Waqf: ವಕ್ಫ್ ಜೆಪಿಸಿ ಸದಸ್ಯರ ಅಮಾನತು; ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದು ದೂರು
ವಕ್ಪ್ ತಿದ್ದುಪಡಿ ಮಸೂದೆಯ ಮೇಲಿನ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸದಸ್ಯರನ್ನು ಅಮಾನುತು ಮಾಡಲಾಗಿದ್ದು, ಅಮಾನತುಗೊಂಡ ಸದಸ್ಯರು ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ. ಸಭೆಯಲ್ಲಿ ಗದ್ದಲ ನಡೆದ ಕಾರಣ ಸದಸ್ಯರನ್ನು ಅಮಾನತು ಮಾಡಲಾಗಿದೆ. ಇದೀಗ ಘಟನೆ ವಿವಾದದ ಸ್ವರೂಪ ಪಡೆದಿದ್ದು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಅಮಾನತುಗೊಂಡಿರುವ ಸದಸ್ಯರು ಲೋಕಸಣಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸಮಿತಿಯ ಅಧ್ಯಕ್ಷೆ ಬಿಜೆಪಿ ನಾಯಕಿ ಜಗದಾಂಬಿಕಾ ಪಾಲ್ ವಿರುದ್ಧ ಆರೋಪ ಮಾಡಿದ್ದಾರೆ. ಪಾಲ್ ಅವರು ಯಾರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ಬಳಿಕ ತಮ್ಮನ್ನು ಸಮಿತಿಯಿಂದ ಅಮಾನತು ಮಾಡಿದ್ದಾರೆ ಎಂದು ದೂರಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಹತ್ತು ವಿರೋಧ ಪಕ್ಷದ ಸದಸ್ಯರನ್ನು ಶುಕ್ರವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ, ಜಗದಾಂಬಿಕಾ ಪಾಲ್ ಅವರ ವಿರುದ್ಧ ಗಂಭೀರ ಅರೋಪ ಮಾಡಿದ್ದು, ನಮ್ಮ ವಾದವನ್ನು ಅಧ್ಯಕ್ಷರು ಕಡೆಗಣಿಸಿದ್ದಾರೆ ಎಂದು ದೂರಿದ್ದಾರೆ.
ಸದಸ್ಯರು ಬರೆದ ಪತ್ರದಲ್ಲಿ ಏನಿದೆ?
"ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾದಾಗ, ವಿರೋಧ ಪಕ್ಷದ ಸದಸ್ಯರಾದ ನಾವು ಅಧ್ಯಕ್ಷರ ನಡವಳಿಕೆ ವಿರುದ್ಧ ಗೌರವಯುತವಾಗಿ ಧ್ವನಿ ಎತ್ತಿದ್ದೇಬೆ. ನಿಯಮಗಳಲ್ಲಿ ಪರಿಗಣಿಸಲಾಗಿರುವ ಸೂಕ್ತ ಪ್ರಕ್ರಿಯೆಯನ್ನು ನಿರ್ಲಕ್ಷಿಸುವ ಮೂಲಕ ಜೆಪಿಸಿಯ ಏಕಪಕ್ಷೀಯ ಮತ್ತು ಅನ್ಯಾಯದ ಕಾರ್ಯವೈಖರಿಯನ್ನು ಎತ್ತಿ ತೋರಿಸಿದ್ದೇವೆ. ಜನವರಿ 24 ಮತ್ತು 25 ರಂದು ಸಭೆಗೆ ನಿಗದಿ ಮಾಡಿ ಸೂಚನೆ ನೀಡಿದ್ದರಿಂದ, ಜನವರಿ 31ರಿಂದ ಸಂಸತ್ತಿನ ಅಧಿವೇಶ ಪ್ರಾರಂಭವಾಗುವುದರಿಂದ ಜನವರಿ 27 ರಿಂದ 30 ರವರೆಗೆ ಸಭೆಯನ್ನು ಮುಂದೂಡುವಂತೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.
ನಾವು ನಮ್ಮ ವಾದವನ್ನು ಸಭ್ಯ ರೀತಿಯಲ್ಲಿಯೇ ಅಧ್ಯಕ್ಷರಿಗೆ ತಿಳಿಸಿದೆವು. ಆದರೆ ಅವರು ಪ್ರತಿಕ್ರಿಯೆ ನೀಡುವ ಪ್ರಯತ್ನವನ್ನು ಮಾಡಲಿಲ್ಲ. ನಮಗೆ ಅವಮಾನವಾದ ಕಾರಣ, ನಾವು ಎದ್ದು ನಿಂತು ನಮ್ಮ ಬೇಡಿಕೆಗಳನ್ನು ಮುಂದಿಟ್ಟೆವು, ಅಧ್ಯಕ್ಷರು ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡಿದರು, ಇದ್ದಕ್ಕಿದ್ದಂತೆ ಅವರು ನಮ್ಮನ್ನು ಅಮಾನತುಗೊಳಿಸಲು ಆದೇಶ ನೀಡಿದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಮಿತಿಯ ವಿಚಾರಣೆಯನ್ನು ಪಾರದರ್ಶಕವಾಗಿ ನಡೆಸಬೇಕೆಂದು ಒತ್ತಾಯಿಸಿದ ವಿರೋಧ ಪಕ್ಷದ ಸಂಸದರು, ಪಾಲ್ ಅವರು ಅಮಾನತುಗೊಳಿಸುವ ಅಧಿಕಾರ ಹೊಂದಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಜೆಪಿಸಿಯ ಅಧ್ಯಕ್ಷರಿಗೆ ಸಮಿತಿಯ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರವಿಲ್ಲ ಎನ್ನುವುದು ನಮ್ಮ ಅಭಿಪ್ರಾಯ, ಅಧ್ಯಕ್ಷರು 27ನೇ ಸಭೆಯನ್ನು ಮುಂದೂಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಿದರು, ಇದನ್ನು ಸಮಿತಿಯು ಅಂಗೀಕರಿಸಿತು, ಬ್ಯಾನರ್ಜಿ ಮತ್ತು ನದೀಮ್-ಉಲ್ ಹಕ್ (ತೃಣಮೂಲ ಕಾಂಗ್ರೆಸ್), ಮೊಹಮ್ಮದ್ ಜಾವೇದ್, ಇಮ್ರಾನ್ ಮಸೂದ್ ಮತ್ತು ಸೈಯದ್ ನಸೀರ್ ಹುಸೇನ್ (ಕಾಂಗ್ರೆಸ್), ಎ ರಾಜಾ ಮತ್ತು ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಅಸಾದುದ್ದೀನ್ ಓವೈಸಿ (ಎಐಎಂಐಎಂ), ಮೊಹಿಬುಲ್ಲಾ (ಎಸ್‌ಪಿ) ಮತ್ತು ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ) ಅಮಾನತುಗೊಂಡ ಸದಸ್ಯರಾಗಿದ್ದಾರೆ.












Click it and Unblock the Notifications