ಸಲಿಂಗಿಗಳಿಗೆ ಸದ್ಯಕ್ಕೆ ಸಿಹಿ ಸುದ್ದಿ ನೀಡಿದ ಸುಪ್ರೀಂಕೋರ್ಟ್

Posted By:
Subscribe to Oneindia Kannada

ನವದೆಹಲಿ, ಫೆ. 2: ಇಂಡಿಯನ್ ಪೀನಲ್ ಕೋಡ್ ನ 377 ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ನಡೆಯಿತು. ಈ ಪ್ರಕರಣದ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್, ವಿಚಾರಣೆಯನ್ನು ನಡೆಸುವಂತೆ ಐದು ಜಡ್ಜ್ ಗಳ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ.

ಎಲ್ ಜಿಬಿಟಿ ಕಾರ್ಯಕರ್ತರ ಪರ ನಾಜ್ ಫೌಂಡೇಷನ್ ಸರ್ಕಾರೇತರ ಸಂಸ್ಥೆ ಹಾಗೂ ಚಿತ್ರಕರ್ಮಿ ಶ್ಯಾಮ್ ಬೆನಗಲ್ ಅವರು ಕ್ಯೂರೇಟರ್ ಅರ್ಜಿ ಸಲ್ಲಿಸಿ,2013ರ ಡಿಸೆಂಬರ್ ನಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಈಗ ಕಾನೂನು ಹೋರಾಟ ಮುಂದುವರೆಯಲಿದೆ.[ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ]

SC refers Section 377 to a five-judge bench

ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್, ಎನಿಲ್ ಆರ್ ದಾವೆ ಹಾಗೂ ಜಗದೀಶ್ ಸಿಂಗ್ ಕೆಹಾರ್ ಅವರಿದ್ದ ನ್ಯಾಯಪೀಠ ಮಂಗಳವಾರ ಕ್ಯೂರೇಟಿವ್ ಅರ್ಜಿ ವಿಚಾರಣೆ ನಡೆಸಿ ಐದು ಜಡ್ಜ್ ಗಳಿರುವ ನ್ಯಾಯಪೀಠಕ್ಕೆ ವರ್ಗಾಯಿಸಿದರು. ಈ ಅರ್ಜಿ ಸೇರಿದಂತೆ ಒಟ್ಟಾರೆ 8 ಕ್ಯೂರೇಟಿವ್ ಅರ್ಜಿ ಗಳು ವಿಚಾರಣೆಗೆ ಬಾಕಿಯಿವೆ.[ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್]

ಡಿಸೆಂಬರ್ 11, 2013ರಂದು ಸುಪ್ರೀಮ್ ಕೋರ್ಟ್,ದೆಹಲಿ ಹೈ ಕೋರ್ಟಿನ ತೀರ್ಪೊಂದನ್ನು ತಳ್ಳಿಹಾಕಿ, ಇಂಡಿಯನ್ ಪೀನಲ್ ಕೋಡ್ ನ 377 ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಕಾನೂನು ಬಾಹಿರ ಎಂದು ಘೋಷಿಸಿತ್ತು. ಜೊತೆ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು.[ಜಾಹೀರಾತು: ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ]

ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಅನ್ನು ತೆಗೆದುಹಾಕುವ ಅಧಿಕಾರ ಸಂಸತ್ತಿಗಿದೆ. ಆದರೆ, ಆ ನಿಯಮವನ್ನು ಸಂಸತ್ತು ರದ್ದು ಮಾಡುವವರೆಗೆ ಈ ಬಗೆಯ ಲೈಂಗಿಕ ಸಂಬಂಧಕ್ಕೆ ಕಾನೂನಿನ ಮಾನ್ಯತೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಖಡಾಖಂಡಿತವಾಗಿ ಹೇಳಿತ್ತು.

What is Curative Plea ?:
The concept of Curative petition was evolved by the Supreme Court of India in the matter of Rupa Ashok Hurra vs. Ashok Hurra and Anr. (2002) where the question was whether an aggrieved person is entitled to any relief against the final judgement/order of the Supreme Court, after dismissal of a review petition.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a major relief for LGBT(Lesbians, Gay, Bi Sexual and Transgender) rights activists, the Supreme Court on Tuesday(Feb 02) referred the matter pertaining to scrapping of Section 377 to a five-judge bench.
Please Wait while comments are loading...