜಿಸಿದೆವು...ಅಲ್ಲಿಂದ ಒಂದೇ ಒಂದು ದಾರಿ ಇತ್ತು. ನಾವು ಸುಮಾರು 500 ಮೀಟರ್‌ಗಳಷ್ಟು ಪ್ರಯಾಣಿಸಿದ್ದೇವೆ. ನಮ್ಮ ಕಾರುಗಳು ಹೊರಡಲು ಪ್ರಾರಂಭಿಸಿದಾಗ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ನಾವು ನೋಡಿದ್ದೇವೆ" ಎಂದು ಬಿಟ್ಟು ಬಜರಂಗಿ ಇಂಡಿಯಾ ಟುಡೇಗೆ ತಿಳಿಸಿದರು.

"ರಸ್ತೆಯ ಬದಿಯಲ್ಲಿ ಒಂದು ಸಣ್ಣ ಮಸೀದಿ ಇರುವುದನ್ನು ನಾವು ನೋಡಿದ್ದೇವೆ ಮತ್ತು 200-250 ಜನರು ಅಲ್ಲಿದ್ದರು. ಅವರು ಶಸ್ತ್ರಸಜ್ಜಿತರಾಗಿದ್ದರು. ಅವರು ನಮ್ಮ ಮೇಲೆ ಗುಂಡು ಹಾರಿಸಿದರು" ಎಂದು ಅವರು ಹೇಳಿದರು.
ಮೇ 4 ರಂದು ಮಣಿಪುರದ ಘಟನೆಯನ್ನು ಉಲ್ಲೇಖಿಸಿ, ಇಬ್ಬರು ಮಹಿಳೆಯರನ್ನು ಜನಸಮೂಹ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದನ್ನು ನೆನೆದು, ಬಿಟ್ಟು ಬಜರಂಗಿ ಅವರು ಯಾತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆದರುತ್ತಿದ್ದರು ಎಂದು ಹೇಳಿದ್ದಾರೆ.
"ಇನ್ನೊಂದು ಕಡೆ ಗುಂಡು ಹಾರಿಸಿದಾಗ, ನಾವು ಯು-ಟರ್ನ್ ತೆಗೆದುಕೊಂಡು ದೇವಸ್ಥಾನಕ್ಕೆ ಹಿಂತಿರುಗಲು ನಿರ್ಧರಿಸಿದೆವು. ಇದು ನಮಗೆ ಸುರಕ್ಷಿತ ಎಂದು ನಾವು ಭಾವಿಸಿದ್ದೇವು. ನನಗೆ ನನ್ನ ಬಗ್ಗೆ ಭಯವಿರಲಿಲ್ಲ, ಹೆಂಗಸರು ಮತ್ತು ಮಕ್ಕಳಿಗಾಗಿ ನಾನು ಹೆದರುತ್ತಿದ್ದೆ. ಮಣಿಪುರದಂತಹ ಯಾವುದೇ ಅಹಿತಕರ ಘಟನೆ ಇಲ್ಲಿ ನಡೆಯುವುದನ್ನು ನಾವು ಬಯಸಲಿಲ್ಲ. ನಾವು ನಮ್ಮ ತಾಯಂದಿರಿಗೆ ಹೆದರುತ್ತಿದ್ದೆವು," ಎಂದು ಬಿಟ್ಟು ಬಜರಂಗಿ ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಯಾತ್ರಿಯ ವೇಳೆ ಆಯುಧಗಳನ್ನು ಹೊತ್ತೊಯ್ಯುತ್ತಿರುವುದು ಏಕೆ ಎಂದು ಕೇಳಿದಾಗ, ಬಿಟ್ಟು ಬಜರಂಗಿ ಅವರು, "ಕೆಲವರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು, ಆದರೆ ಅವರೆಲ್ಲರೂ ಪರವಾನಗಿ ಪಡೆದಿದ್ದರು ಮತ್ತು ನಾವು ಹೊಂದಿರುವ ಕತ್ತಿಗಳನ್ನು ಪೂಜೆಗೆ ಬಳಸಲಾಗುತ್ತದೆ. ಮದುವೆಗಳು, ಆಚರಣೆಗಳ ವೇಳೆ ನಾವು ಅದನ್ನು ಪೂಜೆ ಮಾಡುತ್ತೇವೆ, ಅವುಗಳನ್ನು ಕೊಲೆಗಳಿಗೆ ಬಳಸಲಾಗುವುದಿಲ್ಲ'' ಎಂದು ಹೇಳಿದರು.
ತನ್ನ ವೈರಲ್ ವಿಡಿಯೋ ಕುರಿತು ಪ್ರಶ್ನಿಸಿದಾಗ, 'ನನಗೆ ಬೆದರಿಕೆ ಹಾಕಿದವರಿಗೆ ನಾನು ಉತ್ತರ ನೀಡಿದ್ದೆ' ಎಂದು ಬಿಟ್ಟು ಬಜರಂಗಿ ಹೇಳಿದ್ದಾರೆ.
ಬಿಟ್ಟು ಬಜರಂಗಿ ಅವರು ಕೇಸರಿ ಉಡುಪಿನಲ್ಲಿ ನಡೆಯುವುದನ್ನು ಚಿತ್ರಿಸುವ ಸ್ಲೋ-ಮೋಷನ್ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಜೊತೆಗೆ "ಗೋಲಿ ಪೆ ಗೋಲಿ ಚಲೇಂಗಿ, ಬಾಪ್ ಟು ಬಾಪ್ ರಹೇಗಾ" (ಗುಂಡಿಗೆ ಗುಂಡುಗಳನ್ನು ನೀಡಲಾಗುತ್ತದೆ, ತಂದೆ ಯಾವಾಗಲೂ ತಂದೆ ಆಗೇ ಉಳಿಯುತ್ತಾರೆ) ಸಾಹಿತ್ಯವನ್ನು ಒಳಗೊಂಡ ಧ್ವನಿಪಥದೊಂದಿಗೆ ನಡೆಯಲಾಗಿತ್ತು. ಈ ವೇಳೆ ದುಷ್ಕರ್ಮಿಗಳ ವಿರುದ್ಧ "ಬುಲ್ಡೋಜರ್ ಕ್ರಮ" ಕ್ಕೆ ಅವರು ಕರೆ ನೀಡಿದರು. ಯೋಗಿ ಆದಿತ್ಯನಾಥ್ ಸರ್ಕಾರದಂತೆ ಇಲ್ಲಿಯೂ ದುಷ್ಕರ್ಮಿಗಳ ವಿರುದ್ಧ ಬುಲ್ಡೋಜರ್ ಕ್ರಮ ಕೈಗೊಳ್ಳಬೇಕು, ಅವರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕು ಎಂದು ಅವರು ಹೇಳಿದ್ದಾರೆ.
ಬಿಟ್ಟು ಬಜರಂಗಿ, "ಅವರು ನಮ್ಮ ಅಧಿಕಾರಿಗಳನ್ನು ಕೊಂದರು, ಅವರು ರಾಮಭಕ್ತರನ್ನು ಕೊಂದರು. ಅವರ ತಪ್ಪೇನು? ನಾವು ಈ ದೇಶದಲ್ಲಿ ಭಗವಾನ್ ರಾಮನ ಹೆಸರನ್ನು ತೆಗೆದುಕೊಳ್ಳಬಾರದಾ? ನಾವು ನಮ್ಮ ಮಹಿಳೆಯರು ಮತ್ತು ಮಕ್ಕಳೊಂದಿಗೆ ಶಾಂತಿಯುತ ಯಾತ್ರೆಗೆ ಹೋಗಿದ್ದೆವೆ" ಎಂದು ಹೇಳಿದರು.
NUH ಘರ್ಷಣೆಗಳು
ಹರ್ಯಾಣದ ನುಹ್ ಜಿಲ್ಲೆಯಲ್ಲಿ ಸೋಮವಾರ ಗುಂಪೊಂದು ವಿಎಚ್‌ಪಿ ಮೆರವಣಿಗೆಯನ್ನು ತಡೆಯಲು ಯತ್ನಿಸಿದ ನಂತರ ಕೋಮುಗಲಭೆ ನಡೆದಿದೆ. ಮಂಗಳವಾರ ನೆರೆಯ ಗುರುಗ್ರಾಮ್‌ನಲ್ಲಿ ಹಿಂಸಾಚಾರ ಹರಡುವುದರೊಂದಿಗೆ ಕಲ್ಲು ತೂರಾಟ ನಡೆದಿದೆ. ಜೊತೆಗೆ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಗುಂಪುಗಳು ಗುರುಗ್ರಾಮ್‌ನಲ್ಲಿ ಮುಸ್ಲಿಂ ಧರ್ಮಗುರುವನ್ನು ಕೊಂದು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.
ಕೋಮುಗಲಭೆಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಘಟನೆಗೆ ಸಂಬಂಧಿಸಿದಂತೆ 116 ಜನರನ್ನು ಬಂಧಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.












Click it and Unblock the Notifications