125 ಕೋಟಿ ಜನರಿಂದ ಮಾತ್ರ ಸ್ವಚ್ಛ ಭಾರತ ಸಾಧ್ಯ : ನರೇಂದ್ರ ಮೋದಿ

ನವದೆಹಲಿ, ಅಕ್ಟೋಬರ್ 2: "1000 ಮಹಾತ್ಮಾ ಗಾಂಧಿಗಳು, 1 ಲಕ್ಷ ನರೇಂದ್ರ ಮೋದಿಗಳು, ಎಲ್ಲಾ ಮುಖ್ಯಮಂತ್ರಿಗಳು, ಸರಕಾರಗಳು ಒಂದಾದರೂ ಭಾರತ ಸ್ವಚ್ಛವಾಗಲು ಸಾಧ್ಯವಿಲ್ಲ. ಆದರೆ 125 ಕೋಟಿ ಜನರಿಂದ ಸ್ವಚ್ಛ ಭಾರತ ಸಾಧ್ಯವಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದ 3ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಭಾರತ ಸಮಸ್ಯೆಗಳನ್ನು ಎದುರಿಸುತ್ತಿದೆ ನಿಜ. ಆದರೆ ನಾವು ಸಮಸ್ಯೆಗಳಿಂದ ದೂರ ಓಡಿ ಹೋಗಿಲ್ಲ. ನಾವು ಸಮಸ್ಯೆಗಳನ್ನು ಎದುರಿಸಿ ಅವುಗಳನ್ನು ಹಿಮ್ಮೆಟ್ಟಿಸುತ್ತೇವೆ," ಎಂದು ಪ್ರಧಾನಿ ವಿಶ್ವಾಸ ಮಾತುಗಳನ್ನಾಡಿದರು.

Swachh Bharat Mission is people's movement: PM Modi

"ಸ್ವಚ್ಛ ಭಾರತ ಅಭಿಯಾನದ ನಂತರ ಭಾರತದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದೆ. ಸ್ವಚ್ಛತೆಗೆ ಸಂಬಂಧಿಸಿದ ಶ್ರೇಯಾಂಕಗಳಲ್ಲಿ, ಸ್ವಚ್ಛತೆಯ ಕಾರ್ಯಗಳಲ್ಲಿ ಸಂಸ್ಥೆಗಳು ತೊಡಗಿಸಿಕೊಂಡಿರುವುದರಲ್ಲಿ ನಾವಿದನ್ನು ಕಾಣಬಹುದು," ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಇದೇ ವೇಳೆ 'ಸ್ವಚ್ಛತಾ ಹೇ ಸೇವಾ' ಅಭಿಯಾನದಲ್ಲಿ ಪಾಲ್ಗೊಂಡವರು ಹಾಗೂ ಬೆಂಬಲಿಸಿದವರನ್ನು ಪ್ರಧಾನಿ ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+