ಟ್ರಾಫಿಕ್ ಫೈನ್‌ ಕಟ್ಟದಿದ್ದರೆ ಮನೆ ಕರೆಂಟ್ ಕಟ್? 20,000 ಕೋಟಿ ರೂ. ಬಾಕಿ ವಸೂಲಿಗೆ ಸುಪ್ರೀಂ ಕೋರ್ಟ್‌ನಿಂದ ವಿನೂತನ ಸಲಹೆ

ಬೆಂಗಳೂರು ಹಾಗೂ ದೇಶದ ಇತರ ಮಹಾನಗರಗಳಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದರೂ, ಎಷ್ಟೋ ವಾಹನ ಸವಾರರು ಅದನ್ನ ಕಟ್ಟದೆ ನಿರ್ಲಕ್ಷ್ಯ ತೋರುತ್ತಾರೆ. ಈ ರೀತಿ ದೇಶಾದ್ಯಂತ ಬರೋಬ್ಬರಿ 20,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಟ್ರಾಫಿಕ್ ದಂಡ ವಸೂಲಿಯಾಗದೆ ಹಾಗೆಯೇ ಬಾಕಿ ಉಳಿದಿದೆ.

ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನ ನೇರವಾಗಿ ವಿದ್ಯುತ್ ಬಿಲ್‌ಗಳಿಗೆ ಲಿಂಕ್ ಮಾಡುವ ಮೂಲಕ ದಂಡ ವಸೂಲಿ ಮಾಡಬಹುದು ಎಂಬ ವಿನೂತನ ಸಲಹೆಯನ್ನ ನೀಡಿದೆ. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಜಾರಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುವ ವೇಳೆ ಈ ಮಹತ್ವದ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ.

Supreme Court Suggests Linking Unpaid Traffic Fines to Electricity Bills to Recover Rs 20000 Crore

ಟ್ರಾಫಿಕ್ ದಂಡ ವಸೂಲಿಗೆ ಸುಪ್ರೀಂ ಕೋರ್ಟ್ ಕೊಟ್ಟ ಐಡಿಯಾ ಏನು?

ವಿಚಾರಣೆಯ ವೇಳೆ, ಕೇವಲ ಇ-ಚಲನ್‌ಗಳನ್ನ ವಿತರಿಸುತ್ತಾ ಹೋದರೆ ಸಾಲದು, ದಂಡದ ಮೊತ್ತವನ್ನ ವಸೂಲಿ ಮಾಡುವುದು ಕೂಡ ಅಷ್ಟೇ ಮುಖ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಒಟ್ಟು 45,000 ಕೋಟಿ ರೂಪಾಯಿ ದಂಡದ ಪೈಕಿ ಕೇವಲ 25,000 ಕೋಟಿ ರೂಪಾಯಿ ಮಾತ್ರ ವಸೂಲಿಯಾಗಿದ್ದು, ಇನ್ನುಳಿದ 20,000 ಕೋಟಿ ರೂಪಾಯಿ ಹಾಗೇ ಉಳಿದಿದೆ.

ಜನರು ದಂಡ ಪಾವತಿಸಲು ಹಿಂದೇಟು ಹಾಕುತ್ತಿರುವುದರಿಂದ, ಇ-ಚಲನ್‌ಗಳನ್ನು ವಿದ್ಯುತ್ ಬಿಲ್‌ಗೆ ಸೇರ್ಪಡೆ ಮಾಡಬಹುದು. ಒಂದು ವೇಳೆ ದಂಡ ಕಟ್ಟದಿದ್ದರೆ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದಲಾದರೂ ಜನರು ಅನಿವಾರ್ಯವಾಗಿ ದಂಡವನ್ನು ಪಾವತಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ದಂಡ ಕಟ್ಟದವರಿಂದ ಹಣ ವಸೂಲಿ ಮಾಡಲು ಈ ದೇಶದಲ್ಲಿ ಹೊಸ ದಾರಿಗಳನ್ನ ಹುಡುಕಲೇಬೇಕಾಗಿದೆ ಎಂದು ಕೋರ್ಟ್ ಕಟುವಾಗಿ ನುಡಿದಿದೆ.

