ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆː 3 ವರ್ಷಗಳ ಆಡಳಿತ, ಮೋದಿ ಕೈ ಹಿಡಿಯಲಿದೆ

By ಅನುಷಾ ರವಿ
|
Google Oneindia Kannada News

ನವದೆಹಲಿ, ಜುಲೈ 03: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಜನಪ್ರಿಯತೆ ಸಮೀಕ್ಷೆಯೊಂದರ ಫಲಿತಾಂಶ ಹೊರ ಬಂದಿದೆ.

ಒಂದು ವೇಳೆ ಈಗ ಚುನಾವಣೆ ನಡೆದರೆ ಯಾರಿಗೆ ಗೆಲುವು? ಎಷ್ಟು ಸ್ಥಾನ ಸಿಗಬಹುದು? ಎಂಬ ಪ್ರಶ್ನೆಯೊಂದಿಗೆ ಸಮೀಕ್ಷಾ ಸಂಸ್ಥೆಯೊಂದು ನಡೆಸಿದ ಚುನಾವಣಾ ಸಮೀಕ್ಷೆಯಲ್ಲಿ ಮೋದಿ ಸರ್ಕಾರಕ್ಕೆ ಭರ್ಜರಿ ಗೆಲುವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಡಿಪಿ ಅಸೋಸಿಯೇಟ್ಸ್ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ ಮೋದಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಿದೆ.

ಇದರಿಂದಾಗಿ, ಎನ್ ಡಿಎ ತನ್ನ ಮತ ಹಂಚಿಕೆಯನ್ನು ಶೇ 38.5ರಿಂದ ಶೇ 44ಕ್ಕೇರಿಸಿಕೊಂಡಿದೆ. ಆದರೆ, 2014ರ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ ಎನ್ ಡಿಎಗೆ 336ರ ಬದಲಿಗೆ 315 ಸ್ಥಾನ ಮಾತ್ರ ಲಭಿಸುವ ನಿರೀಕ್ಷೆಯಿದೆ.

ವಿಡಿಪಿ ಸಂಸ್ಥೆಯ ಸಮೀಕ್ಷೆ

ವಿಡಿಪಿ ಸಂಸ್ಥೆಯ ಸಮೀಕ್ಷೆ

ಸಾರ್ವಜನಿಕರ ಮನಸ್ಥಿತಿ ಹೇಗಿದೆ ಎಂದು ಸಮೀಕ್ಷೆ ಮೂಲಕ ವಿಡಿಪಿ ಸಂಸ್ಥೆ ತಿಳಿದುಕೊಂಡಿದೆ. ನರೇಂದ್ರ ಮೋದಿ ಅವರ ಮೂರು ವರ್ಷಗಳ ಆಡಳಿತದ ಬಗ್ಗೆ ಶೇ 69ಕ್ಕೂ ಅಧಿಕ ಮಂದಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ,ತಮಿಳುನಾಡು, ಕೇರಳ, ಬಿಹಾರ, ಪಶ್ಚಿಮ ಬಂಗಾಲ ಮುಂತಾದ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಯಿತು.

ಪ್ರದೇಶವಾರು ಸಮೀಕ್ಷೆ

ಪ್ರದೇಶವಾರು ಸಮೀಕ್ಷೆ

* ಪ್ರದೇಶವಾರು ಸಮೀಕ್ಷೆಯಲ್ಲಿ ಎನ್ ಡಿ ಎ ಪರ ಶೇ 33 ಹಾಗೂ ಯುಪಿಎ ಪರ ಶೇ 27ರಷ್ಟು ಮತ ಹಂಚಿಕೆ ಕಂಡು ಬಂದಿದೆ.
* ಪೂರ್ವ ಹಾಗೂ ಈಶಾನ್ಯದಲ್ಲಿ ಶೇ 42ರಷ್ಟು ಎನ್ ಡಿಎ ಹಾಗೂ ಶೇ 29ರಷ್ಟು ಯುಪಿಎಗೆ ದಕ್ಕಿದೆ.
* ಪಶ್ಚಿಮ ಭಾರತದಲ್ಲಿ ಎನ್ ಡಿಎ ಗೆ ಶೇ 50, ಯುಪಿಎ ಗೆ ಶೇ 36ರಷ್ಟು ಮತಗಳು.
* ಉತ್ತರ ಭಾರತದಲ್ಲಿ ಶೇ 51ರಷ್ಟು ಎನ್ ಡಿಎ ಪಾಲು ಹಾಗೂ ಶೇ 33ರಷ್ಟು ಯುಪಿಎ ಪಾಲು ಮತಗಳು ಬಂದಿವೆ.

ಎನ್ ಡಿಎಗೆ 315 ಸ್ಥಾನ

ಎನ್ ಡಿಎಗೆ 315 ಸ್ಥಾನ

ಈಗ ಚುನಾವಣೆ ನಡೆದರೆ ಎನ್ ಡಿಎಗೆ 315 ಲೋಕಸಭಾ ಸ್ಥಾನಗಳು ಹಾಗೂ ಯುಪಿಎ ಗೆ 62 ಸ್ಥಾನಗಳು ದಕ್ಕಲಿವೆ ಎಂದು ವಿಡಿಪಿ ಅಸೋಸಿಯೇಷನ್ಸ್ ಹೇಳಿದೆ.
ಎನ್ ಡಿಎ ಅತಿ ಹೆಚ್ಚು ಮತ ಹಂಚಿಕೆ ಗುಜರಾತ್ ಶೇ 53ರಷ್ಟು ಸಿಗಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ತಲಾ ಶೇ52ರಷ್ಟು ದೊರೆಯಲಿದೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕದಿಂದ ಎನ್ ಡಿಎ ಪರ ಶೇ 47ರಷ್ಟು ಮತ ಹಂಚಿಕೆ ಕಂಡು ಬಂದಿದೆ.

ಒಟ್ಟಾರೆ ಸಮೀಕ್ಷೆ

ಒಟ್ಟಾರೆ ಸಮೀಕ್ಷೆ

ರಾಷ್ಟ್ರವ್ಯಾಪಿ ನಡೆಸಲಾದ ಸಮೀಕ್ಷೆಯಲ್ಲಿ 15 ರಾಜ್ಯಗಳ 14 ಲೋಕಸಭಾ ಸ್ಥಾನಗಳನ್ನು ಪ್ರಮುಖವಾಗಿ ಪರಿಗಣಿಸಲಾಯಿತು. ಸುಮಾರು 12,826 ಮಂದಿ ಪ್ರತಿಕ್ರಿಯಿಸಿದರು. ಗ್ರಾಮೀಣ ಭಾಗದಿಂದ ಹೆಚ್ಚಿನ ಪಾಲ್ಗೊಳ್ಳುವಿಕೆ ಕಂಡು ಬಂದಿತ್ತು. ಮೋದಿ ಸರ್ಕಾರದಲ್ಲಿ ಪಿಯೂಷ್ ಗೋಯಲ್ ಹಾಗೂ ಸುಷ್ಮಾ ಸ್ವರಾಜ್ ಕಾರ್ಯ ನಿರ್ವಹಣೆಗೆ ಹೆಚ್ಚಿನ ಅಂಕಗಳು ಸಿಕ್ಕಿವೆ.

English summary
A National tracker poll by an agency has predicted a massive win for the NDA if elections are held now. The study by VDP Associates says that three years of Modi government has helped increase the NDA's vote share from 38.5 percent to 44 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X