Supreme Court: ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅರ್ಜಿ ತಿರಸ್ಕರಿಸಿದ ಸುಪ್ರೀಂ!
ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಹೊಸದಿಲ್ಲಿ ಫೆಬ್ರವರಿ 27: ಐತಿಹಾಸಿಕ ಸ್ಥಳಗಳು ಮತ್ತು ನಗರಗಳಿಗೆ ಮರುನಾಮಕರಣ ಮಾಡಲು ಮರು ನಾಮಕಾರಣ ಆಯೋಗ ರಚನೆ ಮಾಡುವಂತೆ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ. ಮಾತ್ರವಲ್ಲದೆ ಅರ್ಜಿದಾರ ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವನ್ನು ಪ್ರಶ್ನಿಸಿದೆ. 'ಇದು ದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನುಂಟು ಮಾಡುವ ಸಮಸ್ಯೆಗಳನ್ನು ಜೀವಂತವಾಗಿರುತ್ತದೆ' ಎಂದು ತಿಳಿಸಿದೆ.

'ಅನಾಗರಿಕ ವಿದೇಶ ಅಕ್ರಮಣಕಾರರು' ಮರುನಾಮಕರಣ ಮಾಡಿದ ಸ್ಥಳಗಳ ಐತಿಹಾಸಿಕ ಹೆಸರುಗಳನ್ನು ಕಂಡುಹಿಡಿಯಲು ಮತ್ತು ಮರುನಾಮಕರಣ ಆಯೋಗವನ್ನು ರಚಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿ ವಕೀಲ ಅಶ್ವಿನಿ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
"ಅನಾಗರಿಕ ವಿದೇಶಿ ಆಕ್ರಮಣಕಾರರ" ಹೆಸರಿಡಲಾಗಿದೆ ಎಂದು ಹೇಳಿರುವ ನಗರಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಮರುನಾಮಕರಣ ಮಾಡುವ ಕುರಿತು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಕೆಲವು ಕಠಿಣ ಟೀಕೆಗಳನ್ನು ಮಾಡಿದೆ.

'ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಅದರ ಮೌಲ್ಯವನ್ನು ಕಡಿಮೆ ಮಾಡಬೇಡಿ. ಭಾರತ ಇಂದು ಜಾತ್ಯತೀತ ರಾಷ್ಟ್ರವಾಗಿದೆ, ಆದ್ದರಿಂದ ಇಡೀ ಜಗತ್ತು ಯಾವಾಗಲೂ ನಮ್ಮತ್ತ ನೋಡುತ್ತದೆ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದೇನೆ. ನೀವು ಅದರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಿ, ಬದಲಾಗಿ ನಿರ್ಧಿಷ್ಟ ಉದ್ದೇಶಕ್ಕಾಗಿ ಅದನ್ನು ಬಳಸಬೇಡಿ'' ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.
ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದನ್ನು ಮೊದಲು ಪರಿಹರಿಸಬೇಕು. ಭಾರತೀಯರು ತಮ್ಮ ನಡುವೆಯೇ ಹೋರಾಡುವುದನ್ನು ಖಚಿತಪಡಿಸಿಕೊಳ್ಳಲು ಬ್ರಿಟಿಷರು ಅನುಸರಿಸಿದ ಒಡೆದು ಆಳುವ ನೀತಿಯನ್ನು ಎತ್ತಿ ತೋರಿಸಿದ ನ್ಯಾ. ಬಿ.ವಿ ನಾಗರತ್ನ, ತಮ್ಮ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ನಾವು ಒಟ್ಟಿಗೆ ಬದುಕಲು ಸಾಧ್ಯವಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯು ನಮ್ಮ ಸಮಾಜದಲ್ಲಿ ಒಡಕು ತಂದಿದೆ. ನಾವು ಅದನ್ನು ಮರಳಿ ತರಬಾರದು. ಇದರಲ್ಲಿ ಧರ್ಮವನ್ನು ಎಳೆದು ತರಬಾರದು ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಒಂದು ರಾಷ್ಟ್ರವು ತನ್ನ ಗತಕಾಲದ ಕೈದಿಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಇತ್ಯಾರ್ಥಪಡಿಸಿದೆ ಎಂದು ಹೇಳಿದರು.












Click it and Unblock the Notifications