ಬಾಕಿ ಟ್ರಾಫಿಕ್ ಇ-ಚಲನ್ ಇದ್ದರೆ ಆರ್.ಸಿ. ನವೀಕರಣ ಮತ್ತು ವಾಹನ ವರ್ಗಾವಣೆ ರದ್ದು!

ಕೇವಲ ವಿದ್ಯುತ್ ಬಿಲ್ ಮಾತ್ರವಲ್ಲದೆ, ದಂಡ ಕಟ್ಟದ ವಾಹನ ಮಾಲೀಕರಿಗೆ ಇತರ ಹಲವು ರೀತಿಯಲ್ಲಿ ಬಿಸಿ ಮುಟ್ಟಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಟ್ರಾಫಿಕ್ ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ನೋಂದಣಿ ಪ್ರಮಾಣಪತ್ರ (RC) ನವೀಕರಣವನ್ನ ತಡೆಹಿಡಿಯುವುದು, ವಾಹನದ ಮಾಲೀಕತ್ವ ವರ್ಗಾವಣೆ ಮಾಡದಂತೆ ನಿರ್ಬಂಧಿಸುವುದು ಹಾಗೂ ಅಂತಹ ವಾಹನಗಳನ್ನ ಪರಿವಾಹನ್ (Parivahan) ಪೋರ್ಟಲ್‌ನಲ್ಲಿ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸುವಂತಹ ಕಠಿಣ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಲಾಗಿದೆ.

ದಂಡ ಕಟ್ಟುವವರೆಗೂ ವಾಹನದ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡದಂತೆ ತಡೆಯಲು ಕೂಡ ಸಲಹೆ ನೀಡಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ರದ್ದು ಹಾಗೂ ವಾಹನಗಳ ಜಪ್ತಿಗೆ ಕೋರ್ಟ್ ಸೂಚನೆ

ಟ್ರಾಫಿಕ್ ದಂಡ ಬಾಕಿ ಇರುವ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ನವೀಕರಣವನ್ನ ನಿಲ್ಲಿಸುವುದು ಅಥವಾ ಪ್ರಸ್ತುತ ಇರುವ ಲೈಸೆನ್ಸ್ ಅನ್ನ ಅಮಾನತುಗೊಳಿಸುವ ಬಗ್ಗೆಯೂ ಕೋರ್ಟ್ ಚರ್ಚಿಸಿದೆ. ಇದಲ್ಲದೆ, ರಸ್ತೆಗಳಲ್ಲಿ ಪೊಲೀಸರು ಅನಿರೀಕ್ಷಿತವಾಗಿ ವಾಹನಗಳ ತಪಾಸಣೆ ನಡೆಸಿ, ದಂಡ ಕಟ್ಟದ ವಾಹನಗಳು ಸಿಕ್ಕಿಬಿದ್ದರೆ, ಸ್ಥಳದಲ್ಲೇ ದಂಡ ವಸೂಲಿ ಮಾಡಬೇಕು ಅಥವಾ ವಾಹನಗಳನ್ನ ಜಪ್ತಿ ಮಾಡುವಂತಹ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪರ್ದಿವಾಲಾ ತಿಳಿಸಿದ್ದಾರೆ.

ಆದರೆ, ವಿದ್ಯುತ್ ಬಿಲ್‌ಗೆ ಟ್ರಾಫಿಕ್ ದಂಡವನ್ನ ಲಿಂಕ್ ಮಾಡುವ ವಿಚಾರವು ಕೇವಲ ಕೋರ್ಟ್‌ನ ಒಂದು ಸಲಹೆಯಾಗಿದ್ದು, ಇದಿನ್ನೂ ಅಧಿಕೃತ ಆದೇಶವಾಗಿ ಹೊರಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+