ಪಾಕ್ ಪ್ರಜೆಗಳಿಗೆ ಮೆಡಿಕಲ್ ವೀಸಾ ದೀಪಾವಳಿ ಉಡುಗೊರೆ: ಸುಷ್ಮಾ ಸ್ವರಾಜ್
ನವದೆಹಲಿ, ಅಕ್ಟೋಬರ್ 19: ಇಡೀ ದೇಶವೂ ದಿಪಾವಳಿಯ ಸಂಬ್ರಮದಲ್ಲಿದ್ದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹಬ್ಬದ ಸಂಭ್ರಮ ಭಾರತದಾಚೆಯೂ ಹರಡುವಂತೆ ಮಾಡಿದ್ದಾರೆ! ಹೌದು, ಭಾರತೀಯ ಮೆಡಿಕಲ್ ವೀಸಾಕ್ಕೆ ಅರ್ಜಿ ಸಲ್ಲಿಸಿರುವ ಪಾಕಿಸ್ತಾನಿಯರೆಲ್ಲರಿಗೂ ಮೆಡಿಕಲ್ ವೀಸಾವನ್ನು ದೀಪಾವಳಿ ಉಡುಗೊರೆಯಾಗಿ ನೀಡಲು ಸುಷ್ಮಾ ಸ್ವರಾಜ್ ನಿರ್ಧರಿಸಿದ್ದಾರೆ.
ಈಗಾಗಲೇ ಇತ್ಯರ್ಥವಾಗದೆ ಉಳಿದ ಪಾಕಿಸ್ತಾನಿ ವೈದ್ಯಕೀಯ ವೀಸಾ ಸಂಬಂಧಿಸಿದ ಅಡೆತಡೆಗಳನ್ನು ಪರಿಹರಿಸಿ ಅಗತ್ಯ ಇರುವವರಿಗೆ ಆದಷ್ಟು ಶೀಘ್ರವಾಗಿ ವೀಸಾ ನೀಡಲು ವಿದೇಶಾಂಗ ವ್ಯವಹಾರಗಳ ಖಾತೆ ನಿರ್ಧರಿಸಿದೆ.

ದೀಪಾವಳಿಯ ಈ ಶುಭಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ಪಾಕಿಸ್ತಾನಿಯರಿಗೂ ಮೆಡಿಕಲ್ ವೀಸಾವನ್ನು ನೀಡಲು ಭಾರತ ಸಿದ್ಧವಿದೆ ಎಂದು ಸ್ವತಃ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 18 ರಂದು ಸುಷ್ಮಾ ಸ್ವರಾಜ್ ಅವರು 5 ಪಾಕಿಸ್ತಾನಿಯರಿಗೆ ಮೆಡಿಕಲ್ ವೀಸಾ ನೀಡಲು ಅನುಮತಿ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications