ಶಬರಿಮಲೆಗೆ ಮಹಿಳೆ ಪ್ರವೇಶ ನಿಷಿದ್ಧ ಏಕೆ? ಸುಪ್ರೀಂ ಪ್ರಶ್ನೆ

Subscribe to Oneindia Kannada

ನವದೆಹಲಿ, ಜನವರಿ, 11: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಸಂವಿಧಾನಿಕ. ಮಹಿಳೆಯರ ಪ್ರವೇಶವನ್ನು ಯಾರೂ ತಡೆಯಬಾರದು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಈ ಬಗ್ಗೆ ಕೇರಳ ಸರ್ಕಾರದಿಂದ ವಿವರಣೆಯನ್ನು ಕೇಳಿದೆ.

ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿ ಅಫಿಡವಿಟ್ ಸಲ್ಲಿಸಿ ಎಂದು ಕೇರಳ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. ಇಂಡಿಯನ್ ಯುವ ವಕೀಲರ ಅಸೋಸಿಯೇಶನ್ ಸಲ್ಲಿಸಿದ್ದ ದೂರನ್ನು ಪರಿಗಣಿಸಿ ಸುಪ್ರೀಂ ಈ ಅಭಿಪ್ರಾಯ ವ್ಯಕ್ತಪಡಿಸಿದೆ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

supreme court

ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಾಡಲು ಸಾಧ್ಯವಿಲ್ಲ. ಧರ್ಮದ ಆಧಾರದಲ್ಲಿ ಪ್ರವೇಶ ನೀಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬಹುದು. ಈ ಸಂಗತಿಯನ್ನು ಮತ್ತೆ ಫೆಬ್ರವರಿ 8 ರಂದು ವಿಚಾರಣೆ ಮಾಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.[ಸ್ವಾಮಿಯೇ ಅಯ್ಯಪ್ಪ, ಭಕ್ತಿ ಪರವಶತೆಯ ಮಹಾಪೂರ]

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎನ್ ವಿ ರಾಮಣ್ಣ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಸಮಾಜಕ್ಕೆ ಸೇರಿದ ದೇವಾಲಯ ಯಾರಿಗೂ ಪ್ರವೇಶ ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹಿಂದೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಜಯಮಾಲಾ 'ನಾನು ಅಯ್ಯಪ್ಪ ಸ್ವಾಮಿ ಪಾದ ಮುಟ್ಟಿದ್ದೆ' ಎಂದು ನೀಡಿದ್ದ ಹೇಳಿಕೆ ವಿವಾದ ಎಬ್ಬಿಸಿತ್ತು.

ಋತುಮತಿಯಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಯಾರ್ ಗೋಪಾಲಕೃಷ್ಣನ್‌ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 'ಹ್ಯಾಪಿ ಟು ಬ್ಲಡ್ ' ಎಂಬ ಅಭಿಯಾನವೇ ಆರಂಭವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Monday questioned the age-old tradition of banning entry of women of menstrual age group in historic Sabarimala temple in Kerala, saying it cannot be done under the Constitution. "The temple cannot prohibit entry (women), except on the basis of religion.
Please Wait while comments are loading...