• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಎಎಲ್ ನೂತನ ಅಧ್ಯಕ್ಷ ಸುವರ್ಣ ರಾಜು ಸಂದರ್ಶನ

By ಡಾ. ಅನಂತ ಕೃಷ್ಣನ್ ಎಂ
|

ಬೆಂಗಳೂರು, ಫೆ. 1: ಹಿಂದೂಸ್ಥಾನ್ ಏರೋ ನಾಟಿಕ್ಸ್ ಲಿಮಿಟೆಡ್ ನ ನೂತನ ಅಧ್ಯಕ್ಷರಾಗಿ 56 ವರ್ಷದ ಟಿ. ಸುವರ್ಣ ರಾಜು ಅಧಿಕಾರ ವಹಿಸಿಕೊಂಡಿದ್ದಾರೆ. ಡಾ. ಡಿ.ಕೆ. ತ್ಯಾಗಿ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಡೈರೆಕ್ಟರ್ ಜನರಲ್ ಆಗಿದ್ದ ರಾಜು ನೇಮಕವಾಗಿದ್ದಾರೆ.

ಮೂರು ವರ್ಷ ಒಂಭತ್ತು ತಿಂಗಳ ಕಾಲ ರಾಜು ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ರಾಜು ಎಚ್ ಎಎಲ್ ಅಭಿವೃದ್ಧಿ ಮತ್ತು ಸಂಶೋಧನೆ ಕುರಿತು ಮಾತನಾಡಿದರು. ತಮ್ಮ ವಿವಿಧ ಯೋಜನೆಗಳನ್ನು ಒನ್ ಇಂಡಿಯಾದೊಂದಿಗೆ ತೆರೆದಿಟ್ಟರು. ರಾಜು ಅವರ ಮುಂದಿರುವ ಸವಾಲುಗಳು ಮತ್ತು ಅವರ ಗುರಿ ಧ್ಯೇಯಗಳ ಕುರಿತಯಾದ ಒಂದು ಪಕ್ಷಿನೋಟ ಇಲ್ಲಿದೆ.[ಎಚ್ಎ ಎಲ್ ಅಧ್ಯಕ್ಷ ಡಾ.ಆರ್.ಕೆ.ತ್ಯಾಗಿ ಸಂದರ್ಶನ]

ಅಧಿಕಾರ ಸಿಕ್ಕ ಕ್ಷಣ

ಎಚ್ ಎಎಲ್ ನಿಜವಾಗಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದರೂ, ಬಂಡವಾಳ ಹಿಂತೆಗೆತದಂಥ ಸವಾಲು ಎದುರಿಸುತ್ತದೆ. ಇಂಥ ಸಂದರ್ಭದಲ್ಲಿ ರಾಜು ಕೈ ಗೆ ಅಧಿಕಾರ ಸಿಕ್ಕಿದೆ. ಪ್ರತಿದಿನ ಬದಲಾಗುವ ಸರ್ಕಾರದ ನೀತಿ ನಿಯಮಗಳನ್ನು ಇಟ್ಟುಕೊಂಡೆ ರಾಜು ಅಧಿಕಾರ ನಿಭಾಯಿಸಬೇಕಾಗಿದೆ. ಕೇಂದ್ರ ರಕ್ಷಣಾ ಇಲಾಖೆ ಮಾರ್ಗಸೂಚಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ವೇಗ ಮತ್ತು ಬೇಡಿಕೆಗಳ ಪೂರೈಕೆ

ಬಾಕಿ ಉಳಿದಿರುವ ಪೂರೈಕೆ ಸಂಬಂಧಿ ಪ್ರಕರಣಗಳನ್ನು ರಾಜು ಮೊದಲು ಮುಗಿಸಬೇಕಾಗುತ್ತದೆ. ಭಾರತದ ರಕ್ಷಣಾ ಇಲಾಖೆಗೆ ಅಗತ್ಯ ಯುದ್ಧೋಪಕರಣಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮಹತ್ತರ ಜವಾಬ್ದಾರಿ ರಾಜು ಮೇಲಿದೆ. ತೇಜಸ್ ನಂಥ ಯುದ್ಧ ವಿಮಾನಗಳನ್ನು ಅತಿ ಶೀಘ್ರವಾಗಿ ಪೂರೈಸಬೇಕಾಗುತ್ತದೆ.[ಎಎಚ್ಎಲ್ ನಲ್ಲಿ ವಿಮಾನಯಾನಕ್ಕೆ ಸಚಿವ ಮನೋಹರ್ ಒಲವು]

ಐಎಎಫ್ ನೊಂದಿಗೆ ಹೊಂದಿರುವ ಸಂಬಂಧ ವೃದ್ಧಿ ಮತ್ತು ಕಾಪಾಡಿಕೊಳ್ಳುವಿಕೆಯೂ ಮುಖ್ಯವಾಗುತ್ತದೆ. ಕಂಪನಿಗೆ ಹೊಸ ಆಡಳಿತಗಾರರ ನೇಮಕ, ಸಮತೋಲಿತ ಆಡಳಿತ, ಪ್ರಮುಖ ಸಂಸ್ಥೆಗಳೊಂದಿಗಿನ ಭಾಂಧವ್ಯ ವೃದ್ಧಿಗೆ ರಾಜು ಶ್ರಮಿಸಬೇಕಾಗುತ್ತದೆ. ಈ ಮೂಲಕ ಕಂಪನಿಯ ಗುರಿ ಮತ್ತು ಧ್ಯೇಯಗಳನ್ನು ಮುಟ್ಟಬೇಕಾಗುತ್ತದೆ.

