ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Conversion, ಗಂಭೀರ ಸಮಸ್ಯೆ ರಾಜಕೀಯ ಮಾಡಬೇಡಿ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಜನವರಿ 9: ಧಾರ್ಮಿಕ ಮತಾಂತರಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂದಿರುದ ಸುಪ್ರೀಂ ಕೋರ್ಟ್, ಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ಕೋರಿ ಸಲ್ಲಿಸಿರುವ ಮನವಿಯ ಕುರಿತು ಸೋಮವಾರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ನೆರವು ಕೋರಿದೆ.

ಬೆದರಿಕೆ, ಉಡುಗೊರೆಗಳು ಮತ್ತು ಹಣದ ಪ್ರಯೋಜನಗಳ ಮೂಲಕ ವಂಚನೆಯಿಂದ ಆಮಿಷ ಒಡ್ಡಿ ಸಹಾಯ ಮಾಡುವ ಮೂಲಕ ಧಾರ್ಮಿಕ ಮತಾಂತರವನ್ನು ಪರಿಶೀಲಿಸುವಂತೆ ಅರ್ಜಿದಾರರು ಕೋರಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಹಾಜರಾಗುವಂತೆ ಕೇಳಿದೆ.

Voter Data Theft: ಚಿಲುಮೆ ಮುಖ್ಯಸ್ಥ ರವಿಕುಮಾರ್ ಆಪ್ತರ ಬಂಧನVoter Data Theft: ಚಿಲುಮೆ ಮುಖ್ಯಸ್ಥ ರವಿಕುಮಾರ್ ಆಪ್ತರ ಬಂಧನ

ಅಟರ್ನಿ ಜನರಲ್‌ ನಮಗೆ ನಿಮ್ಮ ಸಹಾಯವೂ ಬೇಕು. ಬಲವಂತ, ಆಮಿಷ ಇತ್ಯಾದಿಗಳಿಂದ ಧಾರ್ಮಿಕ ಮತಾಂತರಗಳ ಆಮಿಷದಿಂದ ಏನಾದರೂ ಸಂಭವಿಸಿದರೆ, ಯಾವಾಗ ಏನು ಮಾಡಬೇಕು? ಸರಿಪಡಿಸುವ ಕ್ರಮಗಳು ಯಾವುವು?" ಎಂದು ಪೀಠ ಕೇಳಿದೆ. ಆರಂಭದಲ್ಲಿ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ ವಿಲ್ಸನ್, ಅರ್ಜಿಯನ್ನು ರಾಜಕೀಯ ಪ್ರೇರಿತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿದೆ. ರಾಜ್ಯದಲ್ಲಿ ಇಂತಹ ಮತಾಂತರಗಳ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಪೀಠವು ಆಕ್ಷೇಪಣೆ ಸ್ವೀಕರಿಸಿ, "ನೀವು ಈ ರೀತಿ ಉದ್ರೇಕಗೊಳ್ಳಲು ಬೇರೆ ಬೇರೆ ಕಾರಣಗಳಿರಬಹುದು. ನ್ಯಾಯಾಲಯದ ಕಲಾಪಗಳನ್ನು ಬೇರೆ ವಿಷಯಗಳಾಗಿ ಪರಿವರ್ತಿಸಬೇಡಿ. ಇಡೀ ರಾಜ್ಯದ ಬಗ್ಗೆ ನಮಗೆ ಕಾಳಜಿ ಇದೆ. ನಿಮ್ಮ ರಾಜ್ಯದಲ್ಲಿ ಇದು ನಡೆಯುತ್ತಿದ್ದರೆ, ಅದು ಕೆಟ್ಟದು, ಇಲ್ಲದಿದ್ದರೆ ಒಳ್ಳೆಯದು, ಒಂದು ರಾಜ್ಯವನ್ನು ಗುರಿಯಾಗಿಸಿ ನೋಡಬೇಡಿ, ರಾಜಕೀಯ ಮಾಡಬೇಡಿ ಎಂದು ಹೇಳಿತು.

ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅಡ್ಡಿ

ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅಡ್ಡಿ

ಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಬಲವಂತದ ಧಾರ್ಮಿಕ ಮತಾಂತರವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅಡ್ಡಿಯಾಗಬಹುದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಮತಾಂತರದ ಅತ್ಯಂತ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ಮಧ್ಯಸ್ಥಿಕೆ ವಹಿಸಲು ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅದು ನಿರ್ದೇಶನ ನೀಡಿದೆ.

