• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮಸೇತು ಬಗ್ಗೆ ಹೇಳುತ್ತಾ ನೆಹರೂ-ಎಡ್ವಿನಾ ಸಂಬಂಧದ ಬಗ್ಗೆ ಸ್ವಾಮಿ ಟ್ವೀಟ್

By Anil Achar
|

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಲು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸೋಮವಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದೇ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಬ್ರಿಟಿಷರ ಕೊನೆ ವೈಸ್ ರಾಯ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾರ ಸಂಬಂಧದ ಬಗ್ಗೆಯೂ ಪ್ರಸ್ತಾವ ಮಾಡಿದ್ದಾರೆ.

ಸೇತುಸಮುದ್ರಂ ಯೋಜನೆ ಬಗ್ಗೆ ಸರಕಾರದಿಂದ ಸುಪ್ರೀಂ ಕೋರ್ಟ್ ಗೆ ಹೇಳಿಸುವುದಕ್ಕೆ ನನಗೆ ಹಾಗೂ ಗಡ್ಕರಿಗೆ ನಾಲ್ಕು ವರ್ಷ ಸಮಯ ಹಿಡಿಸಿದೆ. ಇದೀಗ ನಾಲ್ಕೂ ಮುಕ್ಕಾಲು ವರ್ಷದ ನಂತರ ರಾಮಸೇತು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಅಲ್ಲ. ಎಡ್ವಿನಾ ಜತೆ ನೆಹರೂ ಅನೈತಿಕ ಸಂಬಂಧ ಹೊಂದಿದ್ದ ಶಿಮ್ಲಾದಲ್ಲಿನ ಕಟ್ಟಡವನ್ನು ಘೋಷಣೆ ಪಾರಂಪರಿಕ ಸ್ಥಳ ಮಾಡಲಾಗಿದೆ. ರಾಮಸೇತು ಮಾಡಬಾರದಾ? ಎಂದು ಟ್ವೀಟ್ ಮಾಡಿದ್ದಾರೆ.

ರಾಮಸೇತು ಮಾನವ ನಿರ್ಮಿತ : ಅಮೆರಿಕದ ವಿಜ್ಞಾನ ಚಾನೆಲ್ ಪ್ರೋಮೋ

ಕಾಂಗ್ರೆಸ್ ನ ಟೀಕಾಕಾರರು ನೆಹರೂ ಹಾಗೂ ಎಡ್ವಿನಾ ಸಂಬಂಧದ ಬಗ್ಗೆ ಆಗಾಗ ಪ್ರಸ್ತಾವ ಮಾಡುತ್ತಾರೆ. ಇನ್ನು ಸುಬ್ರಮಣಿಯನ್ ಸ್ವಾಮಿ ಶಿಮ್ಲಾದ ಯಾವ ಕಟ್ಟಡದಲ್ಲಿ ನೆಹರೂ ಅವರು ಎಡ್ವಿನ್ ರನ್ನು ಭೇಟಿ ಆಗುತ್ತಿದ್ದರು ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಆದರೆ ಭಾರತ-ಪಾಕಿಸ್ತಾನ ವಿಭಜನೆಯ ಅಂತಿಮ ಸುತ್ತಿನ ಮಾತುಕತೆ ನಡೆದ ವೈಸ್ ರೆಗಲ್ ಲಾಡ್ಜ್, ಈಗ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸ್ಟಡೀಸ್ ಆಗಿದ್ದು, ಅದು ಪಾರಂಪರಿಕ ಸ್ಥಳ ಆಗಿದೆ.

ರಾಮಸೇತು ಎಂಬುದು ಸುಣ್ಣದ ಕಲ್ಲಿನ ಸರಣಿಯು ತಮಿಳುನಾಡಿನ ರಾಮೇಶ್ವರಂ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪದ ಮಧ್ಯೆ ಇದೆ. ಇದು ಹಿಂದೂಗಳ ನಂಬಿಕೆಯಾದ ರಾಮನ ಸುತ್ತ ಇದೆ. ಇದನ್ನು ರಾಮನ ಸೇನೆ ನಿರ್ಮಿಸಿತು ಎಂಬ ನಂಬಿಕೆ ಇದೆ. ಈ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಥಳ ಎಂದು ಘೋಷಿಸುವಂತೆ ಸ್ವಾಮಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಹಾಗೊಂದು ವೇಳೆ ಘೋಷಣೆಯಾದರೆ ಈ ಸ್ಥಳದ ಸುತ್ತಮುತ್ತ ಯಾವುದೇ ಅಭಿವೃದ್ಧಿ ಹಾಗೂ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ‌ರಾಮಸೇತುವಿಗೆ ತೊಂದರೆ ಆಗುವ ಸೇತುಸಮುದ್ರಮ್ ಶಿಪ್ಪಿಂಗ್ ಚಾನಲ್ ಯೋಜನೆ ಬದಲಾಯಿಸುತ್ತೇವೆ ಎಂದು ಕಳೆದ ಬಾರಿ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು. ಕಳೆದ ವರ್ಷ ಮಾರ್ಚ್ ನಲ್ಲೆ ಮೋದಿ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿ, ಆ ಯೋಜನೆಯಿಂದ ರಾಮ್ ಸೇತುವಿಗೆ ಏನೂ ತೊಂದರೆ ಇಲ್ಲ ಎಂದಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Monday, Swamy tweeted, “It took me&Gadkari 4 years to make Govt. tell SC that Sethusamundram project has been scrapped. Now after 4 3/4 years Ram Setu is not a National Heritage Monument. The building in Shimla where Nehru had his illicit affair with Edwina has been declared so. Not Ram Setu?!!”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more