ಸರಿಯಾದ ಮಾರ್ಕೆಟಿಂಗ್ ತಂತ್ರ

ಎಚ್ ಎಎಲ್ ಪಡೆದುಕೊಂಡಿರುವ ಪೇಟೆಂಟ್ ಉತ್ಪನ್ನಗಳನ್ನು ಕಾಪಾಡಿಕೊಂಡು ಹೋಗುವುದರ ಜತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಉತ್ಪನ್ನಗಳ ಹಕ್ಕನ್ನು ಪಡೆದುಕೊಳ್ಳುವ ಗುರಿ ರಾಜು ಅವರ ಎದುರಿಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ಹಕ್ಕು ಪಡೆದುಕೊಳ್ಳಬೇಕಾಗಿದೆ. ಇದಕ್ಕೆ ರಾಜು ಉನ್ನತ ಮಟ್ಟದ ಮ್ಯಾನೆಜಿಂಗ್ ತಂತ್ರಗಳನ್ನು ಅನುಸರಿಸುವುದು ಅನಿವಾರ್ಯ.

ಎಚ್ ಎಎಲ್ ನ ಆರ್ ಆಂಡ್ ಡಿ ಪಾಲಿಸಿ ಅನ್ವಯವೇ ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ. ಜಾಗ್ವಾರ್ ಉತ್ಪನ್ನಗಳ ತಯಾರಿಕೆ ಸೇರಿದಂತೆ ವಿವಿಧ ಉಪಕರಣ ತಯಾರಿಕೆಗೆ ಯಲ್ಲಿ ಪಾರದರ್ಶಕತೆ ಅನುಸರಿಸುವುದು ಅಷ್ಟೇ ಮುಖ್ಯವಾಗುತ್ತದೆ.

ಎಚ್ಎಎಲ್ ತಂತ್ರಜ್ಞಾನ ಶಕ್ತಿ ಕೇಂದ್ರ

ಒನ್ ಇಂಡಿಯಾದೊಂದಿಗೆ ಮಾತನಾಡಿದ ರಾಜು, ನಾನು ಯೋಜಿಸಿ ನಿಧಾನವಾಗಿಯೇ ಹೆಜ್ಜೆ ಇಡಲಿದ್ದೇನೆ. ಆದರೆ ರಕ್ಷಣಾ ಕ್ಷೇತ್ರ ಮತ್ತು ಯುದ್ಧೋಪಕರಣ ತಯಾರಿಕೆಯಲ್ಲಿ ಎಚ್ ಎಎಲ್ ನ್ನು ಒಂದು ತಂತ್ರಜ್ಞಾನದ ಶಕ್ತಿ ಕೇಂದ್ರವನ್ನಾಗಿ ಮಾಡುವ ಬಯಕೆ ಹೊಂದಿದ್ದೇನೆ ಎಂದು ತಿಳಿಸಿದರು.

ಎಚ್ಎಎಲ್ ನಲ್ಲೂ ಮೆಕ್ ಇನ್ ಇಂಡಿಯಾ

ನಮ್ಮ ಬ್ರ್ಯಾಂಡ್ ಗಳನ್ನು ಮತ್ತಷ್ಟು ಭದ್ರ ಪಡಿಸಲು ಮೇಕ್ ಇನ್ ಇಂಡಿಯಾ ವಿಫುಲ ಅವಕಾಶ ಕಲ್ಪಿಸಿದೆ. ನಾವು ಉತ್ತಮ ಸಂಪ್ರದಾಯವೊಂದನ್ನು ಹೊಂದಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದೆಯೂ ಸಾಗುತ್ತೇವೆ ಎಂದು ತಿಳಿಸಿದರು.

ಮುಂದಿನ ಏರೋ ಇಂಡಿಯಾ ಪ್ರದರ್ಶನಕ್ಕೆ ನಾವು ಸಿದ್ಧರಾಗುತ್ತಿದ್ದೇವೆ. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಲಿದೆ. ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಉಪಕರಣಗಳನ್ನು ಒದಗಿಸುವುದೇ ನಮಗೆ ಉಳಿದಿದ್ದೆಲ್ಲಕ್ಕಿಂತ ಪ್ರಮುಖವಾದ್ದು ಎಂದು ರಾಜು ಹೇಳಿದರು.

English summary
Fifty-six-year-old Talari Suvarna Raju stepped into the cockpit of Hindustan Aeronautics Ltd (HAL) as its 17th Chairman on Saturday. Raju, who is currently the Director (Design) of HAL succeeds Dr R K Tyagi, who superannuated on January 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X