ಮತಾಂತರಕ್ಕೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ

ಮತಾಂತರಕ್ಕೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ

ವಂಚನೆ, ಆಮಿಷ ಮತ್ತು ಬೆದರಿಕೆಯ ಮೂಲಕ ಮತಾಂತರವನ್ನು ನಿಲ್ಲಿಸದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಧಾರ್ಮಿಕ ಸ್ವಾತಂತ್ರ್ಯವು ಇತರರನ್ನು ಮತಾಂತರಗೊಳಿಸುವ ಹಕ್ಕನ್ನು ಒಳಗೊಂಡಿಲ್ಲ ಎಂದು ಗುಜರಾತ್ ಸರ್ಕಾರವು ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಮದುವೆಯ ಮೂಲಕ ಮತಾಂತರಕ್ಕೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುವ ರಾಜ್ಯ ಕಾನೂನಿನ ನಿಬಂಧನೆಗೆ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವು ಮಾಡುವಂತೆ ಮನವಿ ಮಾಡಿತ್ತು.

ಧಾರ್ಮಿಕ ಮತಾಂತರದಿಂದ ಮುಕ್ತವಾದ ಜಿಲ್ಲೆಯಿಲ್ಲ

ಧಾರ್ಮಿಕ ಮತಾಂತರದಿಂದ ಮುಕ್ತವಾದ ಜಿಲ್ಲೆಯಿಲ್ಲ

ಸೆಪ್ಟೆಂಬರ್ 23 ರಂದು ಸುಪ್ರೀಂ ಕೋರ್ಟ್ ಈ ಮನವಿಗೆ ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆ ಕೇಳಿತ್ತು. ಬಲವಂತದ ಧಾರ್ಮಿಕ ಮತಾಂತರವು ರಾಷ್ಟ್ರವ್ಯಾಪಿ ಸಮಸ್ಯೆಯಾಗಿದ್ದು, ಅದನ್ನು ತಕ್ಷಣವೇ ನಿಭಾಯಿಸಬೇಕು ಎಂದು ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ಸಲ್ಲಿಸಿದ್ದಾರೆ. 'ಹುಕ್‌ ಅಂಡ್‌ ಕ್ರೂಕ್‌'ನಿಂದ ಧಾರ್ಮಿಕ ಮತಾಂತರದಿಂದ ಮುಕ್ತವಾದ ಒಂದು ಜಿಲ್ಲೆಯೂ ಇಲ್ಲದಿರುವುದರಿಂದ ನಾಗರಿಕರಿಗೆ ಆಗಿರುವ ಗಾಯ ಅತ್ಯಂತ ದೊಡ್ಡದಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.

ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ

ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ

"ಉಡುಗೊರೆಗಳು, ಮೂಢನಂಬಿಕೆ, ಪವಾಡಗಳ ಮೂಲಕ ಬೆದರಿಸಿ, ಬೆದರಿಕೆ ಹಾಕಿ, ವಂಚನೆಯಿಂದ ಆಮಿಷ ಒಡ್ಡಿ, ಮಾಟಮಂತ್ರ, ಮೂಢನಂಬಿಕೆ, ಪವಾಡಗಳ ಮೂಲಕ ಮತಾಂತರ ಮಾಡುತ್ತಿರುವ ಘಟನೆಗಳು ದೇಶದಾದ್ಯಂತ ಪ್ರತಿ ವಾರ ವರದಿಯಾಗುತ್ತಿವೆ. ಆದರೆ ಕೇಂದ್ರ ಮತ್ತು ರಾಜ್ಯಗಳು ಈ ಬೆದರಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವಕೀಲ ಅಶ್ವನಿ ಕುಮಾರ್ ದುಬೆ ಮೂಲಕ ಮನವಿ ಸಲ್ಲಿಸಿದ್ದಾರೆ. ಬೆದರಿಕೆ ಮತ್ತು ಆರ್ಥಿಕ ಲಾಭಗಳ ಮೂಲಕ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ವರದಿಯನ್ನು ಮತ್ತು ಮಸೂದೆಯನ್ನು ತಯಾರಿಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಲಾಗಿದೆ.

English summary
Noting that religious conversions should not be given a political colour, the Supreme Court on Monday sought the assistance of Attorney General R Venkataramani on a plea seeking directions to the Center and states to take strict measures to control fraudulent religious conversions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X