Suzlon Share Price: ಇಂದು ಸುಜ್ಲಾನ್ ಎನರ್ಜಿ ಷೇರುಗಳ ಶೇ.14ರಷ್ಟು ಜಿಗಿತ, ಷೇರುಪೇಟೆ ಅಪ್ಡೇಟ್ಸ್
ಬೆಂಗಳೂರು, ಮೇ 30: ಭಾರತೀಯ ಮೂಲದ ನವೀಕರಿಸಬಹುದಾದ ಇಂಧನ ಹಾಗೂ ಪವನ ವಿದ್ಯುತ್ ಉತ್ಪಾದಿಸುವ ಮಲ್ಟಿ ನ್ಯಾಷನಲ್ ಕಂಪನಿಯಾಗಿರುವ 'ಸುಜ್ಲಾನ್ ಎನರ್ಜಿ' (Suzlon Energy shares) ಷೇರು ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ. 'ಸುಜ್ಲಾನ್ ಎನರ್ಜಿ' ಷೇರುಗಳು ಕಳೆದ ಕೆಲವು ದಿನಗಳಿಂದ ಪಾಸಿಟಿವ್ ಟ್ರೆಂಡ್‌ನಲ್ಲಿವೆ. ಇಂದಿನ ಆರಂಭದ ವಹಿವಾಟಿನಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡ ಕಂಪನಿಯು ಪ್ರಸಕ್ತ ವರ್ಷದ (FY25) ನಿವ್ವಳ ಲಾಭದಲ್ಲಿ ಶೇಕಡಾ 365 ರಷ್ಟು ಪ್ರಗತಿ ಸಾಧಿಸಿದೆ
ಇದೇ ವರ್ಷ ಈ ಹಿಂದೆ ಕೊನೆಗೊಂಡ ತ್ರೈಮಾಸಿಕದಲ್ಲಿ (ಮಾರ್ಚ್ 2025) 'ಸುಜ್ಲಾನ್ ಎನರ್ಜಿ' ಕಂಪನಿಯು ₹1,182.22 ಕೋಟಿಗಳ ಏಕೀಕೃತ ಲಾಭವನ್ನು ಕಂಡಿದೆ. ಇದು 2024ರ ರಲ್ಲಿ ಮಾರ್ಚ್ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಗಳಿಸಿದ್ದ ಲಾಭಕ್ಕಿಂದ (₹254.12 ಕೋಟಿ) ಅಧಿಕವಾಗಿದೆ. ಈ ಮೂಲಕ ಷೇರು ಖರೀದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಏಕೆಂದರೆ ವಿದೇಶಿ ಯುದ್ಧ, ಅಮೆರಿಕ ಅಧ್ಯಕ್ಷರ ಸುಂಕ ನೀತಿ ಸೇರಿ ಕೆಲವು ಕಾರಣಗಳಿಂದಾಗಿ ಷೇರು ಮಾರುಕಟ್ಟೆ ನೆಗಟಿವ್ ಟ್ರೆಂಡ್‌ನಲ್ಲಿತ್ತು. ಇದೀಗ ಷೇರುಗಳು ಮತ್ತೆ ಪಾಸಿಟಿವ್ ನತ್ತ ಮುಖ ಮಾಡಿದೆ.

ಕಂಪನಿ ಆದಾಯ ಶೇ. 73 ಜಿಗಿತ
'ಸುಜ್ಲಾನ್ ಎನರ್ಜಿ' ಆದಾಯವು ವರ್ಷಕ್ಕೆ ಶೇಕಡಾ 73 ರಷ್ಟು ಹೆಚ್ಚಾಗಿದೆ. ಅಂದರೆ ಆದಾಯ ಬರೋಬ್ಬರಿ ₹3,773.54 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ಇದೇ ಅವಧಿಯಲ್ಲಿ 2024ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಕೇವಲ 2,179.20 ಕೋಟಿ ರೂಪಾಯಿಯಷ್ಟಿತ್ತು ಎಂದು 'ಬಿಸಿನೆಸ್ ಲೈನ್' ವರದಿ ಆಗಿದೆ.
ಇಂದು ಶುಕ್ರವಾರ (ಮೇ 30)ರಂದು ಸಹ 'ಸುಜ್ಲಾನ್ ಎನರ್ಜಿ' ಷೇರುಗಳು ಏರುಗತಿಯಲ್ಲಿವೆ. ಬೆಳಗ್ಗೆ 9.30ಕ್ಕೆ ಷೇರು ಫೇಟೆ ಆರಂಭವಾಗುತ್ತಿದ್ದಂತೆ ಪಾಸಿಟಿವ್ ಟ್ರೆಂಡ್ ದಾಖಲಿಸಿತು. ನಂತರ 9.56 ರ ಹೊತ್ತಿಗೆ ಷೇರುಗಳು ಬಿಎಸ್‌ಇಯಲ್ಲಿ 72.62 ರೂಪಾಯಿಗೆ ಏರಿಕೆ ಆಯಿತು. ಅತೀ ಕಡಿಮೆ ಸಮಯದಲ್ಲಿ ಷೇರುಗಳು ಶೇಕಡಾ 11.01 ರಷ್ಟು ಜಿಗಿತ ಕಂಡಿದೆ.ಅಲ್ಲಿ ಮುಂದೆ 74.30 ರೂಪಾಯಿಗೆ ದಾಖಲಿಸಿತು. ಇದು ಇತ್ತೀಚಿನ ದಿನಗಳ ಗರಿಷ್ಠ ವಹಿವಾಟು ಎನ್ನಲಾಗುತ್ತಿದೆ.
ಸುಜ್ಲಾನ್ ಎನರ್ಜಿ ಕಂಪನಿ ಕುರಿತು..
1995 ರಲ್ಲಿ ಸ್ಥಾಪನೆಯಾಗಿರುವ ಈ ಸುಜ್ಲಾನ್ ಕಂಪನಿಯು ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಪ್ರಮುಖ ಕಚೇರಿ ಹೊಂದಿದೆ. ನವೀಕರಿಸುವ ಇಂಧನ ಕಂಪನಿಯಾಗಿದೆ. ಪವನ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಕಂಪನಿಯು ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಪರಿಹಾರ ಒದಗಿಸುತ್ತದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications