'ಕೈಲಾಸ' ದೇಶಕ್ಕೆ ತೆರಳುವವರಿಗೆ ವಿಶೇಷ ಸೌಲಭ್ಯದ ಕೊಡುಗೆ ಘೋಷಿಸಿದ ಸ್ವಾಮಿ ನಿತ್ಯಾನಂದ, ಏನದು? ತಿಳಿಯಿರಿ
ಭಾರತದಿಂದ ನಾಪತ್ತೆಯಾದ ಹೊಸ ದೇಶ 'ಕೈಲಾಸ' ಸ್ಥಾಪಿಸಿರುವ ಸ್ವಾಮಿ ನಿತ್ಯಾನಂದ, ಇದೀಗ ಆದೇಶದ ಇ-ಪೌರತ್ವ ಮತ್ತು ಇ-ವೀಸಾಗೆ ನಿತ್ಯಾನಂದ ಅರ್ಜಿ ಆಹ್ವಾನಿಸಿದ್ದಾನೆ.
ನವದೆಹಲಿ, ಮಾರ್ಚ್ 05: ದೇಶದಲ್ಲಿ ಲೈಂಗಿಕ ದೌರ್ಜನ್ಯ ಸೇರಿದಂತೆ ಹತ್ತಾರು ಆರೋಪ ಎದುರಿಸುತ್ತಿದ್ದ ಬೆಂಗಳೂರಿನ ಬಿಡದಿಯ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಪರಾರಿಯಾಗಿದ್ದ. ಬಳಿಕ 'ಕೈಲಾಸ ದೇಶ' ಸ್ಥಾಪಿಸಿದ್ದ. ಇದೀಗ ಆದೇಶದ ಇ-ಪೌರತ್ವ ಮತ್ತು ಇ-ವೀಸಾಗೆ ನಿತ್ಯಾನಂದ ಅರ್ಜಿ ಆಹ್ವಾನಿಸಿದ್ದಾನೆ.
ಈ ಕುರಿತು ಟ್ವೀಟ್ ಮೂಲಕ ತಿಳಿಸಿರುವ ನಿತ್ಯಾನಂದ ತನ್ನ ಕೈಲಾಸ ದೇಶಕ್ಕೆ ಆಗಮಿಸುವವರಿಗೆ ಪೌರತ್ವ, ವೀಸಾ ನೀಡುವುದರ ಜೊತೆಗೆ ಒಂದಷ್ಟು ವಿಶೇಷ ಸವಲತ್ತು ನೀಡುವುದಾಗಿ ಉಲ್ಲೇಖಿಸಿದ್ದಾನೆ. ಭಾರತದಿಂದ ನಾಫತ್ತೆಯಾಗಿ ನಿಗೂಢ ಸ್ಥಳದಲ್ಲಿದ್ದ ಎನ್ನುವಷ್ಟರಲ್ಲಿ ಈಕ್ವೆಡಾರ್ ಬಳಿ ಕೈಲಾಸ್ ದೇಶ ಸ್ಥಾಪಿಸಿಕೊಂಡಿದ್ದಾನೆ. ಅಲ್ಲದೇ ಸ್ವಂತ ವೆಬ್‌ಸೈಟ್ ಹೊಂದಿರುವ ಆತ (kailasa.org/e-citizen) ಅದರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾನೆ ಎಂದು ವರದಿ ಯಾಗಿದೆ.

ನಿತ್ಯಾನಂದ ತಿಳಿಸಿರುವ ಸವಲತ್ತುಗಳು ಯಾವವು?
'ಕೈಲಾಸ ದೇಶ'ದ ಇ-ಪೌರತ್ವ ಪಡೆದವರಿಗೆ ನಿತ್ಯಾನಂದ ವಿಶೇಷ ಸೌಲಭ್ಯ ಕಲ್ಪಿಸುವುದಾಗಿ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾನೆ. ಅದರ ವಿವರಗಳು ಹೀಗಿವೆ. ಕೈಲಾಸಕ್ಕೆ ಹೋಗಬಯಸುವ ಹೊಸ ಪ್ರಜೆಗಳಿಗೆ ವಿಶೇಷ ಹೋಮ ಮತ್ತು ಅಧ್ಯಾತ್ಮಿಕ ಸೇವೆ, ಸಂಸ್ಕೃತ ಮಂತ್ರಗಳ ಕಲಿಕಾ ಸೌಲಭ್ಯ ನಿತ್ಯಾನಂದನ ವಿಶೇಷ ದರ್ಶನ, ಆಶೀರ್ವಾದ, ಆಧ್ಯಾತ್ಮಿಕ ಮನೋಭಾವ ಬೆಳೆಸಿಕೊಳ್ಳಲು ಪೂರಕ ವಾತಾವರಣ ಸೇರಿದಂತೆ ಹಲವು ಸವಲತ್ತು ಕಲ್ಪಿಸುವುದಾಗಿ ತಿಳಿಸಿದ್ದಾನೆ.
ಕಳೆದ ತಿಂಗಳು ವಿಶ್ವಸಂಸ್ಥೆಯಿಂದ ನಡೆದ ಸಭೆಯಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಸಿಡಿದ್ದರು. ಪ್ರತಿನಿಧಿಗಳಲ್ಲಿ ಒಬ್ಬರಾದ ವಿಜಯಪ್ರಿಯಾ ನಿತ್ಯಾನಂದಳ ಬಗ್ಗೆ, ಆಕೆಯ ಹಿನ್ನೆಲೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಕೈಲಾಸ ದೇಶದ ಸದಸ್ಯರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ ಎಂದು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದರು.

ವಿಶ್ವಸಂಸ್ಥೆಯ ಸಭೆಯಲ್ಲಿ ವಿಜಯಪ್ರಿಯಾ ನಿತ್ಯಾನಂದ, ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ' ರಕ್ಷಣೆ ನೀಡಬೇಕು ಎಂದು ಈ ಸಭೆಯಲ್ಲಿ ಕೋರಿದ್ದರು. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಾದ ನಿತ್ಯಾನಂದ ಅವರು ಹಿಂದೂ ಧರ್ಮದ ಸ್ಥಳೀಯ ಸಂಪ್ರದಾಯಗಳು ಮತ್ತು ಜೀವನಶೈಲಿಯನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ತೀವ್ರವಾದ ಕಿರುಕುಳ ಅನುಭವಿಸಿದರು ಎಂದರು. ನಿತ್ಯಾನಂದರನ್ನು ಅವರ ಸ್ವ ದೇಶದಿಂದ ಗಡಿಪಾರು ಮಾಡಿಲಾಯಿತು ಎಂದು ಆಕೆ ಹೇಳಿದಳು.












Click it and Unblock the Notifications